• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕ್‌ ಭಯೋತ್ಪಾದನೆ ವಿರುದ್ಧ ಅಮೆರಿಕಾದಲ್ಲಿನ ಭಾರತೀಯರ ದನಿ

By Staff
|

*ವಿಶ್ವನಾಥ ಮರವಂತೆ,
ಕ್ಯೂಪರ್ಟಿನೊ, ಕ್ಯಾಲಿಫೋರ್ನಿಯಾ

Vishwanath Maravanteಭಾರತದೊಂದಿಗೆ ಯುದ್ಧ ಭೀತಿಯನ್ನು ತಂದೊಡ್ಡಿ, ವಿಧ್ವಂಸಕಾರೀ ಭಯೋತ್ಪಾದನೆಯನ್ನು ಪ್ರಚೋದಿಸುತ್ತಿರುವ ಪಾಕಿಸ್ತಾನದ ವರ್ತನೆಯನ್ನು - ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಎಲಿಝಬೆತ್‌ ಲೇಕ್‌ ಪಾರ್ಕ್‌ನಲ್ಲಿ ಜೂನ್‌ 9ರ ಭಾನುವಾರ ಸಮಾವೇಶಗೊಂಡಿದ್ದ ಅಮೆರಿಕಾದಲ್ಲಿರುವ ಭಾರತೀಯರು ತೀವ್ರವಾಗಿ ಖಂಡಿಸಿದರು. ಸುಮಾರು 250ಕ್ಕೂ ಹೆಚ್ಚು ಭಾರತೀಯರು ಸೇರಿದ್ದ ಈ ಸಮಾವೇಶವನ್ನು ಫ್ರೆಂಡ್ಸ್‌ ಆಫ್‌ ಇಂಡಿಯಾ ಸೊಸೈಟಿ ಇಂಟರ್‌ನ್ಯಾಷನಲ್‌(FSI) ಎಂಬ ಸಂಸ್ಥೆಯು, ಇನ್ನಿತರ 16 ಭಾರತೀಯ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಿತ್ತು.

ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದು; ಜ. ಮುಷರಫ್‌ ಈ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವವರು - ಎಂಬ ಬಗ್ಗೆ ಅಂದಿನ ಎಲ್ಲ ಮಾತುಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಭಯೋತ್ಪಾದನೆಯನ್ನು ಪ್ರಚೋದಿಸುತ್ತಿರುವ ಪಾಕಿಸ್ತಾನ ಅಧ್ಯಕ್ಷ ಮುಷರಫ್‌ರನ್ನು ಅಣಕಿಸುವ ಕಿರು ಪ್ರಹಸನಗಳು ಹಾಗೂ ದೇಶಭಕ್ತಿ ಗೀತೆಗಳು ಅಂದಿನ ಕಾರ್ಯಕ್ರಮಕ್ಕೆ ಹೊಸ ತಿರುವು ನೀಡಿದವು.

ಜಗತ್ತಿನ ಎರಡು ಮಹಾನ್‌ ಪ್ರಜಾಪ್ರಭುತ್ವ ದೇಶಗಳಾದ ಭಾರತ ಮತ್ತು ಅಮೇರಿಕಾ ದೇಶಗಳಿಗಿರುವ ಭಯೋತ್ಪಾದಕರ ಪಿಡುಗಿನ ಬಗ್ಗೆ ; FISI ಯ ಅಧ್ಯಕ್ಷರಾದ ಗೌರಾಂಗ್‌ ದೇಸಾಯಿ ಅವರು ಸವಿವರವಾಗಿ ಮಾತಾಡಿದರು. ತಾಲಿಬಾನ್‌ ಹಾಗೂ ಅಲ್‌-ಖ್ವೆ ೖದಾ ಎಂಬಿತ್ಯಾದಿ ಉಗ್ರರ ಗುಂಪುಗಳಿಗೆ ಮುಷರಫ್‌ ಅವರ ಬೆಂಬಲ ಇರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಮುಷರಫ್‌ ಅವರೇ 1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧ ಪ್ರಚೋದಕರು; ಇಂಡಿಯನ್‌ ಏರ್‌ಲೈನ್ಸ್‌ (ಐ.ಎ. 814) ವಿಮಾನ ಅಪಹರಣಕಾರರನ್ನು ಪಾಕಿಸ್ತಾನದೊಳಗೆ ಬಿಟ್ಟುಕೊಂಡವರೂ ಅವರೇ ; ಈಗ ನ್ಯೂಕ್ಲಿಯರ್‌ ಆಯುಧಗಳನ್ನು ಬಳಸಲೂ ಹಿಂಜರಿಯುವುದಿಲ್ಲ ಎಂದು ಹೇಳುತ್ತಿರುವವರೂ ಅವರೇ ; ಇವುಗಳನ್ನೆಲ್ಲ ಶಾಶ್ವತವಾಗಿ ತಡೆಗಟ್ಟಲೇಬೇಕು. ‘ ನೀವು ನಮ್ಮೊಂದಿಗಿರಬೇಕು; ಇಲ್ಲವಾದರೆ ನೀವು ಭಯೋತ್ಪಾದಕರೊಂದಿಗೆ ಇರುವಿರಿ’ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೇಳುವ ಸಮಯ ಬಂದಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಎಮೆರಿಟಸ್‌ ಫ್ರಾಂಕ್ಲಿನ್‌ ರೋಜರ್ಸ್‌ ಅವರು (ಸ್ಯಾನ್‌ ಹ್ಯೂಸೆ ಸ್ಟೇಟ್‌ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್‌) ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬ ಬಗ್ಗೆ ಪ್ರಬಲವಾದ ಅಂಶಗಳನ್ನು ವಿವರಿಸಿದರು. ಕಾಶ್ಮೀರವು ದೇಶ ವಿಭಜನೆಯ ಸಮಯದಲ್ಲಿ ಬ್ರಿಟಿಷ್‌ ಅಧಿಪತ್ಯಕ್ಕೆ ಒಳಪಟ್ಟಿರಲಿಲ್ಲ ; ಅನಂತರ ಅಂದಿನ ಕಾಶ್ಮೀರದ ಮಹಾರಾಜರು ಸ್ವ ಇಚ್ಛೆಯಿಂದ ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸಿದರು. ಆದರೆ ಪಾಕಿಸ್ತಾನವು ತಾನು ನಡೆಸುತ್ತಿರುವ ಜಾಗತಿಕ ಭಯೋತ್ಪಾದನೆ ಹಾಗೂ ತನ್ನ ನೆಲದಲ್ಲಿಯೇ ನಡೆಯುತ್ತಿರುವ ಪ್ರಭಾಪ್ರಭುತ್ವದ ಪತನವೇ ಮೊದಲಾದವುಗಳಿಂದ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಕಾಶ್ಮೀರದ ಬಗ್ಗೆ ಈಗಿರುವ ಸಮಸ್ಯೆಯನ್ನು ತಂದೊಡ್ಡಿದೆ ಎಂದರು.

Pro India Rally in Fremont to protest Pakistan sponsored terrorismಇಂಡೋ-ಅಮೆರಿಕನ್‌ ಕಾಶ್ಮೀರಿ ಫೋರಮ್‌ನ ಜೀವನ್‌ ಜಟ್ಸಿ ಅವರು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳಿಗೆಲ್ಲಾ ಪಾಕಿಸ್ತಾನದ ಬೇಹುಗಾರಿಕಾ ಪಡೆಗಳಿಂದ ತರಬೇತಿಗೊಂಡ ಭಯೋತ್ಪಾದಕರು ನಡೆಸುತ್ತಿರುವ ಕು-ಕೃತ್ಯಗಳೇ ಕಾರಣ ಎಂದರು. ಸುಮಾರು 75, 000 ಹಿಂದೂ, ಸಿಖ್‌ ಹಾಗೂ ಬೌದ್ಧರು ತಮ್ಮ ಆಸ್ತಿ ಪಾಸ್ತಿಗಳನ್ನು ಬಿಟ್ಟು ಓಡಿ ಹೋಗಬೇಕಾಯಿತು; ಸುಮಾರು 50, 000 ಕ್ಕೂ ಹೆಚ್ಚುಮಂದಿ ಬಲಿಯಾಗಬೇಕಾಯಿತು ಎಂದು ಅವರು ಹೇಳಿದರು.

Pro India Rally in Fremont to protest Pakistan sponsored terrorismಇಂದರ್‌ ಮೋಹನ್‌ ಕಾವ್‌ (ಪಾನನ್‌ ಪಾಶ್ಮೀರ್‌ ಸಂಸ್ಥೆಯವರು), ಡಾ. ರೊಮೇಶ್‌ ಜಾಪ್ರಾ (ಎಫ್‌.ಐ.ಎ.), ಚಂದ್ರು ಬಾಂಬ್ರ (ಓವರ್‌ ಸೀಸ್‌ ಫ್ರೆಂಡ್ಸ್‌ ಆಫ್‌ ಬಿ.ಜೆ.ಪಿ.), ಮೊದಲಾದ ಗಣ್ಯರೂ ಅಂದಿನ ಸಮಾವೇಶದಲ್ಲಿ ಮಾತಾಡಿ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಭಯೋತ್ಪಾದನೆಯನ್ನು ಪ್ರಚೋದಿಸುತ್ತಿರುವ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಎಲ್ಲರೂ ಸೇರಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾರ್ಯಕ್ರಮಕ್ಕೆ ಬೆಂಬಲ ನೀಡಿದ ಇತರ ಭಾರತೀಯ ಸಂಸ್ಥೆಗಳು :

Brihan Maharastra Mandal (BMM)

FIA of Northern California
Gujarati Brahman Samaj
Hindu Swayamsevak Sangh(HSS)
India Cultural Association (ICA)
Indo-American Kashmir Forum (IAKF)
Indo-American Trade and Commerce Council (IATCC)
Kannada Koota
Kashmiri Overseas Association (KOA)
Lata Mangeshkar Foundation
Overseas Friends of BJP (OFBJP)
Panun Kashmir
Santa Rosa Gujarati Samaj of USA
Vishwa Hindu Parishad of America (VHPA)
ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಸಂಸ್ಥೆ Fisi ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ಅಂತರ್ಜಾಲ ವಿಳಾಸವನ್ನು ಬಳಸಿ :
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more