ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಸ್ತ ಎನ್‌ಆರ್‌ಐ ಕನ್ನಡಿಗರಲ್ಲಿ ಶಿಕ್ಷಣ ಇಲಾಖೆಯ ಸವಿನಯ ಮನವಿ

By Oneindia Staff
|
Google Oneindia Kannada News

ಪ್ರೀತಿಯ ಎನ್‌ಆರ್‌ಐ ಕನ್ನಡಿಗರೇ,
ಇದು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ನಿಮ್ಮಲ್ಲಿ ಮಾಡಿಕೊಳ್ಳುತ್ತಿರುವ ಮನವಿ.

ಶಿಕ್ಷಣ ಇಲಾಖೆಗೆ ಸರ್ಕಾರ ನಿಗದಿ ಪಡಿಸುವ ಬಜೆಟ್‌ನ ಅಗ್ರಪಾಲು (ಶೇ.90 ಕ್ಕೂ ಹೆಚ್ಚು) ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಕರ ವೇತನ ಹಾಗೂ ಅನುದಾನಿತ ಸಂಸ್ಥೆಗಳಿಗೆ ನೀಡುವ ಅನುದಾನಕ್ಕೆ ಸಲ್ಲುತ್ತದೆ. ಉಳಿದಂತೆ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಉಳಿಯುವ ಹಣದ ಪಾಲು ಅತ್ಯಲ್ಪ .

ಸುಮಾರು 25 ಲಕ್ಷ ಮಂದಿ ಮಕ್ಕಳು ಶಾಲೆಗೆ ದಾಖಲಾಗಿಲ್ಲ . ಕೆಲವರು ಶಾಲೆಗೆ ದಾಖಲಾಗಿ ಆನಂತರ ಹೊರಬಿದ್ದಿದ್ದಾರೆ. ಇಂಥ ಸಂದರ್ಭದಲ್ಲಿ ನಮ್ಮ ಶಿಕ್ಷಣದ ಗುಣಮಟ್ಟವನ್ನು , ಕಲಿಕೆಯ ವಿಧಾನವನ್ನು , ಕಲಿಕೆಯ ಸಲಕರಣೆಗಳನ್ನು ಇನ್ನಷ್ಟು ಉತ್ತಮಗೊಳಿಸಬೇಕಿದೆ. ದೂರದರ್ಶನ, ಕಂಪ್ಯೂಟರ್‌ ಮುಂತಾದ ತಂತ್ರಜ್ಞಾನವನ್ನು ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಸಲಕರಣೆಗಳನ್ನಾಗಿ ಬಳಸಬೇಕಾಗಿದೆ. ಸ್ಥಳೀಯ ಸಮುದಾಯದ ಮಕ್ಕಳಿಗೆ ಉಪಯುಕ್ತ ಹಾಗೂ ಉತ್ತಮ ಶಿಕ್ಷಣವನ್ನು ಕಲ್ಪಿಸುವಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಮಹತ್ತರವಾದುದು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲವಷ್ಟೇ.

ಇದೆಲ್ಲವನ್ನು ನಿಮ್ಮ ಗಮನಕ್ಕೆ ತರಲು ಕಾರಣವಿಷ್ಟೇ-
ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಶಿಕ್ಷಣ ಇಲಾಖೆ ನಿಮ್ಮ ನೆರವನ್ನು ಬಯಸುತ್ತಿದೆ. ದಾನಿಗಳು, ವಾಣಿಜ್ಯ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ನೆರವನ್ನು ಒದಗಿಸಬಹುದು. ವೈಯಕ್ತಿಕವಾಗಿಯೂ ನೀವು ನೆರವು ನೀಡಬಹುದು. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಪಂಗಡಗಳನ್ನು ಮೇಲೆತ್ತುವ ಕಾರ್ಯದಲ್ಲಿ ನೀವು ಕೈ ಜೋಡಿಸಬಹುದು.

ದಾನಿಗಳು ತಮಗಿಷ್ಟವಾದ ಸರ್ಕಾರಿ ಶಾಲೆಯನ್ನು ದತ್ತು ಸ್ವೀಕರಿಸಿ, ಎರಡು ವರ್ಷಗಳ ಅವಧಿಯ ಕ್ರಿಯಾ ಯೋಜನೆಯಲ್ಲಿ ಶಾಲೆಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬಹುದು. ಯಾವುದಾದರೊಂದು ನಿರ್ದಿಷ್ಟ ಕ್ಷೇತ್ರಗಳನ್ನು ಗುರ್ತಿಸಿಕೊಂಡು, ಅವುಗಳನ್ನು ಉತ್ತಮ ಪಡಿಸಲು ಅವಕಾಶವಿದೆ. ಒಟ್ಟಿನಲ್ಲಿ ಶೈಕ್ಷಣಿಕ ಗುಣಮಟ್ಟ ಉತ್ತಮಗೊಳ್ಳಲು ನಿಮ್ಮ ಪ್ರಯತ್ನ ಪೂರಕವಾಗುವಂತಿರಬೇಕು.

ಈಗ ಹೇಳಿ, ನೀವು ನೆರವು ನೀಡುತ್ತೀರಾ? ಆಯ್ಕೆ ನಿಮ್ಮದು.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X