ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಟೆಂಪಲ್‌ನಲ್ಲಿ ರಂಗತಿರುಮಲ ತಂಡದ ‘ಗೀತ ಆರಾಧನ’

By Staff
|
Google Oneindia Kannada News

ಬದುಕಿದೆನು ಬದುಕಿದೆನು , ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು...

ಎದೆತುಂಬಿ ದೇವರ ನಾಮಗಳನ್ನು ಹಾಡುವ ಕೊರಳು ಪಂಪ ಕನ್ನಡ ಕೂಟದ ಅಧ್ಯಕ್ಷ ರಂಗ ತಿರುಮಲ ಅವರದು. ಕರ್ನಾಟಕ ಶೈಲಿಯಲ್ಲಿ ದೇವರ ನಾಮಗಳನ್ನು ರಂಗ ತಿರುಮಲ ಹಾಡುವರು. ಇದು ‘ಗೀತ ಆರಾಧನ’ . ಸಂಗೀತ ರಸಿಕರನ್ನೂ ಹಾಗೂ ಭಕ್ತರನ್ನೂ ಒಟ್ಟಿಗೆ ಆಹ್ವಾನಿಸುವ ಕಾರ್ಯಕ್ರಮ.

ಭಾರತೀಯ ಟೆಂಪಲ್‌ ಅರ್ಪಿಸುವ ಈ ‘ಗೀತ ಆರಾಧನ’ ಕಾರ್ಯಕ್ರಮ ಜೂನ್‌ 21 ರ ಶುಕ್ರವಾರ ನಡೆಯಲಿದೆ. ರಾತ್ರಿ 8 ರಿಂದ 9, 9. 30 ವರೆಗೆ ಭಗವನ್ನಾಮ ಸ್ಮರಣೆ. ಹಾಡಿದರೆ ಓ ಎನ್ನನೇ ಆ ದೇವ .

ಗೀತ ಆರಾಧನ ನಡೆಯುವ ಸ್ಥಳ :
The Bharatiya Temple in Troy
6850 N. Adams Road
Troy, MI 48098
2488792552

ರಂಗ ತಿರುಮಲ ಅವರ ಹಾಡುಗಾರಿಕೆಗೆ ‘ವಾದ್ಯ ಸಾಥಿ’ ಯನ್ನು- ಸುರೇಂದ್ರನ್‌ (ಕೀಬೋರ್ಡ್‌), ಮೋಹನ್‌ ಚಂದ್ರನ್‌ (ತಬಲ), ಶ್ರೀನಿ ಪೇಜಾಥ್ಯ (ಮೃದಂಗಂ), ಹರಿ ಪ್ರಸಾದ್‌ (ಕೊಳಲು) ಹಾಗೂ ರಜನಿ ಮೂರ್ತಿ (ತಾಳಂ).

ದೇವಸ್ಥಾನವನ್ನು ತಲುಪಲು ನಕ್ಷೆ ಮತ್ತು ಮೈಲುಗಲ್ಲುಗಳು ಇಲ್ಲಿವೆ-

  • The Temple is located on Adams Road and is on the southeast corner of Adams Road and South Blvd in Troy, Michigan. The temple can be approached from I75, by taking the Adams Road exit. From the service drive travel north about 1.5 miles. Look for the entrance sign (it will come up on your right) pictured here.
  • An alternative approach is also available via M59. If you are coming from M59 East (e.g., coming from the genral direction of Utica and going towards Pontiac), take the Adams Road exit. While on the service drive, stay in the left lane and take a left turn on the light. Immediately after about a 100 yards, you will see another left turn service drive and a traffic light. This will be marked as the Adams road. Take this left and drive straight down to Adams Road. The temple will come up on your left after about approximately 1.75 miles.
  • If you are arriving from M59 West (e.g., coming from Pontiac and going towards Utica), then take the Adams road exit and follow the service drive (it curves quite a bit). At the end of the service drive, take a left on the light and drive down approximately 1.5 miles on Adams road. The temple will come up on your left side.
  • ರಂಗ ತಿರುಮಲ ಯಾರೆಂದರೆ-
    ಚಿಕ್ಕ ವಯಸ್ಸಿನಲ್ಲೇ ಸಂಗೀತದ ಒಲವು. ಮೈಸೂರು ವಾಸುದೇವಾಚಾರ್ಯರ ಮಗನ ಶಿಷ್ಯೆ ಶ್ರೀಮತಿ ಶ್ಯಾಮಲಾ ಪುಣ್ಯಮೂರ್ತಿ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ. ನೆಚ್ಚಿನವರ ‘ರಂಗ’ ಅವರಿಗೆ ಸಂಗೀತ ತುಡಿತ. ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಅನೇಕ ಪ್ರಶಸ್ತಿಗಳ ಪಡೆದ ಪ್ರತಿಭೆ. ಇವರ ಇನ್ನೊಂದು ಮುಖ ಸಾಫ್ಟ್‌ವೇರ್‌ ವೃತ್ತಿಪರ. ಉದ್ಯಮಿಯಾಗಿ ರೂಪುಗೊಳ್ಳುತ್ತಿರುವ ಪ್ರತಿಭಾವಂತ.

    (ಇನ್ಫೋ ವಾರ್ತೆ)

    ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X