ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣ್ಯರು-ಅನಿವಾಸಿ ಕನ್ನಡಿಗರ ಕರೆದು ಆದರಿಸಿದ ‘ಹೃದಯವಾಹಿನಿ’

By Staff
|
Google Oneindia Kannada News

Rani Satish Honoring V.M.Kumara Swamy. Hridaya Vahini Editor K.P.Manjunath observes‘ಅಮೆರಿಕ ಕನ್ನಡ ಕೂಟಗಳ ಆಗರ’ (ಅಕ್ಕ) ದ ವಿ.ಎಂ.ಕುಮಾರಸ್ವಾಮಿ, ಉದ್ಯಮಿ ಎಸ್ಕೆ.ಹಳಿಯಂಗಡಿ, ಡಿವೈಎಫ್‌ಪಿ ಬಿ.ಪೀತಾಂಬರ ಹೆರಾಜೆ, ಮೂಡಬಿದರೆಯ ಆಳ್ವ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹಾಗೂ ದುಬೈನ ಬಿಲ್ಲವ ಬಳಗದ ಪ್ರಧಾನ ಸಂಚಾಲಕ ಸುಧಾಕರ ತುಂಬೆ ಅವರಿಗೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ‘ಹೃದಯವಂತರು’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ತನ್ನ ಮೂರನೇ ವಾರ್ಷಿಕೋತ್ಸವ ಸಂದರ್ಭದಲ್ಲಿ , ಸಮಾಜದ ವಿವಿಧ ಭಾಗಗಳಲ್ಲಿ ಹೆಸರು ಮಾಡಿದ ಗಣ್ಯರಿಗೆ 2001 ನೇ ಇಸವಿಯ ಹೃದಯವಂತರು ಪ್ರಶಸ್ತಿ ನೀಡುವ ಮೂಲಕ ‘ಹೃದಯ ವಾಹಿನಿ’ ಪತ್ರಿಕೆ ಗೌರವಿಸಿತು.

ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಸನ್ಮಾನಿಸುವುದು ಉತ್ತಮ ಸಂಪ್ರದಾಯ. ವಿದೇಶಗಳಲ್ಲಿ ನೆಲೆಸಿರುವವರನ್ನು ಕರೆತಂದು ಪುರಸ್ಕರಿಸುವ ಹೃದಯವಾಹಿನಿ ಪತ್ರಿಕೆಯ ಸಂಪಾದಕ ಕೆ.ಪಿ.ಮಂಜುನಾಥ್‌ ಅವರ ಸೇವೆ ಶ್ಲಾಘನೀಯ ಎಂದು ಪ್ರಶಸ್ತಿ ಪ್ರದಾನ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ಹೇಳಿದರು.

ಕನ್ನಡ ಭಾಷೆಯ ಬಗ್ಗೆ ಪ್ರತಿಯಾಬ್ಬರೂ ಅಭಿಮಾನ ಹೊಂದಿರಬೇಕು ಎಂದು ಕರೆ ನೀಡಿದ ರಾಣಿ ಸತೀಶ್‌, ಅನಿವಾಸಿ ಕನ್ನಡಿಗರು ಮಾತೃಭಾಷೆಯ ಬಗ್ಗೆ ಹೊಂದಿರುವ ಅಭಿಮಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರಜಾವಾಣಿ ಪತ್ರಿಕೆಯ ಮುಖ್ಯ ವರದಿಗಾರ ಇ.ವಿ.ಸತ್ಯನಾರಾಯಣ ಹಾಗೂ ಜನಪದ ಗಾಯಕ ಡಿ.ನಾರಾಯಣ ಸ್ವಾಮಿ ಅವರಿಗೆ 2001 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Sudhakar Tumbe receiving the awardಅಬಕಾರಿ ಇಲಾಖೆಯ ಶಿವಮೊಗ್ಗ ಜಿಲ್ಲಾ ಉಪ ಆಯುಕ್ತ ರೋಹಿದಾಸ್‌ ನಾಯಕ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬರೋಡ ಕನ್ನಡ ಸಂಘದ ಅಧ್ಯಕ್ಷ ದಯಾನಂದ ಬೋಂಟ್ರ, ಡಾ.ಪರಿಮಳಾ ದೇವಿ, ಬೆಂಗಳೂರು ದೂರದರ್ಶನ ಕೇಂದ್ರದ ಕಾರ್ಯ ನಿರ್ವಾಹಕ ನಿರ್ಮಾಣಾಧಿಕಾರಿ ಬಾನಂದೂರು ಕೆಂಪಯ್ಯ ಮತ್ತಿರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಾಗರದ ರಂಗಮಂಚ ಸಂಸ್ಥೆಯ ಅಧ್ಯಕ್ಷ ಕಾಗೋಡು ಅಣ್ಣಪ್ಪ ಹಾಗೂ ಮಂಗಳೂರಿನ ಕರಾವಳಿ ಕಾಲೇಜಿನ ಅಧ್ಯಕ್ಷ ಗಣೇಶರಾವ್‌ ಹೃದಯವಾಹಿನಿ ಕೊಡುಗೆ ಬಹುಮಾನ ವಿತರಿಸಿದರು. ಸಾಗರದ ಗೌತಮೇಶ್ವರ ಯುವಕ ಸಂಘದ ಸದಸ್ಯರು ಡೊಳ್ಳು ಕುಣಿತದ ಮೂಲಕ ಅತಿಥಿಗಳನ್ನು ವೇದಿಕೆಗೆ ಸ್ವಾಗತಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X