ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಂಟ್‌ಲೂಯಿಸ್‌ ‘ಸಂಗಮ’ದ ರಾಜ್ಯೋತ್ಸವದಲ್ಲಿ ಪ್ರೊ.ನಿಸಾರ್‌

By Staff
|
Google Oneindia Kannada News

*ಹೇಮಾ ಶ್ರೀಕಂಠ, ಸೇಂಟ್‌ ಲೂಯಿಸ್‌, ಮಿಸ್ಸೌರಿ

Nisar Ahmedಸೇಂಟ್‌ ಲೂಯಿಸ್‌ನ ಮಹಾತ್ಮಗಾಂಧಿ ಕೇಂದ್ರದಲ್ಲಿ ಕನ್ನಡ ಸಂಸ್ಕೃತಿಯ, ವಿಶೇಷವಾಗಿ ಜಾನಪದದ ಘಮಲು. ಅದು ‘ಸಂಗಮ’ ಕನ್ನಡ ರಾಜ್ಯೋತ್ಸವದ ಸಮಾರಂಭ.

‘ಸಂಗಮ’ ಬಳಗದ ಕನ್ನಡ ರಾಜ್ಯೋತ್ಸವದ ಈ ವರ್ಷದ ವಸ್ತು ವಿಷಯ- ‘ಜನಪದ’.
ಸಂಗಮದ ಮಕ್ಕಳು, ಹೆಂಗೆಳೆಯರು ಹಾಗೂ ಪುರುಷರು ರಂಗು ರಂಗಿನ ಜಾನಪದ ಉಡುಪುಗಳನ್ನು ಧರಿಸಿ ನಾಡಹಬ್ಬದ ಕಾರ್ಯಕ್ರಮಕ್ಕೆ ಬಂದಿದ್ದರು. ಮಹಾತ್ಮ ಗಾಂಧಿ ಕೇಂದ್ರ ಜನಪದ ವಸ್ತು ವಿಷಯಗಳಿಂದ ಅಲಂಕರಿಸಲ್ಪಟ್ಟು ಸಂಭ್ರಮದಿಂದ ತುಳುಕಾಡುತಿತ್ತು.

ಡೆಟ್ರಾಯಿಟ್‌ ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಅಮೆರಿಕಕ್ಕೆ ಬಂದು, ಕನ್ನಡ ಸಂಘಗಳ ಮೂಲಕ ಅಮೆರಿಕನ್ನಡಿಗರ ಭೇಟಿಯಾಗುತ್ತಿರುವ ಪ್ರೊಫೆಸರ್‌ ಕೆ.ಎಸ್‌. ನಿಸಾರ್‌ ಅಹಮದ್‌ ನಮ್ಮೂರಿಗೂ ಆಗಮಿಸಿದ್ದರು. ಸಂಗಮ ಬಳಗದ ಕನ್ನಡ ರಾಜ್ಯೋತ್ಸವದ ಮುಖ್ಯ ಅತಿಥಿ ನಿಸಾರ್‌ ಅವರೇ.

‘ಕನ್ನಡತನ’ವನ್ನು ಉಳಿಸಿ, ಬೆಳಸಿಕೊಂಡು ಬನ್ನಿ ಎಂದು ನಿಸಾರ್‌ ಅಹಮದ್‌ ಕಳಕಳಿಯಿಂದ ಮನವಿ ಮಾಡಿಕೊಂಡರು. ಜನಪದ ಸಾಹಿತ್ಯವನ್ನು ಕುರಿತು ಹಲವು ಮಾತನ್ನಾಡಿದರು. ಹಳ್ಳಿಯ ಜನ ತಮ್ಮ ದಿನ ನಿತ್ಯದ ಕೆಲಸದೊಂದಿಗೆ ಹಾಡುವ ಸುಲಭ ಕನ್ನಡದ ಪದಗಳಲ್ಲಿ ಜೀವನದ ಆಳವಾದ ವಿಚಾರಗಳನ್ನು ಹೇಳುವ ಪರಿಯನ್ನು ಕೆಲವು ಉಪಮೆಗಳೊಂದಿಗೆ ನಿಸಾರ್‌ ತಿಳಿಯಪಡಿಸಿದರು.

ನಾನು ಪ್ರೊಫೆಸರ್‌ ನಿಸಾರ್‌ ಅಹಮದ್‌ ರ ಬಗ್ಗೆ ಬರೆದ ‘ಕನ್ನಡದ ದೀಪ’ ಕವಿತೆಯನ್ನು ನಾನು ಹಾಗೂ ನನ್ನ ಪತಿ ಶ್ರೀಕಂಠ್‌ ಓದಿ ನಿಸಾರರಿಗೆ ಅರ್ಪಿಸಿದೆವು.

ಕಾರ್ಯಕ್ರಮದ ನಂತರ ರಾಗಿ ಮುದ್ದೆ, ಸೊಪ್ಪಿನ ಹುಳಿ ಕಾಂಬಿನೇಷನ್‌ನ ರುಚಿಯಾದ ಊಟ. ಜೊತೆಗೆ ಹೆಸರುಬೇಳೆ ಪಾಯಸ ಮತ್ತು ಜಾನಪದ ಸವಿ ಅಡಿಗೆಗಳು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X