ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಆರ್‌.ಕೆ.ಶ್ರೀಕಂಠನ್‌! ಸಂಗೀತ ಕಚೇರಿ ಯೋಗಾಯೋಗ!

By Staff
|
Google Oneindia Kannada News

R.K. Srikantanಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧ ರಾದವರ ಕಚೇರಿ ಕೇಳುವುದೇ ಒಂದು ಅಪೂರ್ವ ಅನುಭವ. ಆ ಅನುಭವವನ್ನು ಯೋಗಾಯೋಗ ಅಂದರೂ ಆದೀತು. ಅಂಥ ಯೋಗಾಯೋಗದ ಸಂಗೀತ ಕಚೇರಿಯನ್ನು ಆಯೋಜಿಸುವ ಅಪೂರ್ವ ಅವಕಾಶವೊಂದು ಇಲ್ಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ ಆರ್‌. ಕೆ. ಶ್ರೀಕಂಠನ್‌ ಮತ್ತು ಅವರ ಪುತ್ರ, ರಮಾಕಾಂತ್‌ ಈಗ ಅಮೆರಿಕಾ ಪ್ರವಾಸದಲ್ಲಿದ್ದಾರೆ!

ಆರ್‌. ಕೆ. ಶ್ರೀಕಂಠನ್‌ ಮತ್ತು ರಮಾಕಾಂತ್‌ ಅವರ ಸಂಗೀತ ಕಚೇರಿಯನ್ನು ನಿಮ್ಮ ಏರಿಯಾದಲ್ಲಿಯೂ ಆಯೋಜಿಸಬಹುದು. ಇಬ್ಬರೂ ಸಂಗೀತ ವಿದ್ವಾನ್‌ಗಳು. ಕಾರ್ಯಕ್ರಮ ಆಯೋಜಕರಿಗೆ ಅನುಕೂಲವಾಗುವಂತೆ ಇಬ್ಬರು ಸಂಗೀತ ದಿಗ್ಗಜರ ಪ್ರವಾಸ ವಿವರ ಮತ್ತು ಸಂಪರ್ಕ ವಿಳಾಸಗಳು ಇಲ್ಲಿವೆ.

ಏಪ್ರಿಲ್‌ 27: ಚಿಕಾಗೋ, ಸಂಪರ್ಕ : ವೆಂಕಟರಮಣ - 630-416-8335
ಏಪ್ರಿಲ್‌ 28: ನ್ಯೂಜೆರ್ಸಿ, ಸಂಪರ್ಕ: ಡಾ. ಆಶಾ ಜನಾರ್ಧನ್‌, CMANA ಅಧ್ಯಕ್ಷೆ - 9083228750, ಅದೇ ದಿನ ನ್ಯೂಯಾರ್ಕ್‌ಗೂ ಶ್ರೀ ಕಂಠನ್‌ ತೆರಳುತ್ತಾರೆ. ಸಂಪರ್ಕ : ಚಂದ್ರಮೌಳಿ - 732-432-9663
ಮೇ 3, 4 ಮತ್ತು 5: ಪಿಟ್ಸ್‌ಬರ್ಗ್‌ ಹಾಗೂ ಪೆನ್ಸಿಲ್ವೇನಿಯಾ
ಮೇ 11ರಂದು ರಾಲೇಫ್‌, ಉತ್ತರ ಕ್ಯಾಲಿಫೋರ್ನಿಯಾ. ಅಲ್ಲದೆ ಮೇ 18, 25 26 ಮತ್ತು ಜೂನ್‌ 2, 8 ರಂದೂ ಶ್ರೀ ಕಂಠನ್‌ ಅವರು ಬಿಡುವಾಗಿರುತ್ತಾರೆ. ಜೂನ್‌ 11ರಂದು ಅವರು ಭಾರತದ ವಿಮಾನವೇರುತ್ತಾರೆ. ಕಾರ್ಯಕ್ರಮವನ್ನು ಆಯೋಜಿಸಲು ಆಸಕ್ತಿ ಇರುವವರು ವಿ.ಎಂ. ಕುಮಾರಸ್ವಾಮಿ ಅವರನ್ನು ಸಂಪರ್ಕಿಸಬಹುದು. 949-857-8578,

949-857-8044 ,714-542-9976 , 714-542-9762 , ( ಫ್ಯಾಕ್ಸ್‌) 714-542-9597. ಈಮೇಯ್ಲ್‌ [email protected]

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X