• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೊಂ ಪೊಂಪೊಂ ! ಯಾರ್ರೀ...ಡೆಟ್ರಾಯಿಟ್‌ ಡೆಟ್ರಾಯಿಟ್‌..

By Staff
|

*(ಇನ್ಫೋ ಇನ್‌ಸೈಟ್‌)

ಕಾವೇರಿ ಕನ್ನಡ ಸಂಘದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಸಿದ್ಧತೆಯ ಸಂಭ್ರಮ. ಕಾರ್ಯಕ್ರಮ ನೀಡುವವರು ತಮ್ಮ ಕಾರ್ಯಕ್ರಮಗಳಿಗೆ ಫೈನಲ್‌ ಟಚ್‌ ಕೊಡುತ್ತಿದ್ದಾರೆ. ಹಾಡುಗಳ ಅಭ್ಯಾಸ, ಶ್ರುತಿ ಲಯಗಳ ಬಗ್ಗೆ ಗಮನ...ಹೀಗೆ. ಸಾಂಸ್ಕೃತಿಕ ಕಾರ್ಯಕ್ರಮಗಳ ನೇಗಿಲು ಹೊತ್ತವರ ಆತಂಕ ಜಾಸ್ತಿಯಾಗುತ್ತಿದೆ. ಹೆಣ್ಣು ಮಕ್ಕಳು ಹೊಸ ದಿರಿಸು, ಸೀರೆಗಳ ರೆಡಿ ಮಾಡಿಟ್ಟು ಕೊಂಡಿದ್ದಾರೆ. ಗಂಡಸರು ತಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ಎತ್ತಿಟ್ಟುಕೊಂಡಿದ್ದಾರೆ. ಗೋಷ್ಠಿಯಲ್ಲಿ ಭಾಗವಹಿಸುವವರು ವಿಷಯಗಳನ್ನು ಕಲೆ ಹಾಕಿಟ್ಟುಕೊಂಡಿದ್ದಾರೆ.

ಹೌದಪ್ಪಾ... ವಾಷಿಂಗ್ಟನ್‌ ಡಿ.ಸಿ.ಯಿಂದ ಡೆಟ್ರಾಯಿಟ್‌ವರೆಗೆ ಹೇಗೆ ಹೋಗುವುದು...? ಮಾಮೂಲಿ ಪ್ರಯಾಣವೆಂದರೆ ಏನು ಮಜಾ ಇರುತ್ತೆ ಹೇಳಿ. ಆದ್ದರಿಂದ ಕಾರ್ಯಕ್ರಮವೊಂದನ್ನು ಆಯೋಜಿಸುವಷ್ಟೇ ಆಸ್ಥೆಯಿಂದ ಕಾವೇರಿ ಕನ್ನಡ ಸಂಘದವರು ವಿಶ್ವ ಕನ್ನಡ ಸಮ್ಮೇಳನ (ಆಗಸ್ಟ್‌ 31- ಸೆಪ್ಟೆಂಬರ್‌ 2) ಕ್ಕೆ ಹೋಗಲು ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ.

ಕನ್ನಡಿಗರೆಲ್ಲ ಒಂದೇ ಬಸ್ಸಿನಲ್ಲಿ ಹಾಡುತ್ತಾ, ಕಟ್ಟಿಸಿಕೊಂಡು ಬಂದ ತಿಂಡಿಯನ್ನು ಹಂಚುತ್ತಾ ‘ಮೈಸೂರ ಮುದುಕ ಜಾತ್ರೆಗೆ ಹೊರಟ...’ ಅಂತ ಒಬ್ಬರನ್ನೊಬ್ಬರು ರೇಗಿಸುತ್ತಾ...ಪ್ರಯಾಣಿಸುವಾಗ ಬಸ್ಸಿನ ತುಂಬಾ ಕನ್ನಡ ವಾತಾವರಣ ಕಳೆಗಟ್ಟುವುದಿಲ್ಲವೇ...?

ಬನ್ನಿ. ಇದು ಕನ್ನಡಿಗರ ಬಸ್ಸು. ಕುರುಂಕುರುಂ ತಿಂಡಿ ಕಟ್ಟಿಕೊಂಡು, ಹಾಡಿನ ಪುಸ್ತಕ ಹಿಡಿದುಕೊಂಡು, ಜೋಕುಗಳ ನೆನಪಿಸಿಕೊಂಡು, ಮರೆತು ಹೋದ ಶಾಯಿರಿಗಳ ಧೂಳು ಕೊಡವಿ ಕನ್ನಡದ ಬಸ್ಸು ಹತ್ತಬನ್ನಿ. ಕನ್ನಡ ಧ್ವಜವನ್ನು ಕಟ್ಟಿಕೊಂಡ ಬಸ್ಸು, ಕಾವೇರಿಯ ಬ್ಯಾನರು ಹೊತ್ತು ವಾಷಿಂಗ್ಟನ್‌ ಡಿ.ಸಿ.ಯಿಂದ ಡೆಟ್ರಾಯಿಟ್‌ಗೆ ಓಡಲಿದೆ. ವಿಶ್ವ ಕನ್ನಡ ಸಮ್ಮೇಳನ ಎಂಬ ಕನ್ನಡ ಸಾಗರದತ್ತ ಕಾವೇರಿ ಧಾರೆ.

ಈ ಬಸ್ಸು ಡಕೋಟಾ ಎಕ್ಸ್‌ಪ್ರೆಸ್‌ ಅಲ್ಲ. 50 ಮಂದಿ ಕುಳಿತುಕೊಂಡು ಆರಾಮವಾಗಿ ಕುಳಿತು ಡೆಟ್ರಾಯಿಟ್‌ ತಲುಪಬಹುದು. ವಾಪಾಸು ಕರೆದುಕೊಂಡು ಬರುವ ಜವಾಬ್ದಾರಿಯೂ ಇದೇ ಬಸ್ಸಿನದು. ಹೋಗಿ ಬರುವ ಒಟ್ಟು ವೆಚ್ಚ 85 ಡಾಲರ್‌. ಬಸ್ಸು ಫುಲ್‌ ಆದ್ರೆ ಉಳಿದ ಹಣವನ್ನು ಹಿಂತಿರುಗಿಸಲಾಗುವುದು. ಕಡಿಮೆ ಜನ ಆದ್ರೆ ಖರ್ಚು ಜಾಸ್ತಿ ಅಲ್ವಾ..? ಅಂದ ಹಾಗೆ 30 ಜನಕ್ಕಿಂತ ಕಡಿಮೆಯಾದರೆ ಬಸ್ಸು ಕ್ಯಾನ್ಸಲ್‌ ಮಾಡ್ತಾರೆ. ಆದ್ರಿಂದ ಆದಷ್ಟು ಬೇಗನೆ ನಿಮ್ಮ ಬರವನ್ನು ಸಂಘಟಕರಿಗೆ ತಿಳಿಸಬೇಕು.

ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳ ನಿಮ್ಮ ಸ್ನೇಹಿತರನ್ನೂ ಕರೆದುಕೊಂಡು ಬರಬಹುದು. ನೋಂದಣಿ ಹಣವನ್ನು ಚೆಕ್‌ ಮೂಲಕ ಮಾತ್ರ ಸ್ವೀಕರಿಸಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ. ಫೋನ್‌ ಮುಖಾಂತರ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ನೋಂದಾವಣೆ ಮಾಡಲಾಗುವುದಿಲ್ಲ. ಮಕ್ಕಳಿಗೆ ಅರ್ಧ ಟಿಕೇಟು ಎಂಬ ನಿಯಮ ಇಲ್ಲ. ಸೀಟು ಬೇಕಾಗುವ ಎಲ್ಲರಿಗೂ ಪೂರ್ತಿ ಟಿಕೇಟು ಕಡ್ಡಾಯ.

ನೀವು ಚೆಕ್‌ ಕಳುಹಿಸಬೇಕಾದ ವಿಳಾಸ : Kaveri Kannada Sangha, 12908 Creamery Hill Drive, Germantown, MD 208746338, USA.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more