• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏ.14 ರಂದು ಯಕ್ಷಗಾನ ತಾಳಮದ್ದಳೆಗೆ ಭೂಮಿಕಾದಲ್ಲೊಂದು ಭೂಮಿಕೆ!

By Staff
|

Yakshagana : a file photoಒಂದು ಕಡೆ ಬಿಳಿ ಶರಟು ತೊಟ್ಟು ,ದಪ್ಪ ಗಾಜು ಹಾಕಿಕೊಂಡು ಎಲೆ ಅಡಿಕೆ ಜಗಿಯುತ್ತಾ ಮುಂದೆ ಕುಳಿತಿರುವವನ ಮಾತಿಗೆ ಕಿವಿಯಾಲಿಸಿ ಕುಳಿತ ವಾಲಿಯ ಪಾತ್ರಧಾರಿ. ಆತನಿಗೆದುರಾಗಿ ಕುಳಿತವ ಶ್ರೀರಾಮನ ಪಾತ್ರಧಾರಿ.

ರಾಮಬಾಣದಿಂದ ಇನ್ನೇನು ಎರಡು ಕ್ಷಣಕ್ಕೇ ಸಾಯಲಿರುವ ವಾಲಿ ರಾಮನ ನ್ಯಾಯವನ್ನು ಪ್ರಶ್ನಿಸುತ್ತಾನೆ. ರಾಮ ವಾಲಿಯರ ಜಟಾಪಟಿಯೆಂದರೆ ಪ್ರೇಕ್ಷಕರು ಉಸಿರು ಬಿಗಿಹಿಡಿದು ಅರ್ಥದಾರಿಗಳ ಜಾಣ್ಮೆಯನ್ನು ತೂಗಿ ತೂಗಿ ತಲೆದೂಗುತ್ತಿರುತ್ತಾರೆ. ಭಾಗವತರು, ಕನ್ನಡಕ ಮತ್ತು ಜಾಗಟೆಯನ್ನು ಭಾಗವತಿಕೆ ಪುಸ್ತಕದ ಮೇಲಿಟ್ಟು ಹೊಸ ಬೀಡಾ ಕೊಳ್ಳಲು ಅಂಗಡಿಗೆ ಹೋಗುತ್ತಾರೆ. ಅಷ್ಟೂ ಹೊತ್ತು ವಾದ ಪ್ರತಿವಾದಗಳು ಮುಂದುವರೆಯುತ್ತದೆ... ಯಕ್ಷಗಾನ ತಾಳಮದ್ದಳೆಯ ಮಾತೆತ್ತಿದರೆ ಇಂತಹ ಪ್ರಸಂಗಗಳು ತಲೆಯಾಳಗಿಂದ ತೂರಿಕೊಂಡು ಬರುತ್ತವೆ.

ನಿಮ್ಮ ಯಕ್ಷಗಾನದ ಪಸಂದಿಗೆ ಒಪ್ಪವಾಗಿ ಭೂಮಿಕಾ ಕನ್ನಡ ಸಂಘದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಾಂತಿ ತಂತ್ರಿ ಮತ್ತು ಉಡುಪಿ ಪುರುಷೋತ್ತಮ ರಾವ್‌ ಅವರು ಏಪ್ರಿಲ್‌ 14ರಂದು ಭಾನುವಾರ ಮಧ್ಯಾಹ್ನ ಕರ್ನಾಟಕದ ಪೌರಾಣಿಕ ಕಲೆ ಯಕ್ಷಗಾನ ಕುರಿತಂತೆ ತಾಳಮದ್ದಳೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸ್ಥಳ ಬಾವರ್‌ ಕಮ್ಯೂನಿಟಿ ಸೆಂಟರ್‌. (Bauer Drive Community Center, 14625, Bauer Drive, Rockville, MD 20853).

ಕಾರ್ಯಕ್ರಮದಲ್ಲಿ ಚರ್ಚೆಯಾಗಲಿರುವ ವಿಷಯಗಳು :

  • ಸಹ್ಯಾದ್ರಿ ವಲಯದಲ್ಲಿ ಯಕ್ಷಗಾನದ ಹುಟ್ಟು ಹಾಗೂ ಅಭಿವೃದ್ಧಿ
  • ಪ್ರಸ್ತುತ ರೂಢಿಯಲ್ಲಿರುವ ತಾಂತ್ರಿಕತೆ, ಪ್ರಸಾದನ, ವೇಷಭೂಷಣ ಮತ್ತಿತರ ದೃಷ್ಟಿಕೋನಗಳು
  • ಒಂದು ಪೌರಾಣಿಕ ಪ್ರಸಂಗ ಆಧಾರಿತ ತಾಳಮದ್ದಳೆ

ಈ ಸಂದರ್ಭದಲ್ಲಿ ಮಾತನಾಡುವ ಶಾಂತಿ ತಂತ್ರಿ ಮತ್ತು ಪುರುಷೋತ್ತಮ ರಾವ್‌ ಅವರು ಯಕ್ಷಗಾನದ ಹಿನ್ನೆಲೆಯಿಂದ ಬಂದವರು. ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಯಕ್ಷಗಾನದ ಬಗೆಗಿನ ಮೂಢನಂಬಿಕೆಗಳ ಬಗ್ಗೆಯೂ ಇವರು ವಿವರಿಸಲಿದ್ದಾರೆ.

ಕಾರ್ಯಕ್ರಮ ಸ್ಥಳಕ್ಕೆ ದಾರಿ ಇಲ್ಲಿದೆ :
From Beltway to I270N to Exit 6
From I270 S to Exit # 6 which is Rt 28(W. Montgomery Ave) towards Rockville. This becomes Viers Mill Rd (Rte 586) Make left at Norbeck Rd (Rt 28) After 5 traffic lights, make right on to Bauer Drive. Community center is on your left Tel: 3014684015

ಹೆಚ್ಚಿ ನ ಮಾಹಿತಿಗೆ ಸಂಪರ್ಕಿಸಿ :
Vijaya Kulakarni: 3018712234, Padmaja Prabhakara: 3019249360,
Indira Prativadi: 3016701665, Jaya Nagendra: 3013529256
Visit www.bhoomikaa.org


(ಇನ್ಫೋ ವಾರ್ತೆ)

Post your Views

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more