• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಾಂಕೂವರ್‌ ಕನ್ನಡಿಗರ ಮಿಲನಕ್ಕೆದಸರೆ ಚಪ್ಪರ

By Staff
|

*ಪ್ರಶಾಂತ್‌ ಬಿಚಗತ್ತಿ

Prashant Bichagatti, the authorವ್ಯಾಂಕೂವರ್‌ನಲ್ಲಿ ಕನ್ನಡಿಗರ ಮಿಲನಕ್ಕೆ ಈ ಬಾರಿ ದಸರೆಯ ವೇದಿಕೆ. ಮೊದಲ ಬಾರಿಗೆ ಸುಮಾರು 75ಕ್ಕೂ ಹೆಚ್ಚು ಮಂದಿ ಕನ್ನಡ ಮಂದಿ ಒಂದೆಡೆ ಸೇರಿದ್ದರು. ಲೋಖ್ಡಾಲೆ ಹಾಲ್‌ನಲ್ಲಿ ಅಕ್ಟೋಬರ್‌ 20 ಭಾನುವಾರ ಸಂಜೆ ಕನ್ನಡ ಕಲರವ. ಕಾರ್ಯಕ್ರಮ ಶುರುವಾದದ್ದೇ ಪ್ರತಿಯಾಬ್ಬರ ಪರಿಚಯದೊಂದಿಗೆ.

ಒಬ್ಬರಿಗೊಬ್ಬರು ಪರಿಚಯಿಸಿಕೊಂಡ ಮೇಲೆ ಶಾಸ್ತ್ರೀಯ ಕಾರ್ಯಕ್ರಮಗಳು. ಶ್ಲೋಕ, ಭಜನೆ, ಕೀರ್ತನೆಗಳ ಜೊತೆಗೆ ಪ್ರೀತಿಯ ಜಾನಪದ ಪದ್ಯಗಳೂ ಹಾಡಾದವು. ಕನ್ನಡ, ಸಂಸ್ಕೃತದ ಹಾಡುಗಳ ಜೊತೆಗೆ ಕೆನಡಾ ಫ್ಲೇವರ್‌ ಹಚ್ಚಿದ್ದು ಪಿಯಾನೋ.

ಹಾಡುಗಳ ನಂತರ ಮಕ್ಕಳು ತಮ್ಮ ಪುಟಾಣಿ ಪ್ರತಿಭೆಗಳಿಂದ ಕಾರ್ಯಕ್ರಮಕ್ಕೆ ಸಂಭ್ರಮ ತುಂಬಿದರು. ಸಂಗೀತ ಕುರ್ಚಿ ಆಟ, ಚೀಟಿ ಎತ್ತಿ ಅಭಿನಯಿಸುವ, ಹಾಡುವ, ಜೋಕ್‌ ಮಾಡುವ ಅನೌಪಚಾರಿಕ ಕಾರ್ಯಕ್ರಮಗಳು ಸೇರಿದ್ದ ಕನ್ನಡಿಗರು ಪರಸ್ಪರ ಇನ್ನಷ್ಟು ಆತ್ಮೀಯರಾಗುವ ಹಾಗೆ ಮಾಡಿತು.

ಅಷ್ಟು ಹೊತ್ತಿಗೆ ಸಂಜೆ ಮುಗಿಯುತ್ತಾ ಬಂದಿತ್ತು. ರಾತ್ರಿ ಊಟಕ್ಕೆ ರೆಡಿಯಾಗುವ ಮುನ್ನ ಕೆನಡಾ ಕನ್ನಡಿಗರು ಅನುಭವಗಳನ್ನು ಸೇರಿದ್ದ ಗುಂಪಿನೊಡನೆ ಹಂಚಿಕೊಂಡರು. ಅವತ್ತಿನ ಕಾರ್ಯಕ್ರಮದಲ್ಲಿ ತಮಗೆ ಹಿಡಿಸಿದ ವಿಚಾರಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕನ್ನಡದ ಪರಿಮಳ ಬೀರುವ ರಾತ್ರಿಗೆ ಕರ್ನಾಟಕದ ಊಟದ ಸೊಗಡಿನ ಸಿಂಚನ. ಸೇರಿದ್ದ ಕನ್ನಡಿಗರಿಗೆ ಕನ್ನಡ ವಾತಾವರಣದಲ್ಲಿ ಕರ್ನಾಟಕದ ಖಾದ್ಯ ಮೆಲ್ಲುವ ಖುಷಿ . ಒಟ್ಟಿನಲ್ಲಿ ಈ ಪುಟ್ಟ ಮಿಲನದುದ್ದಕ್ಕೂ ಕನ್ನಡಿಗರ ಪರಸ್ಪರ ಪರಿಚಯ, ಪ್ರತಿಭೆಗಳಿಗೆ ಬೆಳಕು ಹಾಗೂ ಹಬ್ಬದ ವಾತಾವರಣದ ಸೊಬಗು.

ಕಾರ್ಯಕ್ರಮದ ಫೋಟೋ ಗ್ಯಾಲರಿಗಾಗಿ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X