• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕೆಗೆ ಮತ್ತೆ ಬಂದರು ಸರ್ವೋತ್ತಮದಾಸರು : ಆ.18ಕ್ಕೆ ಹರಿಕತೆ

By Staff
|

ಪೌರಾಣಿಕ ಕತೆಗಳ ಪಠಣ, ಗಮಕ, ನಾಟಕಗಳಲ್ಲಿ ದೇವತೆಗಳ ವಿಧ ವಿಧ ಅವತಾರವನ್ನು ಸಹೃದಯರು ಅನುಭವಿಸಬಹುದಾದರೂ ಹರಿಕತೆಯ ಮಾಧ್ಯಮದ ಛಾಪೇ ಬೇರೆ. ತೂಕಡಿಕೆಯನ್ನು ಹೊಡೆದೋಡಿಸುವ ಶಕ್ತಿ ಇರೋದು ಹರಿಕತಾ ಮಾಧ್ಯಮಕ್ಕೆ. ಅದರಲ್ಲಿ ಹಾಡಿರುತ್ತದೆ. ಹಾಸ್ಯ ಹಾಸುಹೊಕ್ಕಾಗಿರುತ್ತದೆ, ಹರಿದಾಸರು ರಸಿಕರಾಗಿದ್ದಲ್ಲಿ ಶೃಂಗಾರಕ್ಕೂ ಕೊರೆಯಿಲ್ಲ. ಇಂಥಾ ಹರಿಕತೆಯ ಮಧುರ ಕ್ಷಣಗಳನ್ನು ನಿಮ್ಮ ಪಾಲಿಗೆ ಕಟ್ಟಿಕೊಡಲು ಕಾವೇರಿ, ಭೂಮಿಕ ಮತ್ತು ವಿಶ್ವ ಮಾಧ್ವ ಸಂಘಗಳು ಟೊಂಕಕಟ್ಟಿ ನಿಂತಿವೆ. ಸರ್ವೋತ್ತಮ ದಾಸರ ಹರಿಕತೆಯ ರುಚಿ ಹತ್ತಿದವರು ಕಡಿಮೆಯೇನಿಲ್ಲ. ಈಗ ಸರ್ವೋತ್ತಮ ದಾಸರು ಮತ್ತೆ ಅಮೆರಿಕಾ ವೇದಿಕೆ ಹತ್ತಲಿದ್ದಾರೆ. ಹರಿಕತೆ ಕೇಳುವ ಅವಕಾಶ ನಿಮ್ಮದು.

ಹರಿಕತೆಯ ವಸ್ತು- ಶ್ರೀ ಕೃಷ್ಣ ಲೀಲೆ. ಸರ್ವೋತ್ತಮ ದಾಸರ ಸಾಥಿಗಳು- ಬಿ.ಮುರಳೀಧರ ಪೈ ಮತ್ತು ಬಿ.ಶ್ಯಾಮ ಪೈ. ಅಂದಹಾಗೆ, ಈ ಇಬ್ಬರೂ ಸರ್ವೋತ್ತಮ ದಾಸರ ಅಣ್ಣ ಭದ್ರಗಿರಿ ಕೇಶವದಾಸರ ಮಕ್ಕಳು.

ಆಗಸ್ಟ್‌ 18, ಭಾನುವಾರ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಶ್ರೀ ಮುರುಗನ್‌ ದೇವಸ್ಥಾನ, 6300, ಪ್ರಿನ್ಸಸ್‌ ಗಾರ್ಡನ್‌ ಪಾರ್ಕ್‌ವೇ, ಲ್ಯಾನ್‌ಹ್ಯಾಮ್‌, ಎಂಡಿಯಲ್ಲಿ ಹರಿಕತೆ ಶುರುವಾಗುತ್ತದೆ.

ಪ್ರವೇಶ ಶುಲ್ಕ : ತಲೆಗೆ ಕನಿಷ್ಠ 10 ಡಾಲರ್‌ ಕೊಡಿ ಅನ್ನುವುದು ಆಯೋಜಕರ ಸಲಹೆ. ಅದಕ್ಕಿಂತ ಹೆಚ್ಚು ಕೊಟ್ಟರೆ ಸಂತೋಷ . ಬೆಂಗಳೂರು ಬಳಿಯ ಮುಳುಬಾಗಿಲಿನಲ್ಲಿ ಪುರಂದರ ದಾಸರ ಸ್ಮರಣಾರ್ಥ ಕಟ್ಟುತ್ತಿರುವ ‘ಪುರಂದರ ವಿಠ್ಠಲ ಮಂದಿರ’ದ ಕೆಲಸಕ್ಕೆ ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ಹಣ ವಿನಿಯೋಗಿಸಲಾಗುವುದು. ಹೆಚ್ಚಿನ ಧನ ಸಹಾಯ ಮಾಡುವರು ನೇರವಾಗಿ ಮುಳುಬಾಗಿಲು ದೇವಸ್ಥಾನ ನಿರ್ಮಾಣ ಸಮಿತಿಗೆ ಹಣ ಕೊಡಬಹುದು. ಹೆಚ್ಚಿನ ವಿವರಗಳು ಕಾರ್ಯಕ್ರಮದ ದಿನ ಲಭ್ಯವಾಗಲಿವೆ.

ಹರಿಕತೆ ನಡೆಯೋ ಜಾಗದ ಮಾರ್ಗಸೂಚಿ ಹೀಗಿದೆ...

From I95 (also 495, Capital Beltway), take exit 20A, Lanham (Route 450 East). Then, follow the signs for Princes Garden Parkway. Turn Right on Princes Garden Parkway. Murugan Temple is on your left within halfamile (6300, Princess Garden Parkway).

From Baltimore Washington Parkway take Exit to Rt. 193 East, Greenbelt Road. Make left on Greenbelt Rd. Turn Right on Hanover Parkway. Drive about 2.5 miles. The Temple is on the right side.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ-ನಾಗೇಂದ್ರ ಬುಕಿನ್‌ : ಫೋನ್‌ ನಂಬರ್‌ (301) 352- 9256; ಇ- ಮೇಲ್‌ : bukinnagendra@hotmail.com

ಮುನ್ನಾ ಮಾಹಿತಿ : ಡೆಟ್ರಾಯಿಟ್‌ನಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನ- 2002ರಲ್ಲೂ ಸರ್ವೋತ್ತಮ ದಾಸರು ಹರಿಕತೆ ಮಾಡಲಿದ್ದಾರೆ.

(ಇನ್ಫೋ ವಾರ್ತೆ)

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X