ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸಿಎ ವೇದಿಕೆಯಲ್ಲಿ ಜಯಶ್ರೀ ‘ಬಣ್ಣದ ಬದುಕಿನ ಚಿನ್ನದ ಹಾಡುಗಳು’

By Staff
|
Google Oneindia Kannada News

ಕನ್ನಡ ರಂಗಭೂಮಿಯ ಅನನ್ಯ ಪ್ರತಿಭೆ ಬಿ.ಜಯಶ್ರೀ ಈಗ ಅಮೆರಿಕ ಪ್ರವಾಸದಲ್ಲಿದ್ದಾರೆ. ಕನ್ನಡ ವೃತ್ತಿಪರ ರಂಗಭೂಮಿಯ ಪ್ರಾತಃಸ್ಮರಣೀಯರಾದ ಗುಬ್ಬಿ ವೀರಣ್ಣನವರ ಮೊಮ್ಮಗಳು ಬಿ.ಜಯಶ್ರೀ- ತಮ್ಮ ಗಡುಸು ಕಂಠಕ್ಕೆ ಹಾಗೂ ಅದ್ಭುತ ಅಭಿನಯಕ್ಕೆ ಹೆಸರಾದವರು. ರಾಜ್ಯ ಪ್ರಶ ಸ್ತಿ , ರಾಷ್ಟ್ರ ಪ್ರಶಸ್ತಿಗಳಿಂದ ಪುರಸ್ಕೃತರಾದ ಬಿ.ಜಯಶ್ರೀ ಸೆಪ್ಟಂಬರ್‌ 28 ರ ಶನಿವಾರ ಕರ್ನಾಟಕ ಸಾಂಸ್ಕೃತಿಕ ಸಂಘ (ಕೆಸಿಎ)ದ ಅತಿಥಿ. ಸಂಜೆ 6 ಗಂಟೆಗೆ ಕೆಸಿಎ ವೇದಿಕೆಯಲ್ಲಿ ಜಯಶ್ರೀ ಅವರ ಏಕ ಪಾತ್ರಾಭಿನಯ ಕಾರ್ಯಕ್ರಮ ನಡೆಯಲಿದೆ. ಸ್ಥಳ : Troy High School in Fullerton.

‘ಬಣ್ಣದ ಬದುಕಿನ ಚಿನ್ನದ ಹಾಡುಗಳು’ ಎನ್ನುವ ಏಕ ಪಾತ್ರಾಭಿನಯ ಕಾರ್ಯಕ್ರಮವನ್ನು ಜಯಶ್ರೀ ಅವರು ರಂಗ ಸಂಗೀತದ ಹಿನ್ನೆಲೆಯಲ್ಲಿ ರೂಪಿಸಿದ್ದಾರೆ. ಕಳೆದ ನೂರು ವರ್ಷಗಳಲ್ಲಿ ಗುಬ್ಬಿ ವೀರಣ್ಣನವರಿಂದ ಬಿ.ವಿ.ಕಾರಂತರವರೆಗೆ ರಂಗ ಸಂಗೀತ ಸಾಗಿಬಂದ ದಾರಿಯ ಅವಲೋಕನ ಈ ಕಾರ್ಯಕ್ರಮದ ಮುಖ್ಯ ಉದ್ದೇಶ.

ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ದಾರಿ : 91 Freeway Exit State College Blvd, Go North on State College Blvd, Go past Chapman Avenue, Make left on Dorothy Lane. Make left to Parking Lot The place is called Center for performing arts or Lecture hall 57 Freeway: Exit Chapman ave, Go West on Chapman, make right on State College Blvd and turn left on Dorothy Lane enter the parking lot on the left side.

ಜಯಶ್ರೀ ಅವರ ಸೆ.28ರ ಕಾರ್ಯಕ್ರಮದ ಹಿಂದೆ ಒಂದು ಸದುದ್ದೇಶವಿದೆ. ಭಾರತದಲ್ಲಿನ ‘ಭಾರತೀಯ ಸಾಂಸ್ಕೃತಿಕ ಪರಂಪರೆ ಪ್ರತಿಷ್ಠಾನ’ (ಐಸಿಎಚ್‌ಎಫ್‌) ಜಯಶ್ರೀ ಅವರ ಕಾರ್ಯಕ್ರಮದ ಫಲಾನುಭವಿ. ಈ ಕಾರ್ಯಕ್ರಮಕ್ಕೆ ನೀವು ನೀಡುವ ದೇಣಿಗೆಗೆ ತೆರಿಗೆ ವಿನಾಯಿತಿಯುಂಟು. India cultural Heritage foundation. ಹೆಸರಿಗೆ ಸಂದಾಯವಾಗುವಂತೆ ಚೆಕ್‌ಗಳನ್ನು ನೀಡಬಹುದು.

ಕಾರ್ಯಕ್ರಮದ ಬಗೆಗಿನ ಮಾಹಿತಿಗಳಿಗೆ ಬಿ.ಎನ್‌.ನಾಗರಾಜ್‌ ಅವರನ್ನು ಸಂಪರ್ಕಿಸಿ. ಇ-ಮೇಲ್‌ : [email protected] ದೂರವಾಣಿ : 714-441-1420. ಕಾರ್ಯಕ್ರಮದಲ್ಲಿ ಕಾಫಿ ಹಾಗೂ ಕುರುಕಲು ತಿಂಡಿ ಸರಬರಾಜು ಮಾಡಲಾಗುವುದು.

ಕೆಸಿಎ ಮುಂದಿನ ಕಾರ್ಯಕ್ರಗಳನ್ನು ನೋಟ್‌ ಮಾಡಿಕೊಳ್ಳಿ :

  1. ಅಕ್ಟೋಬರ್‌ 19 ರ ಶನಿವಾರ ಸಂಜೆ 7 ಗಂಟೆಗೆ ಡಾ. ಪಂಡಿತ್‌ ನಾಗರಾಜ್‌ ಹವಾಲ್ದಾರ್‌ ಸಂಗೀತ ಕಚೇರಿ. ಸ್ಥಳ- ವುಡ್‌ಲ್ಯಾಂಡ್ಸ್‌ ರೆಸ್ಟೋರೆಂಟ್‌.
  2. ಅಕ್ಟೋಬರ್‌ 26 ರ ಶನಿವಾರ ಸಂಜೆ 6 ಗಂಟೆಗೆ, ಲೇಕ್‌ವುಡ್‌ ಹೈಸ್ಕೂಲ್‌ನಲ್ಲಿ - ಪ್ರೊ.ನಿಸಾರ್‌ ಅಹಮದ್‌ ಅವರೊಂದಿಗೆ ಭೇಟಿ ಹಾಗೂ ಬಿ.ಕೆ.ಸುಮಿತ್ರ ಅವರ ಸಂಗೀತ ಕಾರ್ಯಕ್ರಮ.
  3. ನವಂಬರ್‌ 09 ರ ಶನಿವಾರ ಸಂಜೆ 5.30 ಕ್ಕೆ, ಹೂವರ್‌ ಮಿಡಲ್‌ ಸ್ಕೂಲ್‌ನಲ್ಲಿ ಕಾರ್ಯಕ್ರಮ. (ಹರೀಶ್‌ ಕುಮಾರ್‌ ಅವರನ್ನು ಸಂಪರ್ಕಿಸಿ- 714-423-3463.)
(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X