ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸಿಎ ‘ಸಂಗಮ’ಕ್ಕೆ ಬರಹಗಳು ಬೇಕಾಗಿವೆ, ಬರೆಯುವಂಥವರಾಗಿ

By Staff
|
Google Oneindia Kannada News

Start writtingದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ (ಕೆಸಿಎ) ಪ್ರತಿ ವರ್ಷದಂತೆ ಈ ವರ್ಷವೂ ತನ್ನ ವಾರ್ಷಿಕ ಸಂಕಲನವಾದ ‘ಸಂಗಮ’ ಕೃತಿಯನ್ನು ಪ್ರಕಟಿಸಲು ನಿರ್ಧರಿಸಿದೆ. ಏಪ್ರಿಲ್‌ 2003, ಯುಗಾದಿ ಹೊತ್ತಿಗೆ ‘ಸಂಗಮ’ ಸಿದ್ಧವಾಗಲಿದೆ. ಕೆಸಿಎ ಈಗಾಗಲೇ ಪೂರ್ವ ತಯಾರಿಯಲ್ಲಿ ತೊಡಗಿದೆ. ಬೇಗ ಪೆನ್ನು- ಪೇಪರೆತ್ತಿಕೊಳ್ಳಿ ಅಥವಾ ಕಂಪ್ಯೂಟರ್‌ ಮುಂದೆ ಪ್ರತಿಷ್ಠಾಪನೆಯಾಗಿ ಬರಹಗಳ ಬಿತ್ತನೆ ಶುರುಮಾಡಿ. ಬರೆಯುವ ಮುನ್ನ ಇವನ್ನು ಓದಿಕೊಳ್ಳಿ-

  • ಬರಹಗಳು ಇಂಗ್ಲಿಷ್‌ ಅಥವಾ ಕನ್ನಡದಲ್ಲೇ ಇರಬೇಕು. [2 81/2 x 11 page, font size 10, Arial lettering (if in English) single space format.]
  • ಜನರ ಆಸಕ್ತಿಗೆ ಪೂರಕವಾದ ಬರಹಗಳು, ಸಣ್ಣಕತೆಗಳು, ಕವನಗಳು, ನಗೆ ಚಟಾಕಿಗಳು, ಸೂಕ್ತಿಗಳಿಗೆ ಸ್ವಾಗತ.
  • ಅನನ್ಯ ಮತ್ತು ಅಪರೂಪದ ಒಳ್ಳೆಯ ಅನುಭವಗಳೂ ಪ್ರಕಟಣೆಗೆ ಅರ್ಹ.
  • ಬರಹಗಳನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಸಂಪೂರ್ಣ ಹಕ್ಕು ಸಂಪಾದಕೀಯ ಮಂಡಳಿಗೆ ಇರುತ್ತದೆ.
  • ಕೆಸಿಎ ಸದಸ್ಯರ ಬರಹಗಳಿಗೆ ಆದ್ಯತೆ ಕೊಡಲಾಗುವುದು.
  • ಕೆಸಿಎ ಚಟುವಟಿಕೆಗಳಿಗೆ ಸಂಬಂಧಿಸಿದ ಫೋಟೋಗಳು ನಿಮ್ಮ ಬಳಿ ಇದ್ದು, ಅವನ್ನು ಹಂಚಿಕೊಳ್ಳುವ ಮನಸ್ಸಿದ್ದರೆ ನಮಗೆ ತಿಳಿಸಿ.
  • ಬರಹಗಳು ಫೆಬ್ರುವರಿ 21, 2003, ಶುಕ್ರವಾರದೊಳಗೆ ತಲುಪಬೇಕು.
  • ಬರಹಗಳನ್ನು ಕಳುಹಿಸಲು ದಾರಿ- B.N.Nagaraj, 901, Ashton Place Fullerton, CA 928331401, Tel No. 7144411420, Fax No. 7144412716, E mail- bnagaraj@aol .com.
  • ವೈಯಕ್ತಿಕ ಅಥವಾ ವಾಣಿಜ್ಯ ಜಾಹೀರಾತುದಾರರು ಹಾಗೂ ದೇಣಿಗೆದಾರರು ‘ಸಂಗಮ’ದ ಪ್ರಕಟಣೆಯ ಖರ್ಚು ತೂಗಿಸಲು ಪ್ರಾಯೋಜನೆ ಮಾಡಬೇಕಾಗಿ ವಿನಂತಿ.
  • ನಿಮ್ಮ ಬೆಲೆ ಬಾಳುವ ಸಲಹೆ, ಸಹಕಾರಕ್ಕೆ ಸ್ವಾಗತ.
ಸಂಪಾದಕೀಯ ಮಂಡಳಿ
ಬಿ.ಎನ್‌.ನಾಗರಾಜ್‌- ಅಧ್ಯಕ್ಷರು, ಕೆಸಿಎ- ಮುಖ್ಯ ಸಂಪಾದಕ
ಹರೀಶ್‌ ಕುಮಾರ್‌- ನಿರ್ದೇಶಕ, ಕೆಸಿಎ- ಸಹ ಸಂಪಾದಕ
ಶಂಖಂ ಜಗನ್ನಾಥ್‌- ನಿರ್ದೇಶಕ, ಕೆಸಿಎ- ಸಹ ಸಂಪಾದಕ
ನಾಗನ ಗೌಡ- ಕಾರ್ಯದರ್ಶಿ, ಕೆಸಿಎ
ಲಕ್ಷ್ಮಿ ಕೃಷ್ಣಮೂರ್ತಿ- ಖಜಾಂಚಿ. ಕೆಸಿಎ
ಅರ್ಚನ ಪ್ರಕಾಶ್‌- ಯೂತ್‌ ಗ್ರೂಪ್‌
ಮುಕುಂದ್‌ ಹಾಲ್ತೊರೆ
ವಲ್ಲೀಶ ಶಾಸ್ತ್ರಿ
ಪ್ರತಿಭ ಭಗವತ್‌
ಆರತಿ ಮಗಂತಿ

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X