• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸನ್ನಿವೇಲ್‌ನಲ್ಲಿ ರಾಮ ಸಹಸ್ರನಾಮ ಪೂಜೆ ಮತ್ತು ಶನೀಶ್ವರ ಪೂಜೆ

By Staff
|

Hare Rama Hare Ramaಸಾಮೂಹಿಕ ಶ್ರೀರಾಮ ಸಹಸ್ರನಾಮ ಪೂಜೆ ಮತ್ತು ಶ್ರೀ ಶನೀಶ್ವರ ಪೂಜೆ ಕಾರ್ಯಕ್ರಮವನ್ನು ಸನ್ನಿವೇಲ್‌ನ ಹಿಂದೂ ದೇವಾಲಯ ಮತ್ತು ಸಮುದಾಯಭವನ (East Persian Drive, Sunnyvale, California) ಆಯೋಜಿಸಿದೆ.

ಆಗಸ್ಟ್‌ 10ರಿಂದ 16ರವರೆಗೆ ನಡೆಯುವ ಈ ಸಾಮೂಹಿಕ ಶ್ರೀರಾಮ ಸಹಸ್ರನಾಮ ಪೂಜೆ ಪ್ರತಿದಿನ ಸಂಜೆ 7 ಗಂಟೆಗೆ ಆರಂಭವಾಗುತ್ತದೆ. ಸಂಜೆ 7ರಿಂದ 8ರವರೆಗೆ ಪೂಜೆ, 8ರಿಂದ ಒಂದು ಗಂಟೆ ಅವಧಿ ಭಜನೆ ಕಾರ್ಯಕ್ರಮ.

ಆಗಸ್ಟ್‌ 17ರಂದು ಸಾಮೂಹಿಕ ಶನೀಶ್ವರ ಪೂಜೆ ನಡೆಯಲಿದೆ. ಸಂಜೆ ನಾಲ್ಕು ಗಂಟೆಯಿಂದ 7ರವರೆಗೆ ಶನೀಶ್ವರ ಕಥೆ ನಂತರ ಪೂಜೆ ಹಾಗೂ 8ರಿಂದ 8.30ರವರೆಗೆ ಭಜನೆಯನ್ನು ಆಯೋಜಿಸಲಾಗಿದೆ. ಆಸಕ್ತರೆಲ್ಲರೂ ಪೂಜೆಯಲ್ಲಿ ಭಾಗವಹಿಸಬಹುದು.

ಪ್ರತಿ ದಿನ ಭಕ್ತಿ ಗೀತ ಕಚೇರಿ ಇರುತ್ತದೆ. ಆಗಸ್ಟ್‌ 10ರ ಶನಿವಾರ ಪದ್ಮಾ ಮಹದೇವನ್‌, ಭಾನುವಾರದಂದು ಜಯಂತಿ ಸಹಸ್ರಬುದ್ಧಿ, ಸೋಮವಾರ ಅನಿಲ್‌ ನರಹಸಿಂಹನ್‌, ಮಂಗಳವಾರ ಪೂನಮ್‌ ಶರ್ಮಾ, ಬುಧವಾರ ನಚಿಕೇತ ಶರ್ಮಾ, ಗುರುವಾರ ಅರುಣ್‌ ರಾಯಚೂರು, ಶುಕ್ರವಾರ ಶುಭ ಶೇಷಗಿರಿ, ಶನಿವಾರ ರಾಘವನ್‌ ಮನಿಯನ್‌ ಭಕ್ತಿ ಗೀತ ಕಚೇರಿಯಲ್ಲಿ ಹಾಡುತ್ತಾರೆ. ಪೂಜೆಯ ನಂತರ ಮಹಾಪ್ರಸಾದ ವಿತರಿಸಲಾಗುವುದು.

ಭಕ್ತಾದಿಗಳು ಉದಾರವಾಗಿ ನೀಡುವ ವಂತಿಗೆಯನ್ನು ಸ್ವೀಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ಸನ್ನಿವೇಲ್‌ ದೇವಸ್ಥಾನ: (408) 734-4554. ವಿದ್ವಾನ್‌ ಗಜಾನನ ಜೋಶಿ: (408) 973-9294

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more