ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸಿಎಯಲ್ಲಿ ಮಕ್ಕಳ ದಿನಾಚರಣೆಗೆ ತಯಾರಿ

By Staff
|
Google Oneindia Kannada News

ಕೆಸಿಎಯಲ್ಲಿ ಮಕ್ಕಳ ದಿನಾಚರಣೆಯ ತಯಾರಿ ಶುರುವಾಗಿದೆ, ಜೋರಾಗಿಯೂ ಇದೆ. ಮುದ್ದು ಮುದ್ದು ಮಕ್ಕಳ ಸುಂದರ ಸಮಾರಂಭ ನವೆಂಬರ್‌ 9ರಂದು ಲೇಕ್‌ವುಡ್‌ನ ಹೂವರ್‌ ಜೂನಿಯರ್‌ ಸ್ಕೂಲ್‌ನಲ್ಲಿ ನಡೆಯಲಿದೆ.

ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡದ ಮಕ್ಕಳೆಲ್ಲ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇದು ಚಿಣ್ಣರ ಮೇಳ. ಸುಮಾರು ಎರಡೂವರೆ ಗಂಟೆ ಅವಧಿಯ ಮಕ್ಕಳ ದಿನಾಚರಣೆ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕಾಗಿಯೇ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಐದು ವಲಯಗಳನ್ನು ರಚಿಸಲಾಗಿದೆ.

ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗೊಂದು ವೇದಿಕೆಯಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪಾಲಕರು ವಲಯಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಮಕ್ಕಳ ಹೊಸ ಪ್ರತಿಭೆಯ ಬಗ್ಗೆ ತಿಳಿಸಬಹುದು.

ವಲಯಾಧಿಕಾರಿಗಳು ಮತ್ತು ಅವರ ದೂರವಾಣಿ ಸಂಖ್ಯೆ :

  1. ಟೊರಾನ್ಸ್‌ ಪ್ರದೇಶ - ನಾಗನ ಗೌಡ : (310) 7823-569
  2. ಡೈಮಂಡ್‌ ಬಾರ್‌ ವಲಯ- ವಲ್ಲೀಶ ಶಾಸ್ತ್ರಿ: (909) 5979-394
  3. ಸಾನ್‌ ಫರ್ನಾಂಡೋ ಪ್ರದೇಶ - ಸರಸ್ವತಿ ಬ್ರಹ್ಮಧಾಮ: (818) 3639-387
  4. ಸೆರಿಟೋಸ್‌, ಇರ್ವಿನ್‌- ಸಬಿತಾ ಹೆಬ್ಬಾರ್‌ : (562) 8656-542
  5. ಸೆರಿಟೋಸ್‌, ಇರ್ವಿನ್‌- ಧಾರಿಣಿ ದೀಕ್ಷಿತ್‌ : (562) 9478-752
  6. ಸೆರಿಟೋಸ್‌, ಇರ್ವಿನ್‌- ಈಶ್ವರಿ ರಾವ್‌ : (949) 6540-807

ಕಾರ್ಯಕ್ರಮವಷ್ಟೂ ಕನ್ನಡದಲ್ಲಿಯೇ ಇರುತ್ತದೆ. ಮಕ್ಕಳ ಕಾರ್ಯಕ್ರಮ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು. ದೀರ್ಘ ಕಾರ್ಯಕ್ರಮಗಳ ನಡುವೆ ನಾಲ್ಕೈದು ನಿಮಿಷದ ಚಿಕ್ಕ ಕಾರ್ಯಕ್ರಮಗಳಿಗೂ ಅವಕಾಶ ಇರುತ್ತದೆ. ಈ ಬಗ್ಗೆ ಆಯೋಜಕರೊಂದಿಗೆ ಪಾಲಕರು ಮುಂಚಿತವಾಗಿಯೇ ಚರ್ಚಿಸಬೇಕು. ಆದಷ್ಟು ಹೆಚ್ಚು ಮಕ್ಕಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡುವುದು ಆಯೋಜಕರ ಉದ್ದೇಶ.

ಸರಿ ಮತ್ತೆ, ಕಾರ್ಯಕ್ರಮ ನೀಡಲು ನೀವು ರೆಡಿಯಾ....? ರೆಡಿಯಾಗಿರುವ ಮಕ್ಕಳಿಗೆಲ್ಲಾ ಗುಡ್‌ಲಕ್‌ !

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X