• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕಾವೇರಿ’ಯ ಅಂಗಳದಲ್ಲಿ ವಿಶ್ವ ಕನ್ನಡಿಗರ ಪ್ರತಿನಿಧಿ

By Staff
|

*ಡಿ.ಎನ್‌.ರಾಜಶೇಖರ್‌, ವಾಷಿಂಗ್ಟನ್‌ ಡಿಸಿ

Sridhar sitting with Shamದಟ್ಸ್‌ಕನ್ನಡ ಡಾಟ್‌ ಕಾಂ ಹಾಗೂ ಕೊಂಡು ಓದುವವರಿಗಾಗಿ ಇರುವ ‘ಸೂಜಿಮಲ್ಲಿಗೆ’ ಪಾಕ್ಷಿಕದ ಸಂಪಾದಕ ಎಸ್‌.ಕೆ.ಶಾಮಸುಂದರ ಅವರ ಜೊತೆ ಅನೌಪಚಾರಿಕ ಸಂವಾದ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಬಂದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಮೇರಿಲ್ಯಾಂಡ್‌, ವರ್ಜಿನಿಯಾ ಪ್ರದೇಶದ ವಾಷಿಂಗ್ಟನ್‌ನ ಕಾವೇರಿ ಕನ್ನಡ ಕೂಟ ಸೆಪ್ಟೆಂಬರ್‌ 18ನೇ ತಾರೀಖು ಈ ಕಾರ್ಯಕ್ರಮವನ್ನು ಮದ್ರಾಸ್‌ ಪ್ಯಾಲೇಸ್‌ ರೆಸ್ಟೋರೆಂಟ್‌ನಲ್ಲಿ ಆಯೋಜಿಸಿತ್ತು. ಕೆಲಸದ ದಿನವಾದರೂ ಸಮಾರಂಭಕ್ಕೆ ಸಾಕಷ್ಟು ಜನ ಬಂದಿದ್ದರು. ಕಾವೇರಿಯ 9 ಮಾಜಿ ಹಾಗೂ ಹಾಲಿ ಅಧ್ಯಕ್ಷರ ಹಾಜರಿ ಇದ್ದುದು ‘ಕಾವೇರಿ’ಗೆ ಗೌರವ. ಸಿನಿಮಾ ನಟ ಮತ್ತು ನೃತ್ಯ ಪಟು ಶ್ರೀಧರ್‌ ಹಾಗೂ ಇವರ ಪತ್ನಿ ನೃತ್ಯಗಾರ್ತಿ ಅನುರಾಧ, ಹೆಸರಾಂತ ಗಾಯಕಿಯರಾದ ರತ್ನಮಾಲ ಪ್ರಕಾಶ್‌, ಮಾಲತಿ ಶರ್ಮ ಮತ್ತು ಬಿ.ಕೆ.ಸುಮಿತ್ರ- ಇವರೆಲ್ಲರು ಸಮಾರಂಭ ಕಳೆಗಟ್ಟಲು ಕಾರಣರಾಗಿದ್ದರು.

ಡಾ. ಮೈಸೂರು ನಟರಾಜ ಅವರು ಮುಖ್ಯ ಅತಿಥಿಯ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಮಾತಾಡಿದ ಶಾಮಸುಂದರ, ದಟ್ಸ್‌ಕನ್ನಡ ಡಾಟ್‌ ಕಾಂ ಬೆಳೆದು ಬಂದ ಪರಿ ಮತ್ತು ಉಳಿವಿಗೆ ನಡೆಸುತ್ತಿರುವ ಶ್ರಮವನ್ನು ತೋಡಿಕೊಂಡರು. ಕೊಂಡು ಓದುವವರಿಗಾಗಿ ಇರುವ ಪಾಕ್ಷಿಕ ‘ಸೂಜಿಮಲ್ಲಿಗೆ’ ಬಗೆಗೂ ವಿವರಿಸಿ, ಕೊಂಡು ಓದುವಂತೆ ಕನ್ನಡಿಗರಲ್ಲಿ ಮನವಿ ಮಾಡಿಕೊಂಡರು.

ಯಾವುದೇ ಔಪಚಾರಿಕ ಭಾಷಣದ ದಾಟಿಯಲ್ಲಿರದ ಶಾಮ್‌ ಮಾತು, ಲವಲವಿಕೆಯಾಗಿದ್ದು ಮನರಂಜನೆಯನ್ನೂ ಕೊಟ್ಟಿತು. ಸಮಾರಂಭದಲ್ಲಿದ್ದ ಕನ್ನಡಿಗರು ಶಾಮ್‌ ಮನವಿಗೆ ಸ್ಪಂದಿಸುವ ಭರವಸೆ ಕೊಟ್ಟರು. ಊಟದ ನಡುವೆಯೂ ಶಾಮ್‌ ಜೊತೆ ಕನ್ನಡಿಗರ ವಿಚಾರ ವಿನಿಮಯ ಸಾಗೇ ಇತ್ತು.

‘ಕಾವೇರಿ’ ಅಧ್ಯಕ್ಷ ರವಿ ಡೆಂಕಣಿಕೋಟೆ ಸಣ್ಣ ಉಡುಗೊರೆ ಕೊಡುವುದರ ಮೂಲಕ ಶಾಮಸುಂದರ ಅವರನ್ನು ಸನ್ಮಾನಿಸಿದರು. ಕಾವೇರಿ ಕನ್ನಡ ಸಂಘಕ್ಕೆ ದಟ್ಸ್‌ಕನ್ನಡ ಡಾಟ್‌ ಕಾಂ ಹಾಗೂ ಇಂಡಿಯಾಇನ್ಫೋ ಡಾಟ್‌ ಕಾಂ ಬಳಗದ ಸಿಇಓ ಬಿ.ಜಿ.ಮಹೇಶ್‌ ನೀಡುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದ ಹೇಳಿದರು.

ಸಮಾರಂಭದ ಮಧುರ ಕ್ಷಣಗಳನ್ನು

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X