ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸನ್ನಿವೇಲ್‌ನಲ್ಲಿ ‘ಸಾಹಿತ್ಯ ಮತ್ತು ಯೋಗ’ದ ಯೋಗಾಯೋಗ

By Staff
|
Google Oneindia Kannada News

GV Kulkarniಸಾಹಿತ್ಯ ಸಂಜೆ ಮತ್ತು ಯೋಗ ಹಾಗೂ ನ್ಯಾಚುರೋಪತಿ’- ಇದು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಬಳಗ ಮತ್ತು ಯೋಗಭಾರತಿ ಜಂಟಿಯಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ.

ನವಂಬರ್‌ 23 ರ ಶನಿವಾರ ನಡೆಯಲಿರುವ ಕನ್ನಡ ಬಳಗ ಮತ್ತು ಯೋಗಭಾರತಿಯ ಕಾರ್ಯಕ್ರಮ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಕಾರ್ಯಕ್ರಮ- ಸಾಹಿತ್ಯ ಸಂಜೆ. ಮಧ್ಯಾಹ್ನ 3 ರಿಂದ 4.30 ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ‘ಬೇಂದ್ರೆ ಮತ್ತು ವಿ.ಕೆ.ಗೋಕಾಕ್‌ : ಜೀವನ-ಸಾಹಿತ್ಯ ದರ್ಶನ’ ಎನ್ನುವ ವಿಷಯದ ಕುರಿತು ಹಿರಿಯ ಬರಹಗಾರ ಡಾ.ಜಿ.ವಿ.ಕುಲಕರ್ಣಿ ಮಾತನಾಡುವರು.

ಎರಡನೇ ಹಂತದ ಕಾರ್ಯಕ್ರಮ ಯೋಗಕ್ಕೆ ಸಂಬಂಧಿಸಿದ್ದು . ಸಂಜೆ 5 ರಿಂದ 6.30 ರವರೆಗೆ ಕಾರ್ಯಕ್ರಮ ನಡೆಯಲಿದೆ. ‘ಯೋಗ ಮತ್ತು ನ್ಯಾಚುರೊಪತಿ’ ಎನ್ನುವ ವಿಷಯದ ಕುರಿತು ಜಿ.ವಿ.ಕುಲಕರ್ಣಿ ಮಾತನಾಡುವರು. ಸಾಹಿತಿ ಮಾತ್ರವಲ್ಲ , ಕುಲಕರ್ಣಿ ಅವರು ಅತ್ಯುತ್ತಮ ಯೋಗ ಸಾಧಕರೂ ಹೌದು. ಅಂದಹಾಗೆ, ಸಾಹಿತ್ಯ ಗೋಷ್ಠಿ ಕನ್ನಡದಲ್ಲಿ ಜರುಗಿದರೆ, ಯೋಗ ಗೋಷ್ಠಿ ಇಂಗ್ಲಿಷ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮ ನಡೆಯುವ ಸ್ಥಳ : Wildwood Manors Apartments, 260 North Mathilda Ave, Sunnyvale, CA 94086.

ಪ್ರವೇಶ ಉಚಿತ. ಡಾ.ಜಿ.ವಿ.ಕುಲಕರ್ಣಿ ಅವರ ಸಾಹಿತ್ಯಿಕ ಹಾಗೂ ಯೋಗ ಚಟುವಟಿಕೆಗಳಿಗಾಗಿ ನೀಡುವ ಎಲ್ಲ ಕೊಡುಗೆಗಳನ್ನು ಗೋಷ್ಠಿಯ ಸಂದರ್ಭದಲ್ಲಿಯೇ ಸ್ವೀಕರಿಸಲಾಗುವುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :

ಸಂಪತ್‌ ಕೃಷ್ಣಭಟ್‌: ಫೋನ್‌- 4082449119 ಇಮೇಲ್‌- [email protected]
ಪದ್ಮನಾಭರಾವ್‌: ಫೋನ್‌- 4087198158
ವಿಶ್ವನಾಥ ಮರವಂತೆ: ಫೋನ್‌- 4082534007
ಯೋಗ ಪುಸ್ತಕ ಸೇರಿದಂತೆ ಜಿ.ವಿ.ಕುಲಕರ್ಣಿ ಅವರ ಪುಸ್ತಕಗಳನ್ನು ಕಾರ್ಯಕ್ರಮದ ಸ್ಥಳದಲ್ಲಿ ಪ್ರದರ್ಶಿಸಲಾಗುವುದು. ಆಸಕ್ತರು ಕೊಳ್ಳಬಹುದು. ಧಾರವಾಡ ಮೂಲದ, ಸದ್ಯಕ್ಕೆ ಮುಂಬಯಿಯಲ್ಲಿ ನೆಲೆಸಿರುವ, ‘ಜೀವಿ’ ಎಂದೇ ಹೆಸರಾದ ಜಿ.ಕುಲಕರ್ಣಿ ಅವರು- ಐದು ಕವನ ಸಂಕಲನ ಹಾಗೂ 12 ಏಕಪಾತ್ರ ನಾಟಕ, 1 ಕಥಾಸಂಕಲನ ಹಾಗೂ 1 ಕಾದಂಬರಿಯನ್ನು ಬರೆದಿದ್ದಾರೆ. ನಾ ಕಂಡ ಬೇಂದ್ರೆ-ಜೀವನ ಮತ್ತು ಸಾಹಿತ್ಯ, ನಾ ಕಂಡ ಗೋಕಾಕ್‌- ಜೀವನ ಮತ್ತು ಸಾಹಿತ್ಯ ಅವರ ಪ್ರಸಿದ್ಧ ಕೃತಿಗಳು.

ನಿವೃತ್ತ ಪ್ರೊಫೆಸರ್‌ ಆದ ಜೀವಿ ಅವರು ಯೋಗ ಮತ್ತು ನ್ಯಾಚುರೊಪತಿ ಬೋಧಕರು. ಯೋಗವನ್ನು ಸಮುದಾಯಕ್ಕೆ ತಲುಪಿಸುವ ಯೋಜನೆ ಹೊಂದಿರುವ ಅವರು, ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಯೋಗ ಪ್ರಚಾರ ಮಾಡುತ್ತಿದ್ದಾರೆ.

ಜೀವಿ ಅವರ ಕುರಿತ ಹೆಚ್ಚಿನ ವಿವರಗಳಿಗೆ ಕ್ಲಿಕ್ಕಿಸಿ- http://webpages.charter.net/raghukul/

ಯೋಗಭಾರತಿ : ಇಂಡಿಯಾ ಡೆವಲಪ್‌ಮೆಂಟ್‌ ಮತ್ತು ರಿಲೀಫ್‌ ಫಂಡ್‌ (ಐಡಿಆರ್‌ಎಫ್‌)ನ ಒಂದಂಗವಾದ ಯೋಗಭಾರತಿ ಯೋಗ ಪ್ರಸಾರವನ್ನೇ ಧ್ಯೇಯವಾಗುಳ್ಳ ಸಂಸ್ಥೆ. ಅಮೆರಿಕಾದ್ಯಂತ ಯೋಗ ಹಾಗೂ ಯೋಗ ಸಂಬಂಧಿತ ಚಟುವಟಿಕೆಗಳನ್ನು ಪ್ರಚುರಪಡಿಸುತ್ತಿರುವ ಯೋಗಭಾರತಿ ಬಗೆಗಿನ ಹೆಚ್ಚಿನ ವಿವರಗಳಿಗೆ ಕ್ಲಿಕ್ಕಿಸಿ- http://www.yogabharati.org

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X