ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ 17ಕ್ಕೆ ಸನ್ನಿವೇಲ್‌ ದೇವಾಲಯದಲ್ಲಿ ಬಿ.ಕೆ.ಸುಮಿತ್ರ ಹಾಡು

By Staff
|
Google Oneindia Kannada News

KKNC Presents B.K.Sumitras Grand Musical Programme..ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ...,
ಚೆಲ್ಲಿದರೋಕುಳಿಯಾ ನಂ ಬಲ್ಲಿದ ರಂಗನ್‌ ವಲ್ಲಿಯ ಮೇಲೆ ಚೆಲ್ಲಿದರೋಕುಳಿಯಾ...
- ಈ ಹಾಡುಗಳ ಗುನುಗುನಿಸುವಾಗ, ಸುಶ್ರಾವ್ಯ ಕಂಠವೊಂದು ಪದೇ ಪದೇ ಕಾಡದಿರದು. ಅನೇಕರು ಈ ಹಾಡುಗಳನ್ನು ಹಾಡಿದ್ದರೂ ಸಹ ಒಂದು ಕಂಠ ಈ ಹಾಡುಗಳಿಗೆ ವಿಶಿಷ್ಟ ಛಾಪನ್ನೇ ಒತ್ತಿದೆ. ಆ ಕಂಠ ಬಿ.ಕೆ.ಸುಮಿತ್ರ ಅವರದ್ದು. ತುಂಟ ಕೃಷ್ಣನ ಬಾಲಲೀಲೆಗಳ ಗೀತೆಗಳಾಗಲೀ, ಹಳ್ಳಿ ಸೊಗಡಿನ ಜನಪದ ಗೀತೆಗಳಾಗಲೀ, ಸಿನಿಮಾ ಹಾಡುಗಳಾಗಲೀ- ಅವರ ಹಾಡ ಮೋಡಿ ಸಹೃದಯರನ್ನು ಕಟ್ಟಿ ಹಾಕುವಷ್ಟು ಶಕ್ತ.

ಈ ತಿಂಗಳು ಬಿ.ಕೆ.ಸುಮಿತ್ರ ಮತ್ತು ತಂಡ ಅಮೆರಿಕೆಗೆ ಚಿತೆ ್ತೈಸಲಿದೆ. ಭಾವಗೀತೆಗಳು, ಭಕ್ತಿಗೀತೆಗಳು, ಜನಪದ ಗೀತೆಗಳ ಊಟದ ಜೊತೆಗೆ ಸಿನಿಮಾ ಹಾಡುಗಳ ಉಪ್ಪಿನ ಕಾಯಿಯನ್ನೂ ಸುಮಿತ್ರ ಅವರು ಉಣ ಬಡಿಸಲಿದ್ದಾರೆ. ಇದು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ (ಕೆಕೆಎನ್‌ಸಿ) ಆಯೋಜಿಸಿರುವ ಸಂಗೀತ ಸಂಜೆ. ಈ ಕಾರ್ಯಕ್ರಮದಲ್ಲಿ ಬರುವ ಸಕಲ ಧನವೂ ‘ಅಕ್ಕ’ (ಅಮೆರಿಕ ಕನ್ನಡ ಕೂಟಗಳ ಆಗರ) ದ ಬೊಕ್ಕಸ ಸೇರಲಿದೆ.

ಒಂದು ಒಳ್ಳೆಯ ಉದ್ದೇಶದ ಹಿನ್ನೆಲೆಯಲ್ಲಿ ಚೆಂದದ ಹಾಡು ನಿಮಗೆ. ಟಿಕೇಟನ್ನು ಇಂದೇ ಕಾದಿರಿಸಿ. ಟಿಕೇಟೊಂದರ ಬೆಲೆ 7 ಡಾಲರ್‌. 12 ವರ್ಷದೊಳಗಿನ ಮಕ್ಕಳಿಗೆ ಪುಕ್ಕಟೆ ಪ್ರವೇಶ. ‘ಅಕ್ಕ’ ಅಧ್ಯಕ್ಷ ಅಮರನಾಥ ಗೌಡ ಕಾರ್ಯಕ್ರಮದ ಗೌರವಾತಿಥಿ.

ಟೈಂ ಟೇಬಲ್ಲು ಮತ್ತು ಜಾಗವನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ-
ದಿನಾಂಕ : ಆಗಸ್ಟ್‌ 17, ಶನಿವಾರ. ಸಂಜೆ 4 ಗಂಟೆಯಿಂದ.
ಸ್ಥಳ : ಸನ್ನಿವೇಲ್‌ ಹಿಂದೂ ದೇವಸ್ಥಾನದ ಸಭಾಂಗಣ.

ಕಮ್ಮಟವೂ ಉಂಟು
ನಿಮಗೆ ಸಂಗೀತ ಅಂದರೆ ತುಂಬಾ ಇಷ್ಟವಾ? ಹಾಡಲು ಬರುತ್ತದಾ? ಹಾಗಾದರೆ, ಅದನ್ನು ಸಾಣೆಗೊಡ್ಡಿಕೊಳ್ಳಲು ಸಿದ್ಧರಾಗಿ. ಆಗಸ್ಟ್‌ 18ರ ಭಾನುವಾರ ಬಿ.ಕೆ.ಸುಮಿತ್ರ ಅವರು ಮೂರು ಹಾಡುಗಳನ್ನು ಹೇಳಿಕೊಡುತ್ತಾರೆ. ಕಲಿಯುವವರು ನೀವಾಗಿ. ಈ ವಿಶೇಷ ಸಂಗೀತ ಕಮ್ಮಟ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ; ಸನ್ನಿವೇಲ್‌ ದೇವಸ್ಥಾನದಲ್ಲಿ. ಕೆಕೆಎನ್‌ಸಿ ಹಮ್ಮಿಕೊಳ್ಳಲಿರುವ ರಾಜ್ಯೋತ್ಸವ ಮತ್ತು ದೀಪಾವಳಿ ಕಾರ್ಯಕ್ರಮಗಳಲ್ಲಿ ಇಲ್ಲಿ ಕಲಿತ ಹಾಡುಗಳನ್ನು ವಾದ್ಯ ಸಮೇತ ಪ್ರಸ್ತುತ ಪಡಿಸುವ ಅವಕಾಶ ಕಲ್ಪಿಸಲಾಗುವುದು.

ಕಲಿಯಬಯಸುವವರಲ್ಲಿ ಕೋರಿಕೆ : ಬಿ.ಕೆ.ಸುಮಿತ್ರ ಅವರಿಗೆ ಕನಿಷ್ಠ 10 ಡಾಲರ್‌ ಶುಲ್ಕ ಕೊಡಿ. ಅದಕ್ಕಿಂತ ಹೆಚ್ಚಿಗೆ ಕೊಡುವ ಮನಸ್ಸು ನಿಮ್ಮದಾದರೆ ಸಂತೋಷ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X