ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯೋತ್ಸವದ ಕವಿ ನಿಸಾರ್‌ ಅಹಮದ್‌ಗೆಕಾವೇರಿ ಸತ್ಕಾರ ಕೂಟ

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೊ

Nisar Ahmedನಿತ್ಯೋತ್ಸವದ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಅವರಿಗೆ ಔತಣ ಕೂಟ ಏರ್ಪಡಿಸಲು ಕಾವೇರಿ ಕನ್ನಡ ಸಂಘ ಉದ್ದೇಶಿಸಿದೆ.

ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನಕ್ಕೆ ಕರ್ನಾಟಕದಿಂದ ತೆರಳುವ ಬರಹಗಾರ-ಕಲಾವಿದರ ಲಿಸ್ಟಿನಲ್ಲಿ ನಿಸಾರ್‌ ಅಹಮದ್‌ ಅವರದು ಎದ್ದು ಕಾಣುವ ಹೆಸರು. ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಕನ್ನಡದ ಹಿರಿಯ ಕವಿಗಳಲ್ಲೊಬ್ಬರಾದ ನಿಸಾರರ ಸಾಂಗತ್ಯವನ್ನು ಕೆಲವು ನಿಮಿಷಗಳ ಕಾಲ ಸಂಘದ ಸದಸ್ಯರಿಗೆ ಒದಗಿಸಿಕೊಡುವುದು ಕಾವೇರಿ ಕನ್ನಡ ಸಂಘದ ಅಭಿಲಾಷೆ.

ಅಕ್ಟೋಬರ್‌ ತಿಂಗಳ ಮೊದಲ ವಾರದಲ್ಲಿ ಔತಣ ಕೂಟ ನಡೆಯಲಿದೆ. ಇದೇ ಸಂದರ್ಭದಲ್ಲಿ ನಿಸಾರರ ಆಯ್ದ ಗೀತೆಗಳ ಗಾಯನವೂ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವವರು ರಾಮ್‌ರಾವ್‌ ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ- (301) 5283578. ಇ-ಮೇಲ್‌ : [email protected].

‘ಜೋಗದ ಸಿರಿ ಬೆಳಕಿನಲ್ಲಿ , ತುಂಗೆಯ ತೆನೆ ಬಳುಕಿನಲ್ಲಿ ...’ ಎನ್ನುವ ಜನಪ್ರಿಯ ಗೀತೆಯ ಮೂಲಕ ಕನ್ನಡಿಗರ ಮನೆ ಮನಗಳನ್ನು ಮುಟ್ಟಿದ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ನಾಡಿನ ಶ್ರೇಷ್ಠ ಕವಿಗಳಲ್ಲೊಬ್ಬರು. ನವೋದಯ ಪಂಥದ ಮೊದಲ ಸಾಲಿನಲ್ಲಿ ಕಾಣಿಸಿಕೊಂಡ ನಿಸಾರ್‌, ನಂತರದ ನವ್ಯಕ್ಕೂ ಬೆನ್ನು ತೋರದ ಪ್ರತಿಭೆ. ಮಾಸ್ತಿ ಅವರ ಬಗೆಗಿನ ನುಡಿಚಿತ್ರ, ಗುಲ್‌ಮೊಹರ್‌, ರಂಗೋಲಿ ಮತ್ತು ಮಗ, ಕುರಿಗಳು ಸಾರ್‌ ಕುರಿಗಳು.. ಹೀಗೆ ನಿಸಾರರ ಕಾವ್ಯವ್ಯಾಪ್ತಿ ದೊಡ್ಡದು.

ಕವಿತೆ ಮಾತ್ರವಲ್ಲ - ವಿಮರ್ಶೆ, ಪ್ರಬಂಧ ಕ್ಷೇತ್ರಗಳಲ್ಲೂ ನಿಸಾರರದು ಅಚ್ಚಳಿಯದ ಛಾಪು. ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿಯಾಗಿ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ಕಳೆಯುತ್ತಿರುವ ನಿಸಾರರು ತಮ್ಮ ಕವಿತೆಗಳಷ್ಟೇ ಸಜ್ಜನಿಕೆಗೂ ಹೆಸರುವಾಸಿ. ಇಂಥ ನಿಸಾರ್‌ ಅಹಮದರನ್ನು ಸತ್ಕರಿಸಲು ಕಾವೇರಿ ಕನ್ನಡ ಸಂಘ ಮುಂದಾಗಿದೆ. ಈ ಅಮೃತ ಘಳಿಗೆಗಳಿಗೆ ನಿಮ್ಮ ಹಾಜರಿಯ ರುಜುವಿರಲಿ.

ಸುದ್ದಿಯಲ್ಲಿ ನಿಸಾರ್‌

ತಾಯೆ ನಿನಗೆ ನನ್ನ ನಿತ್ಯೋತ್ಸವ : ನಿಸಾರ್‌
ನಿಸಾರ್‌ ಅಹಮದ್‌ಗೆ ತಾತಾಚಾರಿ ಪ್ರಶಸ್ತಿ
ನಿಸಾರ್‌ಗೆ‘ಅನಕೃ-ನಿರ್ಮಾಣ್‌’

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X