• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹ್ಯೂಸ್ಟನ್‌ನಲ್ಲಿ ‘ ದರ್ಶನ ’, ಡೆಟ್ರಾಯಿಟ್‌ನಲ್ಲಿ ‘ಸ್ಪಂದನ’ ಸ್ವಾಗತಕ್ಕೆ ‘ ಚಂದನ ’

By oneindia staff
|

*ಎಸ್ಕೆ. ಶಾಮಸುಂದರ

shami.sk@greynium.com

 • ದೂರದೃಷ್ಟಿ.
 • ಸ್ಪಷ್ಟ ಧ್ಯೇಯ , ನಿಖರ ಉದ್ದೇಶ
 • ಅಗತ್ಯ ಸಂಪನ್ಮೂಲಗಳ ಕ್ರೋಢೀಕರಣ
 • ವಿತರಣೆ ಮತ್ತು ಸದ್ವಿನಿಯೋಗ
 • ದುಡಿಯುವ ಕೈಗಳು
 • ತುಡಿಯುವ ಮನಸ್ಸುಗಳು
 • ಇವಿಷ್ಟೂ ಪರಿಕರಗಳು ಒಂದೆಡೆ ಕಲೆತರೆ ಉದ್ದೇಶಿತ ಕಾರ್ಯಕ್ರಮ ನಿರ್ದಿಷ್ಟ ಸಮುದಾಯದ ನೆನಪಿನ ಉಗ್ರಾಣದಲ್ಲಿ ಶಾಶ್ವತವಾಗಿ ನೆಲೆಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

  ಹಾಗೆ ಮಾಡುವುದು ಮತ್ತು ಮಾಡಲೇಬೇಕಿರುವುದು ನಿರ್ವಾಹಕರ ಹೊಣೆ ಮತ್ತು ಪ್ರೀತಿಯ ಕಾಯಕ. ಈ ಬಗೆಯ ಜವಾಬ್ದಾರಿ ಮತ್ತು ಪ್ರೀತಿಯ ಕುರುಹಾಗಿ ಅಮೆರಿಕ ಕನ್ನಡ ಕೂಟಗಳ ಆಗರ ಅಪ್ಪಿಕೊಂಡಿರುವ ಕನ್ನಡದ ಕೆಲಸ-ವಿಶ್ವ ಕನ್ನಡ ಸಮ್ಮೇಳನ -2002, ಆಗಸ್ಟ್‌ 30, 31 ಸೆಪ್ಟೆಂಬರ್‌ 1-ಡೆಟ್ರಾಯಿಟ್‌.

  ವಿಶ್ವ ಕನ್ನಡದ ಕಾರ್ಯಕ್ರಮವೆಂದರೆ ನಿಮ್ಮ ಕಲ್ಪನೆಯಲ್ಲಿ ಮೂಡುವ ಚಿತ್ರಗಳು ಯಾವುವು? ಅವು ಹೀಗಿರಬಹುದೇ ?

  • ವಿಮಾನಯಾನ, ಹೋಟಲ್‌ನಲ್ಲಿ ನಿದ್ದೆ , ಪಂಕ್ತಿ ಭೋಜನ
  • ಕನ್ನಡದಲ್ಲೇ ಉಭಯಕುಶಲೋಪರಿ, ಮಾತು, ಕತೆ, ಹರಟೆ
  • ಪಂಚೆ, ಶಲ್ಯ- ರೇಷ್ಮೆ ಸೀರೆ, ಸಿಕ್ಕರೆ ಕನಕಾಂಬರ
  • ಕನ್ನಡಕ್ಕಾಗಿ ಅಹರ್ನಿಶಿ ದುಡಿಯುತ್ತಿರುವವರ ಒಡನಾಟ
  • ಕನ್ನಡ ಹಾಡು, ಕುಣಿತ, ಪರಂಪರೆ-ಸಂಸ್ಕೃತಿಯ ಮೆರವಣಿಗೆ
  • ನಮ್ಮ ಭಾಷೆಯ ಉಸಿರನ್ನು ಹಚ್ಚ ಹಸುರಾಗಿಡುವ ಉದ್ಯಾನದಲ್ಲಿ ವಿಹಾರ

  ಈ ಆರು ಆಯಾಮಗಳು ನಿಮ್ಮ ಕಲ್ಪನೆಗೆ ಕಚಗುಳಿಯಿಡುವ ಆಧಾರ ಸ್ಥಂಭಗಳಷ್ಟೇ. ಆ ಕಂಬಗಳ ಸುತ್ತ ಅಪ್ಪಾಲೆ ತಿಪ್ಪಾಲೆ ಆಡುವ ಸಂತೋಷ ನಿಮ್ಮದು.

  ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮ ಇಷ್ಟೇನಾ ? ಅಷ್ಟೇ ಕಣ್ರೀ ಎಂದುಕೊಂಡರೆ ನೀವು ಮುಖ್ಯವಾಹಿನಿಗೆ ವಿಮುಖರಾಗುತ್ತೀರಿ ಜೋಪಾನ ! ಅನುಭವಗಳನ್ನು ದಟ್ಟವಾಗಿ, ಸಾಂದ್ರವಾಗಿ ಮತ್ತು ಅಷ್ಟೇ ಆತ್ಮೀಯವಾಗಿ ಕಟ್ಟಿಕೊಡಬಲ್ಲ ಶಕ್ತಿ ಇರುವುದು ಓದಿಗೆ, ಕನ್ನಡ ಓದಿಗೆ. ಅದಕ್ಕೆಂದೇ ಕನ್ನಡ ಸಮ್ಮೇಳನದ ವ್ಯವಸ್ಥಾಪಕರು ಎರಡು ಹೊತ್ತಗೆಗಳನ್ನು ಪ್ರಕಟಿಸುತ್ತಿದ್ದಾರೆ. ಸ್ಮರಣ ಸಂಚಿಕೆ ಸ್ಪಂದನ, ಸ್ವಾಗತ ಸಂಚಿಕೆ ಚಂದನ . ಈ ಎರಡು ಪ್ರಕಟಣೆಗಳು ಸಮ್ಮೇಳನದ ವೇದಿಕೆಯಲ್ಲಿ ಬಿಡುಗಡೆ ಕಾಣುತ್ತವೆ.

  ಅಂದಹಾಗೆ ಹ್ಯೂಸ್ಟನ್‌ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ ದರ್ಶನ. ಇದು ನಿಮ್ಮ ಮಲಗುವ ಕೋಣೆಯ ಕಪಾಟಿನಲ್ಲಿ ಭದ್ರವಾಗಿದೆ ಎಂದು ನನ್ನ ಭಾವನೆ. ನನ್ನ ಮಲಗುವ ಕೋಣೆಯ ಕಪಾಟಿನಲ್ಲಿ ಈ ಸಂಚಿಕೆಗಳು ಸಿಗುವುದಿಲ್ಲ. ದಿಂಬಿನ ಹಿಂದೆ ಕೈಚಾಚಿದರೆ ಪುಸ್ತಕಗಳು ಮಲಗುವ ಮೇಜು ಉಂಟು. ಅಲ್ಲಿ ದರ್ಶನ ಇದೆ, ಉತ್ತರ ಕ್ಯಾಲಿಫ್‌ ಕನ್ನಡ ಕೂಟದ ಚಿತ್ರಭಾನು ಇದೆ. ಜತೆಗೆ ಮೊನ್ನೆತಾನೆ ನಾಗ ಐತಾಳರು ಪ್ರೀತಿಯಿಂದ ಕೊಟ್ಟ ಕಡಲಾಚೆಯ ಕನ್ನಡಿಗರು ಕಂಡ ಕಾರಂತರು ಮತ್ತು ಇಲಿನಾಯ್‌ ಕನ್ನಡ ಕೂಟದ ಸ್ಮರಣ ಸಂಚಿಕೆ ಸಂಗಮ ಇದೆ. ಓದುತ್ತಿದ್ದೇನೆ, ಚೆನ್ನಾಗಿವೆ.

  ಅಕ್ಕ ಹೊರತರುತ್ತಿರುವ ‘ ಸ್ಪಂದನ ’ ಸಂಚಿಕೆಯ ಉದ್ದೇಶ ಎರಡು ಕೋನದ್ದು.

  • ಕನ್ನಡ ಮತ್ತು ಕರ್ನಾಟಕದ ಪರಂಪರೆ ಮತ್ತು ಸಾಂಸ್ಕೃತಿಕ ಹಿರಿಮೆ ಗರಿಮೆಯನ್ನು ಸಾರುವುದು
  • ವಿದೇಶೀ ಕನ್ನಡಿಗರ ಸಮಸ್ಯೆಗಳ ನಾಡಿ ಹಿಡಿಯುವುದು, ಅವರ ಆಶೋತ್ತರಗಳಿಗೆ ದರ್ಪಣವಾಗುವುದು

  ಸ್ವಾಗತ ಸಂಚಿಕೆ ಚಂದನದ ಉದ್ದೇಶಕ್ಕೂ ಎರಡು ಮುಖ :

  • ಸಮ್ಮೇಳನದ ಪ್ರತಿಯಾಂದು ಕಾರ್ಯಕ್ರಮ ವಿವರಣೆಗೆ ಕೈಪಿಡಿ. ಕಲಾವಿದರ ಪರಿಚಯ ಕೋಶ
  • ಡೆಟ್ರಾಯಿಟ್‌ ನಗರ ದರ್ಶಿನಿ. ಜತೆಗೆ ಸುತ್ತಮುತ್ತಣ ಪ್ರವಾಸಿ ಕೇಂದ್ರಕ್ಕೆ ಮಾರ್ಗದರ್ಶಿ

  ಸ್ಪಂದನ ಸಂಚಿಕೆಗೆ ಲೇಖನ ಇತ್ಯಾದಿ ನೀಡ ಬಯಸುವವರು ಇಲ್ಲಿ ಕ್ಲಿಕ್ಕಿಸಿ

  ಜಾಹಿರಾತು ಕೊಡುತ್ತೀರಾ ? ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ

  ಸ್ಮರಣ ಸಂಚಿಕೆಯ ಬಗೆಗಿನ ಯಾವುದೇ ಸಲಹೆ- ಸಂದೇಹಗಳಿದ್ದಲ್ಲಿ sanchike@akkaonline.org ವಿಳಾಸಕ್ಕೆ ಇ-ಮೇಲ್‌ ಕಳುಹಿಸಿ. ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷರಾದ ಶ್ರಿನಿವಾಸ್‌ ಭಟ್‌ ಅವರ ಇ-ಮೇಲ್‌ : srinivasabhat@aol.comದೂರವಾಣಿ ಸಂಖ್ಯೆ : (248) 9525766.

  ಕರ್ನಾಟಕದಿಂದ ಹೊರಗೆ ನೆಲೆಸಿರುವ, ವಿಶೇಷವಾಗಿ ಅಮೆರಿಕಾದ ವಿವಿಧ ಸಂಸ್ಥಾನಗಳಲ್ಲಿ ನೆಲೆಗೊಂಡಿರುವ ಅನೇಕ ಕನ್ನಡ ಮನಸ್ಸುಗಳಿಗೆ ಇದೊಂದು ಕರೆ ಎಂದು ಭಾವಿಸಬಹುದು. ನನಗೆ ತಿಳಿದ ಹಾಗೆ ಕನ್ನಡದಲ್ಲಿ ಚೆನ್ನಾಗಿ ಬರೆಯಬಲ್ಲ ಒಂದು ದೊಡ್ಡ ಬಳಗವೇ ಅಮೆರಿಕಾದಲ್ಲಿದೆ. ಇವರೆಲ್ಲ ತಲಾ ಒಂದರಂತೆ ಕತೆ, ಕವನ, ಲೇಖನ, ಅನುಭವ ಬರೆದು ಕಳುಹಿಸಿದರೆ ಸಂಚಿಕೆಯ ಪುಟಗಳು ಹತ್ತು ಸಾವಿರ ದಾಟಬಹುದು!

  ವಾರ್ತಾಸಂಚಯ

  ಕನ್ನಡದ ತೇರು ಬರುತ್ತಿದೆ ದಾರಿಬಿಡಿ....

  ಏಕ ಛತ್ರಿಯಡಿ ಕನ್ನಡ, ಕನ್ನಡಿಗ - ಅಕ್ಕನ ಕಣ್ಣಲ್ಲಿ ಕಾಮನಬಿಲ್ಲು

  ಆಸೆಗಳು ಬಾನಗಲ,ಬೊಕ್ಕಸ ಬೊಗಸೆಯಗಲ: ಇದು ಕನ್ನಡ ಮತ್ತು ಸಂಸ್ಕೃತಿ !

  Click here to go to top

  ಮುಖಪುಟ / ಸಾಹಿತ್ಯ ಸೊಗಡು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more