ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸಿಎ ಮಕ್ಕಳ ಪ್ರಶಸ್ತಿಗೆ ಹೆಸರು ಸೂಚಿಸಿ..

By Staff
|
Google Oneindia Kannada News

ಕರ್ನಾಟಕ ಸಾಂಸ್ಕೃತಿಕ ಸಂಘ ತನ್ನ ಬಳಗದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ‘ ಕನ್ನಡ ಸಂಸ್ಕೃತಿ ಜಾಗೃತಿ ಪ್ರಶಸ್ತಿ ’ (Kannada Cultural Awareness Award) ಯನ್ನು ನೀಡುತ್ತಿದೆ. ಈ ಬಾರಿಯ ಪ್ರಶಸ್ತಿಗಾಗಿ ನಾಮಪತ್ರಗಳನ್ನು ಆಹ್ವಾನಿಸಲಾಗಿದೆ.

ಕೆಸಿಎ ಯುವಜನತೆ ಹಾಗೂ ಮಕ್ಕಳಿಗೆ ಪ್ರಶಸ್ತಿ ಮುಕ್ತವಾಗಿದೆ. ಹೈಸ್ಕೂಲ್‌ನಲ್ಲಿ ಓದುತ್ತಿರುವ ಕನ್ನಡಿಗ ಮಕ್ಕಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡ ಮೌಲ್ಯಗಳನ್ನು ಯುವಜನತೆಯಲ್ಲಿ ವೃದ್ಧಿಸುವುದು ಪ್ರಶಸ್ತಿಯ ಉದ್ದೇಶ.

ಪ್ರಶಸ್ತಿ ಆಯ್ಕೆ ವಿಧಾನ :

  • ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆಯನ್ನು ಸಲ್ಲಿಸಿರುವ ಯಾವುದಾದರೂ ವ್ಯಕ್ತಿಯ ಬಗ್ಗೆ ಸುಮಾರು ಒಂದೂವರೆ ಸಾವಿರ ಪದಗಳ ಪ್ರಬಂಧ ಬರೆದು ಕಳಿಸುವುದು.

  • ಪ್ರಬಂಧದಲ್ಲಿ ಉಲ್ಲೇಖಿಸಿರುವ ಮಾಹಿತಿಗಳ ಪ್ರಸ್ತುತಪಡಿಸುವಿಕೆಯ ಆಧಾರದ ಮೇಲೆ ಹಾಗೂ ಪ್ರಬಂಧದಲ್ಲಿ ಸಾಧಕರ ಪರವಾಗಿರುವ ವಾದವನ್ನು ಪ್ರಶಸ್ತಿ ನೀಡುವಲ್ಲಿ ಪ್ರಮುಖವಾಗಿ ಪರಿಗಣಿಸಲಾಗುವುದು.

  • ಪ್ರಶಸ್ತಿ ವಿಜೇತರನ್ನು ಈ ವರ್ಷದ ಕೆಸಿಎ ಸಾಂಸ್ಕೃತಿಕ ರಾಯಭಾರಿ ಎಂದು ಗುರುತಿಸಲಾಗುವುದು.

  • 2003 ನೇ ಇಸವಿಯ ಫೆಬ್ರವರಿಯಲ್ಲಿ ನಡೆಯುವ ಕೆಸಿಎ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

  • ಪ್ರಶಸ್ತಿಯು ಟ್ರೋಫಿ ಹಾಗೂ 200 ಡಾಲರುಗಳ ನಗದನ್ನು ಒಳಗೊಂಡಿದೆ.

  • 2003 ರ ಜನವರಿ 15ರೊಳಗೆ ನಾಮಪತ್ರಗಳು ಕೆಸಿಎಯನ್ನು ತಲುಪಬೇಕು.

  • ಹೆಸರು, ಸಮರ್ಪಕ ವಿಳಾಸ, ಓದುತ್ತಿರುವ ತರಗತಿ ಹಾಗೂ ಸ್ವ ಮಾಹಿತಿಯನ್ನು ನಾಮಪತ್ರದಲ್ಲಿ ಉಲ್ಲೇಖಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ರಮೇಶ್‌ ಬಸವಪಟ್ಣ : (310)252-6247

    (ಇನ್ಫೋ ವಾರ್ತೆ)

    Post your Views

    ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X