ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ 20ರಂದು ವ್ಯಾಂಕೋವರ್‌ನಲ್ಲಿ ದಸರಾ ಮಸ್ತ್‌ ಮಜಾ

By Staff
|
Google Oneindia Kannada News

ಸಾಗರದಾಚೆಗೆ ಹೋದರೂ ಅಕ್ಟೋಬರ್‌- ನವೆಂಬರ್‌ ತಿಂಗಳ ಹಬ್ಬದ ಮೂಡು ಮನಸ್ಸಲ್ಲಿ ಇದ್ದೇ ಇರುತ್ತದೆ. ಅದರಲ್ಲೂ ನವರಾತ್ರಿ ಪೂಜೆಯನ್ನು ಈಗಲೂ ಸಾಂಗೋಪಾಂಗವಾಗಿ ಮಾಡುವವರು ಕಡಿಮೆಯೇನೂ ಇಲ್ಲ. ಬೊಂಬೆ ಕೂರಿಸಿ, ಅದನ್ನು ನಿಭಾಯಿಸುವವರ ಸಂಖ್ಯೆ ಕಡಿಮೆಯಾಗಿರಬಹುದಷ್ಟೆ. ನಿಮ್ಮ ಹಬ್ಬದ ಮೂಡಿಗೆ ಒಂದಿಷ್ಟು ಕಸುವು ತುಂಬಲು, ಕನ್ನಡ ತನವನ್ನು ಅನುಭವಿಸಲು, ಒಂದಿಷ್ಟು ಕನ್ನಡಿಗರ ಜೊತೆ ಬೆರೆಯಲು ವ್ಯಾಂಕೋವರ್‌ ಸಜ್ಜಾಗಿದೆ.

ವ್ಯಾಂಕೋವರ್‌ ಪ್ರದೇಶದ ಕನ್ನಡಿಗರು ಅಕ್ಟೋಬರ್‌ 20ನೇ ತಾರೀಕು ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 7 ಗಂಟೆವರೆಗೆ ಪುರುಸೊತ್ತು ಮಾಡಿಕೊಂಡು, ದಸರೆಯ ಮುದ ಅನುಭವಿಸಬಹುದು. ಕುಟುಂಬವೊಂದಕ್ಕೆ ಪ್ರವೇಶ ಶುಲ್ಕ 10 ಡಾಲರ್‌. 3 ಗಂಟೆಯಿಂದ 3.30ರವರೆಗೆ ಎಲ್ಲರಿಗೂ ಸ್ವಾಗತ. 3.30 ಗಂಟೆಯ ನಂತರ ಅರ್ಧ ತಾಸು ಪರಸ್ಪರ ಪರಿಚಯ ಮಾಡಿಕೊಳ್ಳುವುದು. 4 ಗಂಟೆಯಿಂದ 5.30 ಗಂಟೆವರೆಗೆ ಹಾಡು, ಕುಣಿತ, ಆಟ, ನಗೆ ಚಟಾಕಿ...ಮಜವೋ ಮಜ. 5.30 ನಂತರ ಊಟದ ಸಮಯ.

ದಸರಾಚರಣೆಯ ಸ್ಥಳ :
Lochdale community hall
90, Sperling avenue
Burnaby, Canada.
(Intersection of Sperling and Hastings)

ವಿವರಗಳಿಗೆ ಇವರನ್ನು ಸಂಪರ್ಕಿಸಿ-
ಮುರಳಿ ಕುಲಕರ್ಣಿ : 604-421-0029
ಶಿವಕುಮಾರ್‌ : 604-583-7168
ಪ್ರಶಾಂತ್‌ ಎಸ್‌.ಬಿ : 604-765-0413

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X