ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿ.ಕೆ.ಸುಮಿತ್ರಅವರ ಉತ್ತರ ಕ್ಯಾಲಿಫೋರ್ನಿಯಾ ಕಚೇರಿ ಕ್ಯಾನ್ಸಲ್‌

By Staff
|
Google Oneindia Kannada News

ನಮ್ಮ ದೇಶದಲ್ಲಿ ವೀಸಾ ಫಾರ್ಮಾಲಿಟಿಗಳನ್ನು ಹಾದು ವಿಮಾನ ಹತ್ತುವುದು ಎಷ್ಟು ಕಷ್ಟ ನೋಡಿ. ಈ ಕಾರಣಕ್ಕೇ ಗಾಯಕಿ ಬಿ.ಕೆ.ಸುಮಿತ್ರ ಅವರ ಉತ್ತರ ಕ್ಯಾಲಿಫೋರ್ನಿಯಾ ಸಂಗೀತ ಕಾರ್ಯಕ್ರಮ ರದ್ದಾಗಿದೆ.

‘ಅಕ್ಕ’ಗೆ ದೇಣಿಗೆ ಸಂಗ್ರಹಿಸುವ ಸಲುವಾಗಿ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ (ಕೆಕೆಎನ್‌ಸಿ) ಆಗಸ್ಟ್‌ 17ನೇ ತಾರೀಖು ಬಿ.ಕೆ.ಸುಮಿತ್ರ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ವೀಸಾ ಫಾರ್ಮಾಲಿಟಿಗಳ ತೊಡಕಿನಿಂದ ಬಿ.ಕೆ.ಸುಮಿತ್ರ ಅವರು ವಿಮಾನ ಹತ್ತುವುದು ಸದ್ಯಕ್ಕೆ ದುಸ್ಸಾಧ್ಯ. ಹೀಗಾಗಿ ಆಗಸ್ಟ್‌ 17ರ ಹೊತ್ತಿಗೆ ಅವರು ಕ್ಯಾಲಿಫೋರ್ನಿಯಾಗೆ ಬರುವುದು ಸಾಧ್ಯವಾಗುತ್ತಿಲ್ಲ ಎಂದು ಕೂಟದ ಅಧ್ಯಕ್ಷ ರಾಮ್‌ ಪ್ರಸಾದ್‌ ತಿಳಿಸಿದ್ದಾರೆ.

ಅಂದಹಾಗೆ, ಈಗಾಗಲೇ ಬಿ.ಕೆ.ಸುಮಿತ್ರಾ ಸಂಗೀತ ಕಾರ್ಯಕ್ರಮದ ಟಿಕೇಟು ಖರೀದಿಸಿದವರು ತಮ್ಮ ಹಣವನ್ನು ಸೆಪ್ಟೆಂಬರ್‌ 14ರಂದು ಕೂಟ ಆಯೋಜಿಸಿರುವ ‘ಗಣೇಶನ ಹಬ್ಬ’ದ ದಿನ ವಾಪಸ್ಸು ಪಡೆಯಬಹುದು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X