• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಂಚ ನಾಟಕಗಳ ಹಬ್ಬದೊಂದಿಗೆ ಚಿತ್ರಭಾನು ಸ್ವಾಗತಿಸಿದ ಎನ್‌ಇಕೆಕೆ

By Staff
|

*ವಾದಿರಾಜ ಮನಗೋಳಿ

Dr. Gururaj Deshpande, Cheif guest of Yugadi program‘ಯುಗ ಯುಗಾದಿ ಬರುತಿದೆ, ಯುಗಾದಿ ಹೊಸತು ತರುತಿದೆ !’ ಮೇ 11ರಂದು ನ್ಯೂ ಇಂಗ್ಲೆಂಡ್‌ ಕನ್ನಡ ಕೂಟ (ಎನ್‌ಇಕೆಕೆ)ದಲ್ಲಿ ಚಿತ್ರಭಾನುವಾನ್ನು ಬರಮಾಡಿಕೊಳ್ಳುವ ಸಂಭ್ರಮ. ಯುಗಾದಿಯ ಸ್ವಾಗತ ಕಾರ್ಯಕ್ರಮವನ್ನು ಎನ್‌ಇಕೆಕೆಯು ಬಹಳ ವಿಜೃಂಭಣೆಯಿಂದಲೇ ಆಚರಿಸಿತು. ನಾಟಕಗಳ ಆಗರವಾಗಿದ್ದ ಈ ಕಾರ್ಯಕ್ರಮದಲ್ಲಿ ಐದು ನಾಟಕಗಳು ನೋಡುಗರ ಮನ ಸೂರೆಗೊಂಡವು.

ಶಾರದಾ ಮತ್ತು ಶಿಲ್ಪಾರ ಸ್ವಾಗತ ಗೀತೆ ಹಾಗೂ ಕೂಟದ ಅಧ್ಯಕ್ಷ ಡಾ. ಪ್ರಕಾಶ್‌ ಪುರೋಹಿತರ ಸ್ವಾಗತ ಭಾಷಣಗಳೊಂದಿಗೆ ನಾಟಕಗಳ ಪ್ರವಾಹದ ಕಟ್ಟೆ ಒಡೆಯಿತು.

ಮೊದಲು ‘ ಬಾಲವಿಹಾರ’ ದ ಚಿಣ್ಣರಿಂದ ‘ ತಿರುಕ ರಾಜಕುಮಾರ’(ನಿರ್ದೇಶನ ಸೌಮ್ಯ ಮತ್ತು ಶೈಲಾ) ಹಾಗೂ ಡಾ. ಪ್ರಕಾಶ್‌ ಪುರೋಹಿತರ ನಿರ್ದೇಶನದಲ್ಲಿ ‘ಕಿತ್ತೂರು ಚೆನ್ನಮ್ಮ ’(ಶೃಂಗಾರ ತಂಡದ ಮಕ್ಕಳು) ನಾಟಕದ ಮೂಲಕ ಪುಟ್ಟ ಪುಟ್ಟ ರಂಗಭೂಮಿ ಪ್ರತಿಭೆಗಳು ವೇದಿಕೆ ಬಂದರು. ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.

ಕಿತ್ತೂರು ಚೆನ್ನಮ್ಮಳಾಗಿ ಪ್ರೇರಣಾಳ ಅಭಿನಯ ಫೆಂಟಾಸ್ಟಿಕ್‌. ನಂತರ ಕೂಟದ ಅತ್ಯುತ್ತಮ ಕಾರ್ಯಕರ್ತೆಯರಲ್ಲೊಬ್ಬರಾದ ಪೂರ್ಣಿಮಾ ರಿಸಬುಡ್‌ರ ನಿರ್ದೇಶನದ ‘ಭಕ್ತ ಪ್ರಹ್ಲಾದ’ ನಾಟಕ ‘ರಸರಂಗ’ ತಂಡದ ಮಕ್ಕಳಿಂದ ಬಹಳ ಚೆನ್ನಾಗಿ ಮೂಡಿ ಬಂತು. ವಯಸ್ಸಿಗೂ ಮೀರಿದ ಅಭಿನಯ ಪ್ರತಿಭೆ ಪ್ರದರ್ಶಿಸಿದ ಶಾಲಿನಿ ಜಯರಾಂ (ಹಿರಣ್ಯಕಶಿಪು) ಮತ್ತು ಶಚಿ ರಿಸಬುಡ್‌(ಪ್ರಹ್ಲಾದ) ಪ್ರೇಕ್ಷಕರಿಂದ ಶಹಬ್ಬಾಸ್‌ಗಿರಿ ಪಡೆದರು.

ಮಧ್ಯಂತರದಲ್ಲಿ ಅಧ್ಯಕ್ಷ ಡಾ. ಪ್ರಕಾಶರು ಕೂಟಕ್ಕೆ ಹೊಸ ಲಾಂಛನ ಹಾಗೂ ಹೊಸ ಹೆಸರು, ‘ಮಂದಾರ’(ಮಂದಾರ - ನ್ಯೂಇಂಗ್ಲೆಂಡ್‌ ಕನ್ನಡ ಕೂಟ) ದ ಬಗ್ಗೆ ಪ್ರಸ್ತಾವನೆಯನ್ನಿಟ್ಟರು.

ನಂತರ ಕಾರ್ಯಕ್ರಮದ ವಿಶೇಷ ಅತಿಥಿಗಳಾದ ಡಾ. ಗುರುರಾಜ ದೇಶಪಾಂಡೆಯವರು ತಮ್ಮ ಧರ್ಮಪತ್ನಿ ಜಯಶ್ರೀ ಅವರೊಂದಿಗೆ ವೇದಿಕೆಯ ಮೇಲೆ ಆಗಮಿಸಿ ‘ದರ್ಪಣ’ ವಾರ್ತಾ ಸಂಚಿಕೆಯನ್ನು ಬಿಡುಗಡೆ ಮಾಡಿದರು. ವಿಶೇಷ ಅತಿಥಿಗಳ ಮನೆಗೆ ಅತಿಥಿಯಾಗಿ ಬಂದಿದ್ದ ಇನ್ಫೋಸಿಸ್‌ ಫೌಂಡೇಷನ್ನಿನ ಧರ್ಮದರ್ಶಿ ಸುಧಾ ಮೂರ್ತಿಯವರು ಕಾರ್ಯಕ್ರಮಕ್ಕೆ ಆಗಮಿಸಿದ್ದು ಮತ್ತೊಂದು ವಿಶೇಷ. ಡಾ. ದೇಶಪಾಂಡೆಯವರು ಯುಗಾದಿ ಹಾಗೂ ಬೇವು ಬೆಲ್ಲದ ಮಹತ್ವದ ಬಗ್ಗೆ ಮಾತಾಡಿದರೆ, ಸರಳತೆ ಮತ್ತು ಸಜ್ಜನಿಕೆಗೆ ಹೆಸರಾದ ಸುಧಾ ಅವರು ಸಮಾಜ ಸೇವೆಯ ಬಗ್ಗೆ ಮಾತನಾಡಿದರು.

ಈಗ ಎರಡನೆ ಸುತ್ತು. ಹಿರಿಯರ ಸರದಿ. ಪೂರ್ಣಿಮಾ ನಿರ್ದೇಶನದಲ್ಲಿ , ಫೀನಿಕ್ಸ್‌- ಅರಿರೆkೂೕನಾದ ಡಾ. ಸುರೇಶ ಮೈಸೂರ ರಚಿತ ನಾಟಕ ‘ ಸಾಹಿತ್ಯಕ್ಕೇನು ಬೆಲೆ’ ಯನ್ನು ‘ ರಸರಂಗ’ ತಂಡದ ಕಲಾವಿದರು ಚೆನ್ನಾಗಿ ಅಭಿನಯಿಸಿ ತೋರಿಸಿದರು. ಕೊನೆಯದಾಗಿ ಪ್ರದರ್ಶನಗೊಂಡ ನಾಟಕ ‘ಗೌಡರ ಅಳಿಯ’. ಉತ್ತರ ಕರ್ನಾಟಕದ ಭಾಷೆಯ ಸೊಗಡಿನೊಂದಿಗೆ ಮೂಡಿ ಬಂತು. ಡಾ. ವೀರಣ್ಣ ರಾಜೂರರು ಬರೆದ, ಡಾ.ಪ್ರಕಾಶ್‌ ಪುರೋಹಿತರ ನಿರ್ದೇಶನದಲ್ಲಿ, ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ, ಬಹುತೇಕ ಉತ್ತರ ಕರ್ನಾಟಕದ ಜನರಿಂದ ಆಡಲ್ಪಟ್ಟ ‘ಗೌಡರ ಅಳಿಯ’(‘ಶೃಂಗಾರ’ ತಂಡ) ಹಸಿದ ಪ್ರೇಕ್ಷಕರ ಮುಖದಲ್ಲಿ ನಗೆಯ ಅಲೆಗಳನ್ನು ತಂದಿತು.

ರಾತ್ರಿಯೂಟದ ಸವಿಯ ಗಮತ್ತೇ ಬೇರೆ. ಕನ್ನಡಿಗರಿಗೆ ವಿಧವಿಧ ಭೋಜನದ ವ್ಯವಸ್ಥೆಯನ್ನು ಕೂಟದ ಸ್ವಯಂ ಸೇವಕರು ಅಚ್ಚುಕಟ್ಟಾಗಿ ನೆರವೇರಿಸಿದರು. ಒಬ್ಬಟ್ಟು(ಹೋಳಿಗೆ) , ಚಪಾತಿ, ಚಿತ್ರಾನ್ನ, ಕಾಳಿನ ಪಲ್ಯಗಳು ನಾಟಕಗಳನ್ನು ನೋಡಿ ಆನಂದಿಸಿದ ಕನ್ನಡಿಗರ ಹೊಟ್ಟೆಗೆ ಬಲಿಯಾದವು. ರಸಸಂಜೆಯನ್ನು ಉತ್ತಮ ಭೋಜನದೊಂದಿಗೆ ಮುಗಿಸಿ, ಯುಗಾದಿ ನೆನಪಿನೊಂದಿಗೆ ಮನೆ ಕಡೆಗೆ ಹೊರಟಾಗ ಸಮಯ ರಾತ್ರಿ 10 ಗಂಟೆ !

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more