ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡೆದು ಆಳುವ ನೀತಿಗೆ ಚೆಲುವ ಕನ್ನಡ ನಾಡು ಬಲಿ ?

By Staff
|
Google Oneindia Kannada News

*ಪ್ರವೀಣ್‌

Excuses are the nails used to build a house of failure
Unknown

Unity is the necessityಕಾವೇರಿ ವಿವಾದದಲ್ಲಿ ಕರ್ನಾಟಕಕ್ಕೆ ಆದ ಅವಮಾನ ಇತಿಹಾಸದಲ್ಲಿ ಕಪ್ಪು ಚುಕ್ಕಿ ಆಗಿ ನಿಲ್ಲುತ್ತದೆ. ಒಂದು ಗಂಭೀರ ಸಮಸ್ಯೆಯನ್ನು ಕೆಟ್ಟ ರೀತಿಯಲ್ಲಿ ಸಂಭಾಳಿಸಿದರೆ ಆಗುವ ಅನಾಹುತಕ್ಕೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಆಡಳಿತ ಒಂದು ನಿದರ್ಶನವಾಗುತ್ತದೆ.

ಕಾವೇರಿ ಸಮಸ್ಯೆ ಬಗ್ಗೆ ಅವಲೋಕನ ಮಾಡಿದರೆ ಈ ಸಮಸ್ಯೆ ಇಂದಿನದಲ್ಲ . ಪ್ರತಿ ಮುಖ್ಯಮಂತ್ರಿಗೂ ತಗಲುವ ಅಭಿಶಾಪವೇ ಈ ಕಾವೇರಿ ವಿವಾದ. ಆದರೆ ಇಲ್ಲಿಯ ತನಕ ಒಬ್ಬ ಮುಖ್ಯಮಂತ್ರಿ ಕೂಡ ರಾಜ್ಯದ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಈ ಸಮಸ್ಯೆಯಿಂದ ಉದ್ಭವಿಸುವ ಪ್ರತಿ ಸಮಸ್ಯೆಗೆ ಹೆದರಿ ರಾತ್ರೋ ರಾತ್ರಿ ನೀರು ಬಿಟ್ಟ ಉದಾಹರಣೆ ಬಹಳ ಸಿಗುತ್ತದೆ.

ಸುಪ್ರಿಂಕೋರ್ಟ್‌ ತೀರ್ಪು ಓದುತ್ತಿದ್ದರೆ ಎಂಥ ಕನ್ನಡಿಗನ ಮನ ನೋಯುವುದೂ ಸಹಜ. ಈ ಪ್ರಹಸನಕ್ಕೆ ಕಾರಣರಾದ ಕೃಷ್ಣ ಮಾಡಿದ ತಪ್ಪಾದ್ರೂ ಏನು ?

ಸ್ವಂತ ಬುದ್ಧಿ ಇಲ್ಲದೆ, ಪ್ರತಿಯಾಬ್ಬರ ಮಾತು ಕೇಳಿ ಅವಮಾನಕ್ಕೆ ಈಡಾಗಿದ್ದಾರೆ. ವೀರಾವೇಶದಲ್ಲಿ ಮಾಡಿದ ಪಾದಯಾತ್ರೆ ಈಗ ಕಾವೇರಿ ಜಲಾನಯನ ಪ್ರದೇಶದ ಜನಕ್ಕೆ ಪಾಪದ ಯಾತ್ರೆ ಆಯಿತು. ತಾವು ಕೊಟ್ಟ ವಚನದಿಂದ ಭ್ರಷ್ಟರಾದರು. ಅತ್ಯಂತ ವಿಪರ್ಯಾಸದ ಸಂಗತಿಯೆಂದರೆ ಕೃಷ್ಣ ಅವರಿಗೆ ಸುಪ್ರಿಂಕೋರ್ಟ್‌ ಆಜ್ಞೆಗಿಂತ ಹೈಕಮಾಂಡ್‌ ಸೂಚನೆ ಹೆಚ್ಚಾಯಿತು.

ಕಾವೇರಿ ಸಮಸ್ಯೆ ಅಂದರೆ ಬರಿ ಮಂಡ್ಯ ಮೈಸೂರು ಸಮಸ್ಯೆ ಅನ್ನೋ ಭಾವನೆಯಿಂದ ಯಾವಾಗ ನಮ್ಮ ಕನ್ನಡಿಗ ಆಚೆ ಬರುವುದಿಲ್ಲವೋ ಅಲ್ಲಿಯ ತನಕ ರಾಜ್ಯೋತ್ಸವ ಉಡುಗೊರೆಯಾಗಿ ಸಮಸ್ತ ಕನ್ನಡಿಗರಿಗೆ ಅವಮಾನ ತಪ್ಪಿದ್ದಲ್ಲ.

ಕರ್ನಾಟಕದ ಮಂತ್ರಿಗಳು ಬರಿ ಹೆಸರಿಗೆ ಮಾತ್ರ ಇದ್ದರೆ, ತುಂಬ ಜನ ಮತದಾರರಿಗೆ ತಾವು ಯಾರನ್ನು ಆರಿಸಿದೆವು ಅನ್ನೋ ಯಕ್ಷ ಪ್ರಶ್ನೆ ಕಾಡುತ್ತಿದೆ.

ಮುಖ್ಯವಾಗಿ ಕರ್ನಾಟಕ ಕೇಂದ್ರ ಸರಕಾರದ ಮೇಲೆ ಒತ್ತಡ ತರುವಲ್ಲಿ ಸಂಪೂರ್ಣ ವಿಫಲವಾಗಿದೆ. ಕರ್ನಾಟಕದ ಯಾವುದೇ ಸಮಸ್ಯೆಯಾದರೂ ಪಕ್ಷ ಬೇಧ ಮರೆತು ಎಲ್ಲ ಜನ ಪ್ರತಿನಿಧಿಗಳು ಒಂದಾಗಿ ಹೋರಾಟಬೇಕು. ಉತ್ತರ ಕರ್ನಾಟಕ, ದಕ್ಷಿಣ, ಮಲನಾಡು, ಹೀಗೆ ತಮ್ಮಲ್ಲೆ ವಿಭಜನೆ ಮಾಡಿದರೆ, ‘ಬ್ರಿಟಿಷರ ಡಿವೈಡ್‌ ಆ್ಯಂಡ್‌ ರೂಲ್‌’ ಭಾರತವನ್ನು ಉದ್ಧಾರ (!!) ಮಾಡಿದ ಹಾಗೆ ನಮ್ಮ ನೆರೆ ರಾಜ್ಯಗಳು ನಮ್ಮನ್ನು ಮುಗಿಸುತ್ತವೆ.

ಕೇಂದ್ರ ಸರಕಾರದ ಮೇಲೆ ಒತ್ತಡ ತರಲು ಕರ್ನಾಟಕ ಏಕೆ ವಿಫಲವಾಗುತ್ತದೆ? ಕರ್ನಾಟಕ ಏಕೆ ‘ ಠಿಚkಛ್ಞಿ ್ಛಟ್ಟ ಜ್ಟಚ್ಞಠಿಛಿಛ’ ಆಗಿದೆ? ತನ್ನ ಹಕ್ಕಿಗಾಗಿ ಕರ್ನಾಟಕ ಹೋರಾಡಿದರೆ ಅದು ಆಚೆ ಜನಕ್ಕೆ ಏಕೆ ಸ್ವಾರ್ಥ ಅನಿಸುತ್ತದೆ ? ಆಂಧ್ರ ಮತ್ತು ತಮಿಳುನಾಡಿನ ಛಾಪು ಕರ್ನಾಟಕಕ್ಕೆ ಏಕಿಲ್ಲ ?

ತಕ್ಷಣ ಹೊಳೆಯುವುದು ಒಂದೇ ಉತ್ತರ. ಡಿಎಂಕೆ, ಎಐಎಡಿಎಂಕೆ, ಟಿಡಿಪಿ, ಟಿಎಂಸಿ ಥರದಲ್ಲಿ ನಮ್ಮ ರಾಜ್ಯದಲ್ಲಿ ರೀಜನಲ್‌ ಪಾರ್ಟಿ ಸರಕಾರದಲ್ಲಿ ಇಲ್ಲ. ಹಾಗೂ ಕೇಂದ್ರ ಸರಕಾರ ರಾಜ್ಯದಲ್ಲಿನ ಆಡಳಿತಾರೂಢ ಪಕ್ಷಗಳ ಮೇಲೆ ಅವಲಂಬಿತವಾಗಿಲ್ಲ. ನಿಮಗೆ ಬೇರೆ ಉತ್ತರ ಹೊಳೆದರೆ ದಯವಿಟ್ಟು ತಿಳಿಸಿ....

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X