ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಉತ್ತರ ಕ್ಯಾಲಿಫೋರ್ನಿಯಾ ಚಿಣ್ಣ, ಬಾ ಕನ್ನಡ ಕಲಿಯೋಣ’

By Staff
|
Google Oneindia Kannada News

Kannada Kaliಸಾಗರದಾಚೆ ಬಂದಿದ್ದರೇನು? ನಾವು ನಾವೇ ಅಲ್ಲವೇ? ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ...ಕನ್ನಡ ಓದೋದು ಬರೆಯೋದು ಕಲಿಯಿರಿ.

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ (ಕೆಕೆಎನ್‌ಸಿ) ನುಡಿ ಕಲಿಕೆಯ ಕರೆಯೋಲೆಯಿದು. ಕನ್ನಡದ ಚಿಣ್ಣರಿಗೆ ಬೇಸಿಗೆ ಶಿಬಿರ. ಶಾಲೆಯಲ್ಲಿ ಏನೇ ಕಲಿಯಿರಿ, ಕನ್ನಡ ಮರೆಯದಿರಿ. ವೀಣಾ ಗೌಡ ಮತ್ತು ಸರೋಜ ಶ್ರೀನಿವಾಸ್‌, ಗಾಯತ್ರಿ ಡೋಂಥಿ, ಪುಷ್ಪ ಸುಬ್ಬಣ್ಣ ಮತ್ತು ಕಲಾ ರಮೇಶ್‌ ಮಕ್ಕಳಿಗೆ ಪಾಠ ಹೇಳಿಕೊಡಲು ಒಪ್ಪಿಗೆ ಕೊಟ್ಟಿದ್ದಾರೆ.

ಕೆಕೆಎನ್‌ಸಿ ಅಂದುಕೊಂಡಿರುವಂತೆ ಎರಡು ತಿಂಗಳ ಈ ಪುಟ್ಟ ಕೋರ್ಸಿನಲ್ಲಿ ಕನ್ನಡದ ಓದು ಬರಹವನ್ನು ಕಲಿಸಲಾಗುವುದು. ಕೋರ್ಸಿನ ಕೊನೆಯಲ್ಲಿ ಚಿಕ್ಕದೊಂದು ಪರೀಕ್ಷೆ. ಪಾಸಾದವರಿಗೆ ವೇದಿಕೆ ಮೇಲೆ ಕರೆದು, ಗೌರವಿಸಲಾಗುವುದು.

ಇನ್ನು ಕೋರ್ಸಿನ ಸಮಯ, ವೇಳಾಪಟ್ಟಿ, ರೂಪುರೇಷೆ ಹೇಗಿರಬೇಕು ಎಂಬುದು ಮಕ್ಕಳ ತಂದೆ- ತಾಯಂದಿರ ನಿರ್ಣಯಕ್ಕೆ ಬಿಟ್ಟಿದ್ದು. ಪಾಠ ಹೇಳುವವರು ಮಾತಿಗೆ ಸಿದ್ಧವಿದ್ದಾರೆ. ಅವರೊಟ್ಟಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬನ್ನಿ. ಅಂದಹಾಗೆ, ಕನ್ನಡ ಕಲಿಯುವ ಬಯಕೆ ಇರುವ ದೊಡ್ಡವರೂ ಹಿಂದೇಟು ಹಾಕಬೇಕಿಲ್ಲ. ಮಕ್ಕಳ ಜೊತೆಯಲ್ಲಿ ದೊಡ್ಡವರೂ ಕನ್ನಡ ಕಲಿಯಬಹುದು.

ನಿಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಈ ಸುವರ್ಣಾವಕಾಶವನ್ನು ಸರ್ವರೂ ಬಳಸಿಕೊಳ್ಳಿ. ನಿಮ್ಮ ಕಂದ ಕನ್ನಡ ಮಾತಾಡಿ, ಬರೆಯೋದನ್ನ ನೋಡಿ ಆನಂದಿಸಿ.

ಕೋರ್ಸಿನ ಬಗ್ಗೆ ಸಮಾಲೋಚನೆಗೆ ಕೆಳಕಂಡವರನ್ನು ಸಂಪರ್ಕಿಸಿ-
ವೀಣಾ ಗೌಡ : 408- 927- 6263, [email protected] (ಸ್ಯಾನ್‌ ಹ್ಯೂಸೆ)
ಸರೋಜ ಶ್ರೀನಿವಾಸ್‌ : 408- 525- 0874 (ಸನ್ನಿವೇಲ್‌)
ಗಾಯತ್ರಿ ಡೋಂಥಿ : 510- 441- 1567, [email protected] (ಯೂನಿಯನ್‌ ಸಿಟಿ)
ಪದ್ಮ ಸುಬ್ಬಣ್ಣ : 408- 973- 1552, [email protected] (ಕುಪರ್ಟಿನೊ)
ಕಲಾ ರಮೇಶ್‌ : 510-668-1494, [email protected] (ಫ್ರೀಮಾಂಟ್‌)

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X