ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಲ್‌ಬೋರ್ನ್‌ ಕನ್ನಡಿಗರ ದಸರಾ ಸಾಂಸ್ಕೃತಿಕ ಜಂಬೂರಿ..

By Staff
|
Google Oneindia Kannada News

*ರವಿಶಂಕರ್‌
[email protected]

ಇದು ಮೆಲ್‌ಬೋರ್ನ್‌ ಕನ್ನಡ ಸಂಘದ ಕರೆಯೋಲೆ !

ನಮಸ್ಕಾರ.

ಕನ್ನಡಸಂಘದ ಸದಸ್ಯರು ಮತ್ತೆಲ್ಲ ಕುಟುಂಬ ವರ್ಗದವರಿಗೆ ಆತ್ಮೀಯ ಆಹ್ವಾನ. ಬರುವ ನವೆಂಬರ್‌ 2 ರ ಶನಿವಾರ ಸಂಜೆ 5. 30 ಕ್ಕೆ ನಮ್ಮ ಸಂಘದ ಆಶ್ರಯದಲ್ಲಿ ಏರ್ಪಾಟಾಗಿರುವ ದಸರಾ ಸಾಂಸ್ಕೃತಿಕ ಉತ್ಸವಕ್ಕೆ ಹಾರ್ದಿಕ ಸ್ವಾಗತ.

ಹಾಡು, ನೃತ್ಯ, ವಾದ್ಯಗೋಷ್ಠಿ ಮುಂತಾದ ಕಾರ್ಯಕ್ರಮಗಳ ಮೂಲಕ ನಮ್ಮ ಸದಸ್ಯರಿಗೆ ಮನರಂಜನೆಯ ರಸಗವಳ ಒದಗಿಸುವುದು ಈ ಕಾರ್ಯಕ್ರಮದ ವಿಶೇಷಗಳಲ್ಲಿ ಮುಖ್ಯವಾದದ್ದು. ಉಮಾ ಪಾಟೀಲ್‌, ಲಕ್ಷ್ಮಿ ಮಂಜುನಾಥ್‌, ಶಶಿಕಲಾ ಪದಕಿ ಮತ್ತು ನಟರಾಜ್‌ ಬಬ್ಜಿ ಅವರುಗಳ ನೇತೃತ್ವದಲ್ಲಿ ರಚಿಸಲಾಗಿರುವ ಸಾಂಸ್ಕೃತಿಕ ಸಮಿತಿಗೆ ನಿಮ್ಮ ಅಮೂಲ್ಯ ಸಹಕಾರ ಕೋರಲಾಗುತ್ತಿದೆ. ನೀವು ನೀಡುವ ಸಹಕಾರ, ಪ್ರೋತ್ಸಾಹದ ಮೇಲೆ ನೀವು ಮತ್ತು ನಿಮ್ಮ ಮಕ್ಕಳ ಒಂದು ಸುಂದರ ಸಂಜೆಯ ವಿನ್ಯಾಸ ಅವಲಂಬಿತವಾಗಿದೆ.

ಕಾರ್ಯಕ್ರಮಕ್ಕೆ ಟಿಕೀಟು ಮೂಲಕ ಪ್ರವೇಶ. ಗಂಡ, ಹೆಂಡತಿ ಮತ್ತು 12 ವರ್ಷ ಒಳಗಿನ ಮಕ್ಕಳ ಒಂದು ಕುಟುಂಬಕ್ಕೆ 30 ಡಾಲರು. ಒಬ್ಬರೇ ಬಂದರೆ 15 ಡಾಲರು. ವಾರ್ಷಿಕ ಚಂದಾ (70 ಡಾಲರು) ನೀಡುತ್ತಾ ಬಂದಿರುವ ಪ್ರೀಮಿಯಮ್‌ ಸದಸ್ಯರಿಗೆ ಪ್ರವೇಶ ಉಚಿತ. ರುಚಿಯಾದ ಭೋಜನ, ಡೆಸರ್ಟ್‌ ವ್ಯವಸ್ಥೆ ನಿಶ್ಚಿತ ! BYO

ಇನ್ನೊಂದು ಮಾತು : ಕೆಲವರು ಮನೆ ಬದಲಾಸಿರುವುದರಿಂದ ಆಹ್ವಾನ ಪತ್ರ ತಲುಪಿದೆಯೋ ಇಲ್ಲವೋ ಎಂಬ ಅನುಮಾನವಿದೆ. ವಿಳಾಸ ಬದಲಾವಣೆ ಮಾಹಿತಿಯನ್ನು ನನಗೆ ಕೊಡಿ . ದೂರವಾಣಿ : 9568 0590

ನಮ್ಮ ಸಂಘದ ಸದಸ್ಯರಲ್ಲಿ ಅನೇಕರು ಪ್ರತಿಭಾವಂತರು, ಅನುಭವಿಗಳು ಇರುವರು. ಅವರ ಅಮೂಲ್ಯ ಐಡಿಯಾ-ಸಲಹೆ ನಮಗೆ ಮುಖ್ಯ. ಕಾರ್ಯಕ್ರಮ ಮತ್ತಷ್ಟು ಕಳೆಗಟ್ಟಬೇಕಾಗರೆ ಮೊದಲು ಫೋನು ಕೈಗೆತ್ತಿಕೊಳ್ಳಿ. ಡಾ . ರೆಡ್ಡಿ ಅವರೊಂದಿಗೆ ಈಗ ಮಾತನಾಡಿ. ದೂರವಾಣಿ : 9853 4431

Venue: Wellington Secondary College, 91 Police Road, Mulgrave MELWAY Ref: 80 5D).

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X