ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ರಾಮಾಯಣ ಮಹಾನ್ವೇಷಣಂ... ಖುದ್ದು ಮೊಯಿಲಿ ಹೇಳುತ್ತಾರೆ..

By Staff
|
Google Oneindia Kannada News

Cover page of Ramayana Mahanveshanam ‘ರಾಮಾಯಣ ಮಹಾನ್ವೇಷಣಂ’ನಲ್ಲಿ ಏನಿದೆ? ಅದರ ಕಥಾ ನಾಯಕ ರಾಮನೇ, ಅಲ್ಲವೇ?- ಇಂಥಾ ಇನ್ನೂ ಹಲವು ಪ್ರಶ್ನೆಗಳಿದ್ದರೆ ಜೂನ್‌ 1ರಂದು ಕ್ಯಾಲಿಫೋರ್ನಿಯಾದಲ್ಲಿ ಉತ್ತರ ಲಭ್ಯ. ‘ರಾಮಾಯಣ ಮಹಾನ್ವೇಷಣಂ’ ಕರ್ತೃ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಖುದ್ದು ತಮ್ಮ ಈ ಕೃತಿಯ ಬಗ್ಗೆ ಮಾತಾಡಲಿದ್ದಾರೆ.

ಸಾಹಿತ್ಯ ವಲಯದಲ್ಲಿ ಈ ಕೃತಿಗೆ ಈಗಾಗಲೇ ಶಹಬ್ಭಾಸ್‌ಗಿರಿ ಸಿಕ್ಕಿದೆ. ಕವಿ ಡಾ. ಎಚ್‌.ಎಸ್‌.ಶಿವಪ್ರಕಾಶ್‌ ಹೇಳುವಂತೆ- ಕನ್ನಡದಲ್ಲಿ ಕುವೆಂಪು ಅವರ ರಾಮಾಯನ ದರ್ಶನಂ ನಂತರದ ಅದ್ಭುತ ಮಹಾಕಾವ್ಯವಿದು. ಲಕ್ಷ್ಮಣ ಇದರ ನಾಯಕ. ವೀರಪ್ಪ ಮೊಯಿಲಿ ರಾಜಕಾರಣವನ್ನು ಹಾಸಿ, ಹೊದ್ದುಕೊಂಡು ಮಲಗಿದ್ದವರಾದರೂ, ಅವರ ಹೃದಯದಲ್ಲಿ ಕವಿ ಸದಾ ಜಾಗೃತ!

ಒಂದು ಮಹಾಕಾವ್ಯದ ಬಗ್ಗೆ ಖುದ್ದು ಕರ್ತೃವಿನಿಂದ ಉಪನ್ಯಾಸ ಕೇಳುವ ಸದವಕಾಶ ಮಾಡಿಕೊಡುತ್ತಿರುವುದು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ. ಅದು ಉಪನ್ಯಾಸ ಕಾರ್ಯಕ್ರಮವೂ ಹೌದು, ಸಾಹಿತ್ಯ ಗೋಷ್ಠಿಯೂ ಹೌದು.

ಕಾರ್ಯಕ್ರಮದ ರೂಪುರೇಷೆ ಹೀಗಿದೆ...

ಜೂನ್‌ 1, ಶನಿವಾರ ಮಧ್ಯಾಹ್ನ 3 ರಿಂದ 5.30ರವರೆಗೆ ಮೊಯಿಲಿ ಅವರೊಡನೆ ಕಾಲ ಕಳೆಯಬಹುದು.
ಸ್ಥಳ- ಸನ್ನಿವೇಲ್‌ನ ಹಿಂದೂ ದೇವಾಲಯ, 420-450, ಪರ್ಷಿಯನ್‌ ಡ್ರೆೃವ್‌, ಸನ್ನಿವೇಲ್‌, ಕ್ಯಾಲಿಫೋರ್ನಿಯಾ- 94086.

  • ಕಾರ್ಯಕ್ರಮದಲ್ಲಿ...
  • ಉಪನ್ಯಾಸ- ರಾಜ್ಯ ತೆರಿಗೆ ಆಯೋಗ ಸುಧಾರಣಾ ಆಯೋಗದ ಅಧ್ಯಕ್ಷರಾದ ಎಂ.ವೀರಪ್ಪ ಮೊಯಿಲಿಯವರಿಂದ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಕೃತಿಯ ಬಗ್ಗೆ.
  • ಸಾಹಿತ್ಯಿಕ ಪ್ರಶ್ನೋತ್ತರ ಕಾರ್ಯಕ್ರಮ
  • ಕವನ ಪ್ರಸ್ತುತಿ
    ಮಾಲತಿ ಮೊಯಿಲಿ, ಕನ್ನಡ ಕವಯಿತ್ರಿ, ಬೆಂಗಳೂರು
  • ಅಧ್ಯಕ್ಷರ ಭಾಷಣ
    ಎಂ.ವಿ.ನಾಗರಾಜ ರಾವ್‌, ಕನ್ನಡದ ಸಮೃದ್ಧ ಬರಹಗಾರರು.
  • ನಿರೂಪಣೆ ಮತ್ತು ನಿರ್ವಹಣೆ- ವಿಶ್ವನಾಥ್‌ ಹುಲಿಕಲ್‌
ವೀರಪ್ಪ ಮೊಯಿಲಿಯವರಲ್ಲಿ ಸಾಹಿತ್ಯದ ಬಗ್ಗೆ ಪ್ರಶ್ನೆಯನ್ನು ಯಾರು ಬೇಕಾದರೂ ಕೇಳಬಹುದು. ನಿಮ್ಮ ಪ್ರಶ್ನೆಯನ್ನು ಪೂರ್ವಭಾವಿಯಾಗಿ [email protected] ಇ-ಮೇಲ್‌ ಮೂಲಕ ಕಳಿಸಿಕೊಡಿ. ಅಂದಹಾಗೆ, ದಯವಿಟ್ಟು ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಬನ್ನಿ.

Post your views

ವಾರ್ತಾ ಸಂಚಯ

ಕೆಸಿಎ ಸಮುದಾಯದ ಜೊತೆ ಮೇ 27 ರಂದು ವೀರಪ್ಪ ಮೊಯ್ಲಿ
ಯಶೋಧರ ಚರಿತೆ ಕುರಿತು ವಿಶ್ವನಾಥ್‌ ಹುಲಿಕಲ್‌ರಿಂದ ಪರಿಚಯ
ವಿಷು : ಕ್ಯಾಲಿಫೋರ್ನಿಯಾ ಕನ್ನಡಿಗರ ಕೂಸು
‘ಸಿಲಿಕಾನ್‌ ವ್ಯಾಲಿ ಸಾಹಿತ್ಯಾಸಕ್ತರ ತಂಡ’ದಲ್ಲಿ ಮೇ5 ರಂದು ಸಾಹಿತ್ಯದ ತಂಗಾಳಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X