ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ 6ಕ್ಕೆ ವಲ್ಲೀಶ ಶಾಸ್ತ್ರಿಗಳ ಮನೆಯಲ್ಲಿ ರತ್ನಮಾಲ ಹಾಡು

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೋ

ಬಯಕೆ ತೋಟದ ಬೇ..ಲಿಯಾಳಗೆ ಕರಣ ಗಣದೀ ರಿಂಗಣ....
ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ...
ನೀರೊಳಗೆ ವೀಣೆ ಮಿಡಿದಂತೆ ಆ..ಡಿದ ಮಾ..ತು...

Ratnamala Prakashಇಂಥಾ ಹತ್ತು ಹಲವು ಕವಿ ನುಡಿಗಳ ಒಟ್ಟೊಟ್ಟಿಗೇ ನೆನಪಾಗೋದು ರತ್ನಮಾಲ ಪ್ರಕಾಶ್‌. ಕವಿ ಹೃದಯದ ಮಿಡಿತಗಳನ್ನು ತಮ್ಮ ಕಂಠದ ಖದರಿನಿಂದ ಜನಪ್ರಿಯಗೊಳಿಸಿರುವ ಬೆರಳೆಣಿಕೆ ಗಾಯಕಿಯರ ಸಾಲಿನಲ್ಲಿ ರತ್ನಮಾಲ ಹೆಸರನ್ನು ಸಾಸಿವೆ ಕಾಳಷ್ಟೂ ಅನುಮಾನವಿಲ್ಲದೆ ಬರೆದುಬಿಡಬಹುದು. ಈಕೆಯನ್ನು ಈಗ ಪರಿಚಯಿಸಿದರೆ, ಕೆ.ಎಸ್‌.ನರಸಿಂಹ ಸ್ವಾಮಿಯವರನ್ನು ಪರಿಚಯಿಸಿದಾಗ ಆಗಬಹುದಾದ ಕ್ಲೀಷೆಯಾದೀತು.

ಅಕ್ಟೋಬರ್‌ 2ನೇ ತಾರೀಖು, ಭಾನುವಾರ ಮಧ್ಯಾಹ್ನ 2.30 ಗಂಟೆಯಿಂದ ಸಂಜೆ 5.30 ಗಂಟೆವರೆಗೆ ವಲ್ಲೀಶ ಶಾಸ್ತ್ರಿಗಳು ತಮ್ಮ ಮನೆಯಲ್ಲಿ ರತ್ನಮಾಲ ಅವರ ಹಾಡಿನ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಭಾವಗೀತೆ, ಜನಪದ ಗೀತೆಗಳ ಜೊತೆಗೆ ಸಿನಿಮಾ ಹಾಡುಗಳನ್ನೂ ರತ್ನಮಾಲ ಹಾಡಲಿದ್ದಾರೆ. ನಿಮ್ಮ ಮೆಚ್ಚಿನ ಗೀತೆಯ ಕೋರಿಕೆಗೂ ಅಲ್ಲಿ ಅವಕಾಶವುಂಟು. ಅಂದಹಾಗೆ, ರತ್ನಮಾಲ ಜೊತೆಗೆ ಮಾಲತಿ ಶರ್ಮ ದನಿಗೂಡಿಸುವರು.

ಟಿಕೇಟಿನ ದರ ಇಂತಿಷ್ಟು ಅಂತೇನೂ ನಿಗದಿ ಪಡಿಸಿಲ್ಲ. ಕಲಾವಿದರ ಖರ್ಚನ್ನು ಕಟ್ಟಿಕೊಡುವಷ್ಟಾದರೂ ಉದಾರಿಗಳಾದರೆ ಚೆನ್ನ. ವಲ್ಲೀಶ ಶಾಸ್ತ್ರಿಗಳು- ಪ್ರತಿಯಾಬ್ಬರು 10 ಡಾಲರ್‌ ಅಥವಾ ಪ್ರತಿ ಕುಟುಂಬ 15 ಡಾಲರ್‌ ಕೊಟ್ಟರೆ ಸಂತೋಷ ಅನ್ನುತ್ತಾರೆ. ಇನ್ನೂ ಶಕ್ತಿಯಿದ್ದರೆ ಹೆಚ್ಚಿನ ಹಣವನ್ನೂ ಕೊಡಬಹುದು.

ಕಾರ್ಯಕ್ರಮ ನಡೆಯುವ ಸ್ಥಳದ ವಿಳಾಸ : Vallisha MV Shastry, 16352, Willowmist Ct., Chino Hills CA 91709.

ವಲ್ಲೀಶ ಶಾಸ್ತ್ರಿಗಳ ಮನೆಗೆ ಹೋಗುವ ದಾರಿ ಹೀಗಿದೆ...
From 91W or 91 E
Take 71N take Soquesl Pkwy exit
take left at ramp
pass three traffic lights
take next left turn (Carrington Dr)
at Gate (Los Sarranos Ranch) enter *2575
take next left at T
take another left at another T
take first left to Willowmist Ct
Second House at left No.16352.

Ph: 909 597 9394

‘ಕಾರ್ಯಕ್ರಮಕ್ಕೆ ನಾನೂ ಬರ್ತೀನಿ’ ಅಂತ ವಲ್ಲಿಶ ಶಾಸ್ತ್ರಿಗಳಿಗೆ ಒಂದು ಇ- ಮೇಲ್‌ ಕಳಿಸಿ- [email protected]

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X