ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಹರೇಶ್ವರ ದಂಪತಿಗಳಿಗೆ ಬೀಳ್ಕೊಡುಗೆಮತ್ತಿತರ ಚುಟುಕು ವಾರ್ತೆ

By Staff
|
Google Oneindia Kannada News

Nagalakshmi and Shikaripura Harihareshwaraಸರಿಸುಮಾರು ಮೂವತ್ತು ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿರುವ ಸಂಶೋಧಕ-ಪತ್ರಕರ್ತ ಶಿಕಾರಿಪುರ ಹರಿಹರೇಶ್ವರ ಮತ್ತು ಅವರ ಪತ್ನಿ ನಾಗಲಕ್ಷ್ಮಿ ಹರಿಹರೇಶ್ವರ ಅವರು ಸದ್ಯದಲ್ಲೇ ಭಾರತಕ್ಕೆ ಹೊರಡುವವರಿದ್ದಾರೆ. ಉತ್ತರ ಕ್ಯಾಲಿಫೋರ್ನಿಯದಲ್ಲಿ ಕನ್ನಡ ಸಂವೇದನೆಯನ್ನು ಜತನದಿಂದ ಕಾಪಾಡಿಕೊಂಡು ಬಂದ ಈ ‘ಮುದ್ದಣ-ಮನೋರಮೆ’ ಪರಿಯ ದಂಪತಿಗಳಿಗೆ ಈ ಹೊತ್ತು ಎಡೆಬಿಡದಂತೆ ಬೀಳ್ಕೊಡುಗೆ ಕಾರ್ಯಕ್ರಮಗಳು ಏರ್ಪಾಟಾಗುತ್ತಿವೆ.

ಸದ್ಯದಲ್ಲೇ ನಡೆಯುವ ಅಂಥ ಇನ್ನೊಂದು ಬೀಳ್ಕೊಡುಗೆ ಕಾರ್ಯಕ್ರಮ ಸನ್ನಿವೇಲ್‌ ದೇವಸ್ಥಾನದಲ್ಲಿ ನಡೆಯುವುದು. ದಿನಾಂಕ : ಅಕ್ಟೋಬರ್‌ 6, ಭಾನುವಾರ ಸಂಜೆ 4 ಗಂಟೆಗೆ. ಫ್ರಿಮಾಂಟ್‌ನ ವಾಯುವ್ಯಕ್ಕಿರುವ ಲಫಾಯಟ್‌ ವಾಸಿಗಳಾದ ವಿಜಯ ಜೋಷಿ ಮತ್ತು ಡಾ. ರಾಜ್‌ ಜೋಷಿ ಅವರು ಈ ಬೀಳ್ಕೊಡುಗೆಯ ಆತಿಥೇಯರು.

ಸಾಹಿತ್ಯದ ಬಗ್ಗೆ ಪರಮಾಸಕ್ತಿ ಇಲ್ಲದಿದ್ದರೂ ಸಾಹಿತಿಗಳು ಮತ್ತು ಸಜ್ಜನರಿಗೆ ಸದಾ ಪ್ರೋತ್ಸಾಹ ಕೊಡುವ ಜೋಷಿ ದಂಪತಿಗಳು, ತವರಿಗೆ ಮುಖ ಮಾಡಿ ನಿಂತಿರುವ ಅಮೆರಿಕಾ ಕನ್ನಡದ ಮಾಸ್ತಿ, ಸಾಹಿತಿ ಹರಿಹರೇಶ್ವರ ಅವರಿಗೆ ಔತಣ-ಸಮ್ಮಾನ ಏರ್ಪಡಿಸಿರುವುದು ಸಹಜವೇ ಆಗಿದೆ.

ಚಂದಿರನ ತೋಟಕ್ಕೆ ತಾರೆಗಳು ಬೇಕಾಗಿವೆ !
ಬರುವ ದೀಪಾವಳಿ ಹಬ್ಬದ ನಿಮಿತ್ತ ಏರ್ಪಡಿಸಲಾಗುವ ಕಾರ್ಯಕ್ರಮಕ್ಕೆ ಬಾಲ ಕಲಾವಿದರು ಬೇಕಾಗಿದ್ದಾರೆ. ‘ನಮ್ಮ ಮಕ್ಕಳು ’ಚಿತ್ರದ ‘ ತಾರೆಗಳ ತೋಟದಿಂದ ಚಂದಿರಾ ಬಂದ ’ ಗೀತೆಗೆ ನೃತ್ಯ ಸಂಯೋಜಿಸುವ ಕಾರ್ಯಕ್ರಮವಿದೆ. ನಕ್ಷತ್ರಗಳಂತೆ ನಿಲ್ಲುವ ಸ್ಥಿರ ಪಾತ್ರಗಳಿಗೆ 5 ರಿಂದ 8 ವರ್ಷ ಒಳಗಿನ 4 ಕಿಶೋರಿಯರು, 2 ಬಾಲಕರು ಬೇಕು. ಅಂತೆಯೇ, ನೃತ್ತಿಸಲು 7, 8 ವರ್ಷದ 7 ಮಂದಿ ಹುಡುಗಿಯರು ಬೇಕಾಗಿದ್ದಾರೆ. ನಕ್ಷತ್ರ ಪುಂಜಗಳಂತೆ ಪಾಲ್ಗೊಳ್ಳುವ ಮಕ್ಕಳಿಗೆ ಬಿಳಿ ಪೋಷಾಕು. ನೃತ್ಯದಲ್ಲಿ ಪಾಲ್ಗೊಳ್ಳುವ ಹುಡುಗಿಯರು ಗಾಗ್ರಾ ತೊಟ್ಟುಕೊಳ್ಳಬೇಕು. ಬಣ್ಣ ಯಾವುದಾದರೂ ಪರವಾಗಿಲ್ಲ.

ಆದಷ್ಟು ಬೇಗ ತಂದೆ ತಾಯಿಯರು ಹೆಸರುಗಳನ್ನು ಸೂಚಿಸಬೇಕು. ಕಡೆಯ ದಿನಾಂಕ ಅಕ್ಟೋಬರ್‌ 8. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗೆ ಸುಚಿತ್ರ ಅಲಗುಡು ಅವರನ್ನು ಸಂಪರ್ಕಿಸಿ. ದೂರವಾಣಿ : 703 256 2110.

ಕವಿ-ಕಾವ್ಯ-ಸಂಗೀತ ಪರಂಪರೆಗೆ ಕಾವೇರಿ ನಮನ
ಇದೇ ಶನಿವಾರ ಅಕ್ಟೋಬರ್‌ 5 ರ ಸಂಜೆ, ಈಗಾಗಲೇ ಪ್ರಕಟಿಸಿರುವಂತೆ ನಿಸಾರ್‌ ಅಹಮದ್‌ ಅವರೊಂದಿಗೆ ಮಿಲನ. ಜೊತೆಗೆ ಸಂಗೀತಾ ಕಟ್ಟಿ ಅವರಿಂದ ಹಾಡುಗಾರಿಕೆ. ಸ್ಥಳ : ಶಿವ ವಿಷ್ಣು ದೇವಸ್ಥಾನ. ಸಂಜೆ 5 ರಿಂದ 9 ರವರೆಗೆ.

5 ರಿಂದ 5.15 ರವರೆಗೆ ಕಾವೇರಿ ಕಲಾವಿದರಿಂದ ‘ ಕವಿ ನಮನ’.

ಕೆಸಿಎ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ದಿನ ಎಳೆಯರ ಕೋಲಾಟ
ಇತ್ತೀಚೆಗೆ ನಡೆದ ಗಣೇಶನ ಹಬ್ಬದ ಸಮೂಹ ಗಾಯನ ಕಾರ್ಯಕ್ರಮದಿಂದ ಉತ್ತೇಜಿತ-ಉಲ್ಲಸಿತರಾದ ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡಿಗರು ಇದೇ ಬಗೆಯ ಕಾರ್ಯಕ್ರಮವನ್ನು ಬರಲಿರುವ ಮಕ್ಕಳ ದಿನಾಚರಣೆಯಲ್ಲೂ ನಡೆಸಲು ನಿರ್ಧರಿಸಿದ್ದಾರೆ. ಈ ಬಾರಿ ಸಮೂಹ ಕೋಲಾಟ. ಆಯಾ ಪ್ರದೇಶದವರೇ ರೂಪಿಸಿಕೊಳ್ಳಬೇಕು.

ಈ ಕೋಲಾಟ ಕಾರ್ಯಕ್ರಮಕ್ಕೆ ತಾಲೀಮು ಆಗಬೇಕು. ಆಸಕ್ತರು ಈ ಕೆಳಕಂಡ ತಮ್ಮತಮ್ಮ ಪ್ರದೇಶದ ಆಯೋಜಕರನ್ನು ಸಂಪರ್ಕಿಸಬೇಕು.

Cerritos/Torrance/Valley: Aarthi Maganthi
(562)2291974 [email protected]
Irvine and surrounding areas : Latha Sharaschandra, Sujatha Kopparam (949)7333457, (949)5524055 [email protected]
Diamond bar and surrounding areas : Aruna Kumar, Jyothi Banaji,Vidya Shastry (626)8210791 [email protected], [email protected]

(ದಟ್ಸ್‌ ಕನ್ನಡ ಡೆಸ್ಕ್‌)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X