• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿ ಕನ್ನಡ ಸಂಘದಿಂದ ಪುತ್ತೂರು ನರಸಿಂಹನಾಯಕ್‌ ಕಚೇರಿ

By Staff
|

ಹೊಸಿತಿಲಲ್ಲಿರುವ ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಕರ್ನಾಟಕದ ಕಲಾವಿದರು ಲಗೇಜು ಸಿದ್ಧಪಡಿಸುತ್ತಿರುವ ಈಹೊತ್ತು - ನಾಡಿನ ಪ್ರಸಿದ್ಧ ಗಾಯಕ ಪುತ್ತೂರು ನರಸಿಂಹನಾಯಕ್‌ ಅಮೆರಿಕಾ ಪ್ರವಾಸದಲ್ಲಿದ್ದಾರೆ. ವಿಶ್ವ ಮಾಧ್ವ ಸಂಘ ಹಾಗೂ ವಾಷಿಂಗ್ಟನ್‌ ಡಿಸಿ ಯಲ್ಲಿಯ ಹರಿದಾಸ ಸಂಗೀತ ಪ್ರೇಮಿಗಳು ‘ಕಾವೇರಿ ಕನ್ನಡ ಸಂಘ’ದ ಆಶ್ರಯದಲ್ಲಿ ನರಸಿಂಹ ನಾಯಕರ ಸಂಗೀತ ಕಚೇರಿ ಏರ್ಪಡಿಸಿದ್ದಾರೆ.

ಜುಲೈ 28 ರ ಭಾನುವಾರ ಸಂಜೆ 4.30 ಕ್ಕೆ ಕಾರ್ಯಕ್ರಮ ಶುರು. ರಾತ್ರಿ 7.30ರವರೆಗೂ ದೇವರನಾಮ ಧಾರೆ ಧಾರೆ !

ಚಿನ್ಮಯ ಮಿಷನ್‌ ಆಡಿಟೋರಿಯಂನಲ್ಲಿ ಕಚೇರಿ ನಡೆಯಲಿದೆ. ವಿಳಾಸ: 46 Norwood Road, Silver Spring MD, 20905

ಪುತ್ತೂರು ನರಸಿಂಹನಾಯಕರ ಕಂಠದಿಂದ ದೇವರ ನಾಮಗಳನ್ನು ಕೇಳುವುದೇ ಒಂದು ಹಬ್ಬ. ಹರಿದಾಸರ ಕೀರ್ತನೆಗಳನ್ನಂತೂ ನಾಯಕರು ಎದೆತುಂಬಿ ಹಾಡುತ್ತಾರೆ. ದೇವದಾಸ್‌ ನಾಯಕರಲ್ಲಿ ಸಂಗೀತ ಕಲಿತ ನರಸಿಂಹನಾಯಕರು- 5 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಕೆಸೆಟ್‌ಗಾಗಿ ಹಾಡಿದ ಕರ್ನಾಟಕದ ಪ್ರಥಮ ಗಾಯಕ ಎನ್ನುವ ಅಗ್ಗಳಿಕೆ ಹೊಂದಿದ್ದಾರೆ. ಅದೇರೀತಿ ಹೆಚ್ಚು ಸೋಲೋ ಆಲ್ಬಂಗಳಲ್ಲಿ ಹಾಡಿರುವ ಕೀರ್ತಿಯೂ ಅವರದೇ.

ಕನ್ನಡ ಮಾತ್ರವಲ್ಲ - ತುಳು, ಹಿಂದಿ, ಕೊಂಕಣಿ, ಇನ್ನಿತರೆ ಭಾರತೀಯ ಭಾಷೆಗಳಲ್ಲೂ ನರಸಿಂಹ ನಾಯಕರು ಹಾಡಬಲ್ಲರು. ನಾಯಕರ ಸಂಗೀತ ಕಚೇರಿಯೆಂದರೆ ಅದು ಅಪರೂಪದಲ್ಲಿ ಅಪರೂಪ ಅನ್ನುವಂಥ ಅವಕಾಶ. ಮಿಸ್‌ ಮಾಡಿಕೊಳ್ಳಬೇಡಿ !

ಕಾರ್ಯಕ್ರಮ ನಡೆಯುವ ಸ್ಥಳವನ್ನು ತಲುಪಲು ಕೈ ಕಂಭಗಳು ಇಲ್ಲಿವೆ :
Take Exit 28 North from I495 (Capital Beltway, to New Hampshire Avenue
(Rt.650) (towards White Oak). Drive approximately 6 miles. Make a left on light to Norwood Road. Kailas Niwas is the 4th house on the left.
Website:


ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more