ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಏಕಾಂಗಿ’ ವಿಶ್ವ ಸಂಚಾರ, ಮೇ 19 ರಂದು ಕಾವೇರಿಯಲ್ಲಿ ಬಿಡಾರ !

By Staff
|
Google Oneindia Kannada News

Ravichandran starring Ekangi show in Kaveri kannada sangha‘ಸಿನಿಮಾ ನೋಡುವ ಬನ್ನಿರಿ.. ನಾವೆಲ್ಲರೂ..’

ಕಾವೇರಿ ಕನ್ನಡ ಸಂಘದ ಆಹ್ವಾನವಿದು. ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಮಹತ್ವಾಕಾಂಕ್ಷೆಯ ‘ಏಕಾಂಗಿ’ ಸಿನಿಮಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವ ಕಾವೇರಿ ಕನ್ನಡ ಸಂಘ, ಕನ್ನಡಿಗರೆಲ್ಲರೂ ಇನ್ನೊಮ್ಮೆ ಒಟ್ಟಾಗಿ ಸೇರಲು ವೇದಿಕೆಯನ್ನು ಕಲ್ಪಿಸಿದೆ.

ಶಾಂತಿಕ್ರಾಂತಿ ನಂತರ ತಮ್ಮೆಲ್ಲ ಕನಸುಗಳನ್ನು ಭಟ್ಟಿಯಿಳಿಸಿ ರವಿಚಂದ್ರನ್‌ ರೂಪಿಸಿದ ‘ಏಕಾಂಗಿ’ ತಾಂತ್ರಿಕವಾಗಿ ಅತ್ಯುತ್ತಮ ಚಿತ್ರ. ಪ್ರೇಕ್ಷಕರ ಅಭಿಪ್ರಾಯಕ್ಕನುಗುಣವಾಗಿ ರವಿಚಂದ್ರನ್‌ ಏಕಾಂಗಿಯನ್ನು ರೀಶೂಟ್‌ ಮಾಡಿ ಮತ್ತೆ ಬಿಡುಗಡೆ ಮಾಡಿದ್ದಾರೆ. ಭಾರತೀಯ ಸಿನಿಮಾ ಇತಿಹಾಸದಲ್ಲಿ ರೀ ಶೂಟ್‌ ಆಗಿ ಬಿಡುಗಡೆಗೊಂಡ ಏಕೈಕ ಉದಾಹರಣೆಯಿದು. ರವಿ ಕನಸುಗಾರ ಮಾತ್ರವಲ್ಲ , ಎದೆಗಾರರೂ ಹೌದು ! ಸಾಕ್ಷಿಗೆ ಏಕಾಂಗಿಯನ್ನು ನೋಡಿ.

ರವಿಚಂದ್ರನ್‌, ರಮ್ಯಕೃಷ್ಣ , ಪ್ರಕಾಶ್‌ ರೈ, ಸಾಧು ಕೋಕಿಲ, ವನಿತಾ ವಾಸು ‘ಏಕಾಂಗಿ’ಯ ತಾರಾಗಣದಲ್ಲಿ ದ್ದಾರೆ. ಮೇ 19 ರಂದು ಮಧ್ಯಾಹ್ನ 1 ಗಂಟೆಗೆ ಏಕಾಂಗಿ ಪ್ರದರ್ಶನ. ವಿಳಾಸ ನೆನಪಿರಿಸಿಕೊಳ್ಳಿ- Loehmanns Twin Cinema, 7291 Arlington Blvd, Falls Church, VA 22042.

ಪ್ರವೇಶ ಶುಲ್ಕ : ದೊಡ್ಡವರಿಗಾದರೆ 7 ಡಾಲರ್‌. 12 ವರ್ಷದೊಳಗಿನ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ 5 ಡಾಲರ್‌. ಆಸನ ಅಗತ್ಯವಿಲ್ಲದ (5 ವರ್ಷದೊಳಗಿನ) ಮಕ್ಕಳಿಗೆ ಉಚಿತ ಪ್ರವೇಶ. ಹೆಚ್ಚಿನ ವಿವರಗಳಿಗೆ ಸುದೀಶ್‌- (240) 6311669 ಅಥವಾ ಮುರಳಿ- (703) 2562110 ಅವರನ್ನು ಸಂಪರ್ಕಿಸಿ.

ಥಿಯೇಟರ್‌ಗೆ ದಾರಿ-
From I495, take the US50/ARLINGTON BLVD exit, exit number 50AB,
towards FAIRFAX/ARLINGTON. Merge onto US50 East / ARLINGTON BLVD
towards Arlington. Make right after the second traffic light to Loehmanns plaza.

ಏಕಾಂಗಿ ಜಾತಕ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X