ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ. 9ರಂದು ಸಿಂಗಪುರದಲ್ಲಿ ದೀಪಗಳ ಹಬ್ಬ

By Staff
|
Google Oneindia Kannada News

Singapura kannadigas to celebrate Deepavali ಸಿಂಗಪುರ ಕನ್ನಡ ಸಂಘವು ದೀಪಾವಳಿ ಹಾಗೂ ನಾಡಹಬ್ಬದ ಸಂಭ್ರಮದ ಆಚರಣೆಯನ್ನು ನವೆಂಬರ್‌ ತಿಂಗಳ 9ರಂದು ಹಮ್ಮಿಕೊಂಡಿದೆ. ವಿಶೇಷವಾಗಿ ಮನರಂಜಿಸಲು ಸಂಘದ ಬಾಲ ಕಲಾವಿದರು ಹಾಗೂ ಇತರ ಕಲಾವಿದರಿಂದ ಕಲಾ ಸಂಜೆಯನ್ನು ಏರ್ಪಡಿಸಲಾಗಿದೆ.

ಸ್ಥಳ: ಸಿಂಗಪುರ ಗುಜರಾತಿ ಭವನ, 13, ಕಫ್‌ ರಸ್ತೆ, ಸಿಂಗಪುರ - 209724 (ಲಿಟಲ್‌ ಇಂಡಿಯಾ ಪ್ರದೇಶ, ಸೆರಂಗೂನ್‌ ರಸ್ತೆಗೆ ಲಂಬವಾಗಿ, ಕಾಮತ್‌ ಖಾನಾವಳಿಯ ಎದುರು).

ದಿನಾಂಕ : 9 ನವೆಂಬರ್‌ 2002, ಶನಿವಾರ
ಸಮಯ : ಸಂಜೆ 6:30 ಗಂಟೆಯಿಂದ 9:00 ಘಂಟೆಯವರೆಗೆ

ಕಾರ್ಯಕ್ರಮದ ಪ್ರಮುಖ ಆಕರ್ಷಣೆ : ಬೆಂಗಳೂರಿನ ಪ್ರಸಿದ್ಧ ಗಾಯಕಿ, ಲೇಖಕಿ ಅನಸೂಯಾ ದೇವಿ ಅವರ ಸುಗಮ ಸಂಗೀತ ಕಾರ್ಯಕ್ರಮ. ಬಿ.ಹೆಚ್‌.ಎಸ್‌. ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿರುವ ಈಕೆ ಆಕಾಶವಾಣಿ ಮತ್ತು ಉದಯ ಟಿವಿ ಕಲಾವಿದೆ. ನಾಡಿನ ಹಲವೆಡೆ ಸುಗಮ ಹಾಗೂ ಭಕ್ತಿ ಸಂಗೀತದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕರ್ನಾಟಕದ ಪ್ರಮುಖ ಪತ್ರಿಕೆಗಳಾದ ತುಷಾರ, ತರಂಗ, ಮಂಗಳ ಮೊದಲಾದುವುಗಳಲ್ಲಿ ತಮ್ಮ ಕಥೆ, ಕವನ, ಲೇಖನಗಳನ್ನು ಪ್ರಕಟಿಸಿರುವ ಅನ ಸೂಯ ತಮ್ಮ ಗಾಯನ ಸುಧೆಯನ್ನು ಉಣಬಡಿಸುವರು.

ಪ್ರವೇಶ ಚೀಟಿಗಳಿಗಾಗಿ ಕಾರ್ಯಕಾರಿ ಸಮಿತಿಯ ಯಾವುದೇ ಸದಸ್ಯರನ್ನಾಗಲೀ ಅಥವಾ ಅಂತರ್ಜಾಲದ ಮೂಲಕ ಕನ್ನಡ ಸಂಘವನ್ನಾಗಲೀ ಸಂಪರ್ಕಿಸಬಹುದು.

ಹೆಚ್ಚಿನ ವಿವರಗಳಿಗೆ : www.singara.com

(ಇನ್ಫೋ ವಾರ್ತೆ)

Post your Views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X