ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮಂದಿರ ದಿನ ಕರ್ನಾಟಕದ ಮಹಿಳಾ ಸಾಹಿತಿಗಳತ್ತ ಭೂಮಿಕಾ ಗಮನ

By Staff
|
Google Oneindia Kannada News

ಎಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ... ಎಂಬ ಆರ್ಯೋಕ್ತಿಗಳು ಹುಟ್ಟಿಕೊಂಡಿರುವ ನಮ್ಮ ಸಮಾಜ ವಾಹಿನಿಯಲ್ಲಿ ಮಹಿಳೆಯರ ಬುದ್ಧಿ ಮೊಣಕಾಲಿಗಿಂತ ಕೆಳಗೆ... ಧೋರಣೆಯೂ ಸೇರಿಕೊಂಡು ಬಂದಿದೆ. ಸಾಹಿತ್ಯವಲಯಕ್ಕೂ ಇದು ಅಷ್ಟೇನೂ ಹೊರತಾಗಿಲ್ಲ.

ಹಾಗೆ ನೋಡಿದರೆ ಇತರ ದೇಶಗಳಲ್ಲಿಯೂ ಇಂತಹ ಧೋರಣೆಗಳಿಗೇನೂ ಕೊರತೆಯಿಲ್ಲ. 18ನೇ ಶತಮಾನದಲ್ಲಿ, ಮೇರಿ ಆನ್‌ ಇವಾನ್ಸ್‌ ಎಂಬ ಬ್ರಿಟಿಷ್‌ ಲೇಖಕಿಯ ಬರಹಗಳನ್ನು ಪ್ರಕಟಿಸಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಆಕೆ ತನ್ನ ಹೆಸರನ್ನು ಜಾರ್ಜ್‌ ಎಲಿಯಟ್‌ ಎಂಬ ಪುರುಷ ಕಾವ್ಯನಾಮ ಇಟ್ಟುಕೊಂಡು ಕಾದಂಬರಿಗಳನ್ನು ಬರೆದಳು. ಹಾಗೆ ಪ್ರಕಟವಾದ ಮಿಲ್‌ ಆನ್‌ದ ಫ್ಲಾಸ್‌, ಮಿಡ್ಲ್‌ ಮಾರ್ಚ್‌ನಂತಹ ಕಾದಂಬರಿಗಳು ಅಪಾರ ಓದುಗರನ್ನು ಆಕರ್ಷಿಸಿದವು.

ಕನ್ನಡ ಸಾಹಿತ್ಯ ವಲಯದಲ್ಲಿಯೂ ತರಾವಳಿಯ ಕಷ್ಟಗಳನ್ನು ತುಳಿದುಕೊಂಡು ಸಾಹಿತ್ಯ ಸೇವೆ ಮಾಡಿದ ಮಹಿಳೆಯರ ಸಂಖ್ಯೆ ಚಿಕ್ಕದಲ್ಲ. ಈ ಬಾರಿ ಭೂಮಿಕಾ ಕನ್ನಡ ಸಂಘಟನೆಯ ಚಾವಡಿಯಲ್ಲಿ ನ ಚರ್ಚಾ ವಿಷಯ- ಕರ್ನಾಟಕದ ಮಹಿಳಾ ಸಾಹಿತಿಗಳು. ಮದರ್ಸ್‌ ಡೇಯ ದಿನದಂದೇ ಅಂದರೆ ಮೇ 12ರಂದು ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಭೂಮಿಕಾದ ಇನ್ನೊಂದು ವೈಶಿಷ್ಟ್ಯ.

ವಿಷಯ ಮಂಡಿಸಿ,ಚರ್ಚೆಯ ನೇತೃತ್ವ ವಹಿಸುವವರು ಜಯಾ ನಾಗೇಂದ್ರ. ವೈಚಾರಿಕ ನೆಲೆಯಲ್ಲಿ ಮಹಿಳಾ ಬರಹಗಾರರನ್ನು ಜಯಾ ಪರಿಚಯಿಸುತ್ತಾರೆ. ಕರ್ನಾಟಕ ಚರಿತ್ರೆಯುದ್ದಕ್ಕೂ, ಕವನ, ಕಥೆ, ಕಾದಂಬರಿ, ಧಾರ್ಮಿಕ ಸಾಹಿತ್ಯ, ಚರಿತ್ರೆ ಮತ್ತು ಸಾಮಾಜಿಕ ಹಾಗೂ ಆರ್ಥಿಕ ವಲಯದಲ್ಲಿಯೂ ಸಾಹಿತ್ಯದೇವಿಗೆ ಸೇವೆ ಸಲ್ಲಿಸಿದ ಮಹಿಳೆಯರ ಬಗ್ಗೆ ಜಯಾ ತಿಳಿಸಿಕೊಡುತ್ತಾರೆ. ಕಾರ್ಯಕ್ರಮದಲ್ಲಿ ಮಹಿಳಾ ಬರಹಗಳ ಆಳ ಮತ್ತು ವಿಶಾಲತೆಯನ್ನು ಪ್ರಸ್ತುತ ಪಡಿಸುವುದೇ ಜಯಾ ಅವರ ಉದ್ದೇಶ.

ಮಧ್ಯಾಹ್ನ ಎರಡು ಗಂಟೆಗೆ ಕಾರ್ಯಕ್ರಮ ಶುರುವಾಗುತ್ತದೆ. ಐದು ನಿಮಿಷ ಮುಂಚಿತವಾಗಿ ಬಂದರೆ ಹೆಚ್ಚಿನ ಚರ್ಚೆಗೆ ಅನುಕೂಲ. ಕಾರ್ಯಕ್ರಮ ನಡೆಯುವ ಸ್ಥಳ bauer Recreation center, rockville MD.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: Dr. Vijaya kulakarni3018712234, Padmaja prabhakara3019249360,Indira Prativadi3016701665, Jaya nagendra3013529256.
Directions to the center:
From Beltway to I270N to Exit 6
From I270 S to Exit # 6 which is Rt 28(W. Montgomery Ave) towards Rockville. This becomes Viers Mill Rd (Rte 586) Make left at Norbeck Rd (Rt 28) After 5 traffic lights, make right on to Bauer Drive. Community center is on your left Tel: 3014684015

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X