ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮಿದುಳಿಗಿಷ್ಟು ಕಸರತ್ತು, ತರಾವರಿ ಪ್ರಶ್ನೆಗಳ ಕರಾಮತ್ತು

By Staff
|
Google Oneindia Kannada News

*ಭಾಸ್ಕರ್‌ ಚಕ್ರಪಾಣಿ, ಮಿನಿಯಾಪೊಲಿಸ್‌

ಈ ಲೇಖನದಲ್ಲಿ ಬರುವ ಪ್ರಶ್ನೋತ್ತರಗಳು ಬಹಳ sillyಯಾಗಿ ಕಾಣಬಹುದು. ಆದರೂ ಇದೊಂದು ದಿನಬಳಕೆಯಲ್ಲಿ ಬರುವ ಮಾತುಗಳ ಒಂದು ಕುಹಕ ನೋಟ.

  1. ನ್ಯಾಯಾಲಯಗಳಲ್ಲಿ ಗಾಂಧೀಜಿ, ನೆಹರು ಇವರುಗಳ ಫೋಟೋಗಳನ್ನು ಏತಕ್ಕೆ ನೇತು ಹಾಕಿರುತ್ತಾರೆ?
  2. ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಬಂದ ಮಲೆಯಾಳಿ ಹೆಂಡತಿಗೆ Divorce ಕೊಡಲು ಏನು ಕಾರಣ?
  3. ಲಾಡುವನ್ನು ಮೇಲಿಂದ ಕೆಳಕ್ಕೆ ಹಾಕಿದರೆ ಏನಾಗುತ್ತದೆ?
  4. ರಾಜ ಹರಿಶ್ಚಂದ್ರ ಬಳಸುತ್ತಿದ್ದ ಟೂತ್‌ ಪೇಸ್ಟ್‌ನ ಹೆಸರೇನು?
  5. ಟೆನ್ನಿಸ್‌ ಆಟದ ಹುಚ್ಚಿರುವ ಮಡಿವಾಳದ ಅಗಸರ ಹುಡುಗರಿಗೆ ಮಗಳು ಹುಟ್ಟಿದರೆ ಅವರಿಡುವ ಹೆಸರೇನು?
  6. ರಾಮಕೃಷ್ಣ ಹೆಗಡೆಯವರು ಗಡ್ಡ ತೆಗೆದರೆ ಅವರ ಹೆಸರು?
  7. ಈಗ ಬೆಂಗಳೂರಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡಲು ಆಗವುದಿಲ್ಲ ಯಾಕೆ?
  8. ಹದಿಹರೆಯದ ಮಗಳು ಮನೆಗೆ ರಾತ್ರಿ ಹತ್ತು ಗಂಟೆಗೆ ಕೆಲಸ ಮುಗಿಸಿ ಬಂದಾಗ...
    ತಂದೆ : ಯಾಕಮ್ಮಾ ಲೇಟಾಗಿ ಬಂದೆ?
    ತಾಯಿ : Why are you late?
    ಅಜ್ಜಿ : ಎನ್ನತಕ್ಕು ಲೇಟ ವಂದೆಮ್ಮಾ?
    ತಾತ : ಎಂದುಕಮ್ಮ ಈ ರೋಜು ಲೇಟ್‌ ಗ ವಚ್ಚಾವು? ಎಂದು ಕೇಳ ತೊಡಗುತ್ತಾರೆ. ಇದರಿಂದ ನಿಮಗೆ ತಿಳಿಯುವ ತಾತ್ಪರ್ಯ....
  9. ಸೀರೆ ಉಟ್ಟ ಹುಡುಗಿ ಈಜುಕೊಳಕ್ಕೆ ಇಳಿದಾಗ ಏನಾಗುತ್ತಾಳೆ?
  10. ಪೆಪ್ಸಿ ಖರೀದಿಸಿದ ಕ್ರಿಕೆಟ್‌ ಅಭಿಮಾನಿಯಾಬ್ಬ ಅದನ್ನು ತೆಗೆದುಕೊಂಡು ಸೌರವ್‌ ಗಂಗೂಲಿಯ ಮನೆಗೆ ಏಕೆ ಹೋದ?
  11. ಅಂಚೆಗೂ ಪಂಚೆಗೂ ಇರುವ ವ್ಯತ್ಯಾಸ?
  12. ಬಾಟ ಶೋ ರೂಮ್‌ ಮಾಲಿಕ ತನ್ನ ಮಗಳ ಮದುವೆಯ ಸಮಯದಲ್ಲಿ ವರನ ಪಾದಪೂಜೆ ಮಾಡುವಾಗ ಏನೆಂದು ಹರಸುತ್ತಾನೆ?
  13. ಅಡಿ ಅಗಲ, 6 ಅಡಿ ಉದ್ದ , 8 ಅಡಿ ಆಳ ತೋಡಿದ ಗುಂಡಿಯಲ್ಲಿ ಎಷ್ಟು ಮಣ್ಣು ಇರುತ್ತೆ?
  14. ಮಗಳು ಪರೀಕ್ಷೆಯಲ್ಲಿ ಫೇಲಾದರೂ ಅವರಪ್ಪ ಶಾಲೆಗೆ ನನ್ನ ಮಗಳೇ First ಎಂದು ಯಾಕೆ ಜಂಬಕೊಚ್ಚಿಕೊಳ್ಳುತ್ತಿದ್ದ?
  15. ಪ್ರೊ।। ಹುಚ್ಚುರಾಯರಿಗೆ ಯಾವಾಗಲು ಹುಡುಗರ ಕಾಟ. ಯಾಕೆಂದರೆ ಹುಡುಗರು ಅವರನ್ನು ಹುಚ್ಚು ಹುಚ್ಚು ಅಂತ ರೇಗಿಸುತ್ತಿದ್ದರು. ಸರಿ ಹೆಂಡತಿಗೂ ಇದರಿಂದ ಬಹಳ ಇರುಸು ಮುರುಸು. ಅವಳ ಸಲಹೆಯ ಮೇರೆಗೆ ಈ ಕಾಟದಿಂದ ಪಾರಾಗಲು ತನ್ನ ಮನೆಯ ಮುಂದಿನ ನೇಮ್‌ ಪ್ಲೇಟ್‌ ಬದಲಾಯಿಸಿದರು- H. ರಾವ್‌ ಅಂತ. ಮಾರನೆ ದಿನದಿಂದ ಹುಡುಗರ ಕಾಟ ಇನ್ನು ಹೆಚ್ಚಾಯಿತು. ಹೇಗೆ?
  16. ಸಿಗರೇಟು ಸೇದುವವರೆಲ್ಲ ಯಾಕೆ ಗಾಂಧಿವಾದಿಗಳಾಗಿರುತ್ತಾರೆ?
  17. ಹೊಸ ವರ್ಷದ ಹಿಂದಿನ ದಿನ ರಾತ್ರಿ 12 ಗಂಟೆ- ದ್ರೌಪದಿ ಸ್ನಾನ ಮಾಡುತ್ತಿದ್ದಳು. ಡಬಡಬ ಎಂದು ಬಾಗಿಲು ಬಡಿದ ಶಬ್ದ. ‘ಯಾರದು’ ಎಂದು ಕೇಳಲು, ‘ಹೊರಗಡೆಯಿದ್ದ ಧೃತರಾಷ್ಟ್ರ ನಾನಮ್ಮ, ನಿನ್ನ ಮಾವ. ಬಾಗಿಲು ತೆಗಿ ಬೇಗ. ಹೊಸವರ್ಷ ನನಗೆ ಬಂದಂತಾಗಿದೆ. ಅದಕ್ಕೇ ಲ್ಲರಿಗೂ ಖುದ್ದಾಗಿ ಸಿಹಿ ಹಂಚುತ್ತಿದ್ದೇನೆ. ನನಗೆ ಸಮಯವೇ ಇಲ್ಲ. ಬೇಗ ಬಾಗಿಲು ತೆಗಿ’ ಅನ್ನುತ್ತಾನೆ. ಕುರುಡು ಮಾವ ಪಾಪ ಏನು ತಿಳಿದುಕೊಳ್ಳುವುದಿಲ್ಲವೆಂದು ಎಣಿಸಿ ಬರಿ ಟರ್ಕಿ ಟವಲೊಂದನ್ನು ಸುತ್ತಿಕೊಂಡು ಹಾಗೆ ಓಡೋಡಿ ಬಂದು ಬಾಗಿಲು ತೆರೆದ ದ್ರೌಪದಿಗೆ ಚಮ್‌ ಚಮ್‌ ಸ್ವೀಟ್‌ ಕೊಟ್ಟ ಧೃತರಾಷ್ಟ್ರ ಅವಳನ್ನು ಅಡಿಯಿಂದ ಮುಡಿವರೆಗೂ ನೋಡಲು ಶುರು ಮಾಡುತ್ತಾನೆ. ಭಯಭೀತಳಾದ ದ್ರೌಪದಿ ‘ಯಾಕೆ ಮಾವ ಏನಾಯಿತು ನಿಮಗೆ’ ಅಂದಾಗ ಅವನು ಕೊಟ್ಟ ಉತ್ತರ ಕೇಳಿ ಅಲ್ಲೇ ಮೂರ್ಛೆ ಹೋಗುತ್ತಾಳೆ. ಕಾರಣ?
  18. ಶಿವ, ಪಾರ್ವತಿ ಮನೆಗೆ ಹೊಸ ಕಂಪ್ಯೂಟರ್‌ ಖರೀದಿಸುತ್ತಾರೆ. ಆದರೆ ಅವರಿಗೆ ಅದನ್ನು ಸರಿಯಾಗಿ ಆಪರೇಟ್‌ ಮಾಡಕ್ಕೆ ಆಗಲಿಲ್ಲ. ಯಾಕೆ?
  19. ಮೇಷ್ಟ್ರು :‘ತೇನ್‌ಸಿಂಗನಿಗೆ ತಾನು ಎಂದಾದರೊಂದು ದಿನ ಮೌಂಟ್‌ ಎವರೆಸ್ಟ್‌ ಏರಿಯೇ ತೀರುತ್ತೇನೆ ಎಂಬ ಅಚಲ ನಂಬಿಕೆ ಇತ್ತು. ಅದಕ್ಕೆ ಸರಿಯಾಗಿ ನಿನಗೆ ತಿಳಿದ ಒಂದು ಗಾದೆಮಾತು ಹೇಳು’ ಎಂದು ನಮ್ಮ ಕೃಷ್ಣಾ ಮೇಲ್ದಂಡೆ ಇಂಜಿನಿಯರ್‌ ಬಲ್ಜಿ ನಾಯಿಡು ಅವರ ಮಗನನ್ನು ಕೇಳಿದರು. ಅವನ ಉತ್ತರ ಕೇಳಿ ಮಾಸ್ತರರೂ ಅಲ್ಲಿಯೆ ಕುಸಿದರು. ಕಾರಣ?
  20. ಸಂಗಮ್‌ ಟಾಕೀಸ್‌ನಲ್ಲಿ ಸೆನ್ಸಾರ್‌ ಕಣ್ಣು ತಪ್ಪಿಸಿ ಹೇಗೋ ಪ್ರದರ್ಶನವಾಗುತ್ತಿದ್ದ ಮಲಯಾಳಿ ಸಿನೆಮಾಗೆ ನಮ್ಮ ಶ್ರೀರಾಮುಲು ಶೆಟ್ಟರ ಹತ್ತು ವರ್ಷದ ಮಗ ಹೋದ. ಟಿಕೇಟು ಕೊಳ್ಳುವಾಗ ಹಣ ಕೊಡಲು ಕೌಂಟರಿನವನೊಡನೆ ಜಗಳಕ್ಕೆ ಇಳಿದ. ಕೊನೆಗೆ ಟಾಕೀಸ್‌ ಮಾಲಿಕನ ತನಕ ಈ ಜಗಳ ಬಂತು. ಮಾಲಿಕ, ಶೆಟ್ಟರ ಮಗನನ್ನು ಹಣಕೊಡದಿರಲು ಕಾರಣ ಕೇಳಿದ. ಅವನು ಕೊಟ್ಟ ಕಾರಣ ಕೇಳಿ ಬೇಸ್ತು ಬಿದ್ದು ಸುಸ್ತಾದ ಮಾಲಿಕ ಕೌಂಟರಿನ ಮುಂದೆ ಇದ್ದ ಬೋರ್ಡನನ್ನು ಬದಲಾಯಿಸಿದ. ಆ ಬೋರ್ಡ್‌ನಲ್ಲಿ ಏನು ಬರೆದಿತ್ತು ?
21. ಉಮಾ ಟಾಕೀಸ್‌ನಲ್ಲಿ ಅಣ್ಣಾವ್ರ ಸಿನೆಮಾ ನಡೆಯೋ ದಿನ ಟಿಕೆಟ್‌ ಹರಿದು ಕೊಡುವ ಮುನಿಸ್ವಾಮಿ ಹಾಗೂ ಜನ ಗಂಗುಳಿ ಇರುವ ದೊಡ್ಡ ಗಣೇಶನ ಗುಡಿ ಪೂಜಾರಿ ಸುಬ್ಬ ಶಾಸ್ತ್ರಿ ಇಬ್ಬರ ಬಾಯಲ್ಲೂ ದಿನ ಬರುವ commonಮಾತುಗಳೇನು ?

22. ಇದ್ದಲಿಗಿಂತ ಕಪ್ಪಗಿದ್ದ ಕರಿಯಪ್ಪ ಸಿನೆಮಾದಲ್ಲಿ ನಾಯಕನಟನಾಗಲು ಬಹಳ ಕಷ್ಟಪಟ್ಟಿದ್ದ. ಆದರೆ ಕಪ್ಪಗಿದ್ದರಿಂದ ಯಾರು ಕ್ಯಾರೆ ಅಂದಿರಲಿಲ್ಲ. ಒಂದು ದಿನ ಮಿಂಚಿನಂತೆ ಐಡಿಯಾವೊಂದು ಮಾಡಿದ. ಸ್ಕಿೃೕನ್‌ ಟೆಸ್ಟ್‌ ನಡೆಯುವ ರೂಮ್‌ನಲ್ಲಿದ್ದ ಅಸಿಸ್ಟೆಂಟ್‌ ನಿರ್ದೇಶಕರಿಗೆ ಭಾವಚಿತ್ರವನ್ನು ತೋರಿಸಿದ್ದ. ಆಗ ಅಲ್ಲಿದ್ದವರೆಲ್ಲ ಅವನಿಗೆ ಸಿಕ್ಕಾಪಟ್ಟೆ ಹೊಡೆದು ಕಳುಹಿಸಿದರು...ಯಾಕೆಂದರೆ...

23. ಅವರೊಬ್ಬ ಖ್ಯಾತ ಡಾಕ್ಟರ್‌. ಆದರೆ ಔಷಧಿ ಕೊಡಲು ಬರುವುದಿಲ್ಲ. ಅವರು ಪಾರ್ವತಿಪತಿ ಆದರೆ ಶಿವನಲ್ಲ. ಅವರಿಗೆ ಕೋಗಿಲೆಯ ಕಂಠ ಆದರೆ ಅವರು ಕೋಗಿಲೆಯಲ್ಲ... ?ಯಾರದು ?

24. ಖ್ಯಾತ ತಮಿಳು ಚಿತ್ರ ನಟಿ ಅಂಬಿಕಾಳಿಗೆ ಮಗ ಹುಟ್ಟಿದರೆ ಅವನು ಯಾವ ಕೆಲಸಕ್ಕೆ ಸೇರುತ್ತಾನೆ ?

25. ಆಗ ತಾನೆ ಟಿ.ಸಿ.ಎಚ್‌ ಮಾಡಿ ಮುಗಿಸಿದ ರಂಜಿತಾಳಿಗೆ ಬೊಮ್ಮನ ಹಳ್ಳಿಯಲ್ಲಿ ಹತ್ತನೇ ಕ್ಲಾಸಿಗೆ ಬಯಾಲಜಿ ಟೀಚರ್‌ ಆಗಿ ಕೆಲಸ ಸಿಕ್ಕಿತ್ತು. ನೋಡಲು ಬಹಳ ಸುಂದರವಾಗಿದ್ದಳು. ಟಿಸಿಎಚ್‌ ಮಾಡುವಾಗಲೇ ಸಾಕಷ್ಟು ಪಡ್ಡೆ ಹುಡುಗರು ಅವಳ ಹಿಂದೆ ಬಿದ್ದಿದ್ದರು. ಪಟ್ಟಣದ ಈ ಹುಡುಗರ ಕಾಟ ತಾಳಲಾರದ ತಂದೆ ತಾಯಿಗಳಿಗೆ ಮಗಳಿಗೆ ಹಳ್ಳಿಯಲ್ಲಿ ಕೆಲಸ ಸಿಕ್ಕಿದ್ದು ಬಹಳ ಸಂತೋಷವನ್ನೇ ಉಂಟು ಮಾಡಿತ್ತು. ಶಾಲೆಗೆ ಬಂದ ಮೊದಲ ದಿನವೇ ಹೊಸ ಮೇಡಂ ಹಳ್ಳಿ ಶ್ಯಾನುಭೋಗ ಕೆಂಪಣ್ಣನಿಂದ ಹಿಡಿದು ದೇವಸ್ಥಾನದ ಪೂಜಾರಿ ಶ್ರೀಕಂಠ ಶಾಸ್ತ್ರಿಗಳವರೆಗೆ ಎಲ್ಲರಿಗೂ ಚಿಟ್ಟು ಹಿಡಿಸಿದ್ದಳು. ಶಾನಭೋಗನ ಮಗ ರವಿ ಅದೇ ಕ್ಲಾಸಿನಲ್ಲಿ ಓದುತ್ತಿದ್ದ. ಒಂದು ದಿನ ಶಾನಭೋಗನಿಗೆ ಎದೆ ನೋವು ಕಾಣಿಸಿಕೊಂಡಿತು. ವೈದ್ಯರು ಶಾನಭೋಗ ಉಳಿಯೋದು ಹೆಚ್ಚೆಂದರೆ ಕೇವಲ ಅರ್ಧ ಗಂಟೆ ಮಾತ್ರ ಎಂದರು. ಸರಿ ಅಲ್ಪ ಸ್ವಲ್ಪ ಇಂಗ್ಲಿಷ್‌ ಗೊತ್ತಿದ್ದ ಅವನ ಲೆಕ್ಕಿಗ ಶಂಭುಲಿಂಗನಿಗೆ ಶಾಲೆಗೆ ಹೋಗಿ ನನ್ನ ಮಗ ರವಿನಾ ಕರ್ಕೊಂಡು ಬಾಲಲೆಂದು ಹೇಳಿ ಕಳಿಸಿದ. ಅದೇ ಶಾಲೆಯಲ್ಲಿ ಅದೇ ಹೆಸರಿನ ಇನ್ನೂ ಮೂರು ಜನ ರವಿಗಳಿದ್ದರು. ಶಂಭುಲಿಂಗ ಸ್ವಲ್ಪ ಯೋಚಿಸಿದ . ಮೇಡಂಗೆ ಸರಿಯಾದ ರವಿ ಯಾರೆಂದು ಗೊತ್ತಾಗಲಿ ಎಂದು ಸ್ವಲ್ಪ ಆಲೋಚನೆ ಮಾಡಿ ಪಾಠ ಮಾಡುತ್ತಿದ್ದ ರಂಜಿತಾಳ ಬಳಿ ಬಂದವನೇ ಅವನಿಗೆ ಗೊತ್ತಿದ್ದ ಭಾಷೆಯಲ್ಲಿ ಶಾನಭೋಗರ ಕೊನೆಯ ಆಸೆಯನ್ನು ಅವಳ ಮುಂದಿಟ್ಟಾಗ ಅವಳಿಂದ ಎಕ್ಕಡ ಸೇವೆ ಮಾಡಿಸಿಕೊಂಡ. ಯಾಕೆ ?

26. ನೀವು ಒಂದು ಬಹಳ ಥಂಡಿಯಾಗಿರುವ ಮನೆಯಲ್ಲಿ ಇದ್ದೀರ. ಮನೆಯಲ್ಲಿ ಕರೆಂಟು ಕೂಡ ಇಲ್ಲ. ಏನೇನೂ ಕಾಣುತ್ತಿಲ್ಲ. ಮೈ ಬೆಚ್ಚಗೆ ಮಾಡಿಕೊಳ್ಳಲು ಕಾಫಿ ಕುಡಿಯಬೇಕು ಅನ್ನಿಸುತ್ತಿದೆ. ನಿಮ್ಮ ಬಳಿ ಒಂದು ಒಂದು ಬೆಂಕಿ ಕಡ್ಡಿ ಇದೆ . ದೂರದ ಒಲೆಯಲ್ಲಿ ಕಾಫಿ ಪಾತ್ರೆ ಇದೆ. ಪಕ್ಕದಲ್ಲಿ ಮೇಣದ ಬತ್ತಿ ಇದೆ. ಈಗ ನೀವು ಮೊದಲುಯಾವುದನ್ನು ಹಚ್ಚುತ್ತೀರಿ ?

27. ರಾಮು ಪರೀಕ್ಷೆಯಲ್ಲಿ ಎಲ್ಲ ಸಬ್ಜೆಕ್ಟಲ್ಲೂ ನೂರಕ್ಕೆ ನೂರು ಮಾರ್ಕ್ಸ್‌ ತೆಗೆದರೂ ಅವನಿಗೆ ಮಿಲಿಟ್ರಿಯಲ್ಲಿ ಕೆಲಸ ಸಿಗಲಿಲ್ಲ. ಆದರೆ ಮನ್ಸೂರ್‌ ಪಾಶನಿಗೆ ಎಲ್ಲಾ ಸಬ್ಜೆಕ್ಟಿನಲ್ಲು ಬರಿ ಮೂವತ್ತೆೈದು ಮಾರ್ಕ್ಸ್‌ ಮಾತ್ರ ಬಂದಿದ್ದರೂ ಯಾಕೆ ಮಿಲಿಟ್ರಿಯಲ್ಲಿ ಕೆಲಸ ಸಿಕ್ಕಿತು ?
28. ಟೈಗರ್‌ ಪ್ರಭಾಕರ್‌ ಅವರು ತಾವು ಖಳನಾಯಕರಾಗಿದ್ದ ಕಾಲದಲ್ಲಿ ಒಮ್ಮೆ ಅನಾರೋಗ್ಯ ಪೀಡಿತರಾಗಿ ಕಾರಂತ್‌ ನರ್ಸಿಂಗ್‌ ಹೋಮ್‌ಗೆ ಸೇರಿದ್ದರು. ಎರಡು ತಿಂಗಳ ನಂತರ ಗುಣಮುಖರಾಗಿ ಮತ್ತೆ ಚಿತ್ರಗಳಲ್ಲಿ ನಟಿಸತೊಡಗಿದರು. ‘ ಖದೀಮ ಕಳ್ಳರು’ಎಂಬ ಸಿನೆಮಾ ಶೂಟಿಂಗ್‌ ಸಮಯದಲ್ಲಿ ಚಿತ್ರದ ನಾಯಕಿಯ ನೆಕ್ಲೇಸನ್ನು ಯಾರಿಗೂ ತಿಳಿಯದೆ ಕದ್ದು ಮನೆಗೆ ಬಂದು ತಮ್ಮ ಮೊದಲ ಹೆಂಡತಿಗೆ ಕಾಣಿಕೆಯಾಗಿ ಕೊಟ್ಟರು. ಆದರೆ ಮಾರನೆ ದಿನವೇ ಪೊಲೀಸ್‌ ಅವರನ್ನು ಈ ಕಳ್ಳತನಕ್ಕೆ ಬಂಧಿಸಿದರು. ಇದು ಹೇಗೆ ಸಾಧ್ಯವಾಯಿತು ?

29. ಅಕ್ಕಸಾಲಿ ಶಂಕರ ಒಂದು ಚಿನ್ನ ಬೆಳ್ಳಿ ಅಂಗಡಿ ನಡೆಸುತ್ತಿದ್ದ. ಅವನು ಸಂಗೀತ ಪ್ರಧಾನ ತೆಲುಗು ಚಿತ್ರ ನಿರ್ಮಿಸಿ ನಟಿಸಿದರೆ ಅದಕ್ಕೆ ಏನು ಹೆಸರಿಡುತ್ತಾನೆ ?

30. ನಮ್ಮ ಕನ್ನಡದ ಮಾಜಿ ನಟಿ ಆರತಿ ಬಹಳ ವರ್ಷಗಳ ನಂತರ ಅಮೆರಿಕಾದಿಂದ ಭಾರತಕ್ಕೆ ಬಂದು ವಾಸ ಮಾಡತೊಡಗಿದರು. ಆದರೆ ವಾಸ ಮಾಡುತ್ತಿದ್ದ ಮನೆಗೆ ಬಾಡಿಗೆ ಕೊಡುತ್ತಿರಲಿಲ್ಲ. ಯಾಕೆಂದರೆ...

31. ಗೋವಿಂದ, ಗೋಪಾಲ ಕುಖ್ಯಾತ ಬ್ಯಾಂಕ್‌ ದರೋಡೆ ಕೋರರು. ಆದರೆ ಅವರಿಗೆ ಲೆಕ್ಕ , ಗಣಿತ ಇವುಗಳೆಲ್ಲ ತಲೆಗೆ ಹತ್ತುತ್ತಲೇ ಇರಲಿಲ್ಲ. ಪ್ರತಿ ಬಾರಿ ತಾವು ಕದ್ದ ಹಣ ಎಷ್ಟು ಎಂದು ನೋಡಲು ಅವರು ಏನು ಮಾಡುತ್ತಿದ್ದರು ?

32. ಒಮ್ಮೆ ಕಾಡಿನಲ್ಲಿ ಹತ್ತು ಜನ ಹೋಗುತ್ತಿದ್ದರು. ಇದ್ದಕಿದ್ದಂತೆ ಅವರನ್ನು ಒಂದು ಸಿಂಹ ಅಟ್ಟಿಸಿಕೊಂಡು ಬಂದಿತು. ಆದರೆ ಐದು ಜನರನ್ನು ಮಾತ್ರ ಕೊಂದು ತಿಂದು ಹಾಕಿತು. ಮಿಕ್ಕ ಐದು ಜನರನ್ನು ಒಮ್ಮೆ ಅವರ ಮುಖಗಳನ್ನು ನೋಡಿ ಹೋಗಲಿ, ಬದುಕಿಕೊಳ್ಳಲಿ ಎಂದು ಬಿಟ್ಟಿತು. ಯಾಕೆ?

33. ನಮ್ಮ ಕನ್ನಡ ಹಾಸ್ಯನಟರಾಗಿದ್ದ ಎನ್‌.ಎಸ್‌. ರಾವ್‌ ಅವರಿಗೆ ಒಮ್ಮೆ ಹಾವು ಕಚ್ಚಿತು. ಆಗ ಅವರು ಯಾವ ದೇವರನ್ನು ಬೇಡಿಕೊಳ್ಳುತ್ತಾರೆ.

34. ಖ್ಯಾತ ಚೈನಾ ನಟ

bruce lee ಕನ್ನಡ ನಟಿಯರನ್ನು ಮದುವೆ ಆದರೆ ಯಾರನ್ನ ಮದುವೆ ಆಗುತ್ತಾನೆ ?


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X