ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪಾದಕ : ಮುಳ್ಳಿನ ಹಾಸಿಗೆಯಲ್ಲಿ ಪವಡಿಸಿರುವ ಫಾಲಾಕ್ಷ

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

Kannada Koota of North California Logoಈ ಜಗತ್ತಿನಲ್ಲಿ ಅತ್ಯಂತ ಕಷ್ಟವಾದ ಉದ್ಯೋಗ ಯಾವುದು?
ಯಾವ ವೃತ್ತಿ ಸುಲಭವಾಗಿರುತ್ತದೆ ಹೇಳಿ. ವೈದ್ಯರನ್ನು ಕೇಳಿ- ತಮ್ಮ ವೃತ್ತಿಯ ತವಕ ತಲ್ಲಣಗಳ ಮನ ಮುಟ್ಟುವಂತೆ ಹೇಳಿಕೊಳ್ಳುತ್ತಾರೆ. ಇಂಜಿನಿಯರ್‌ ಕೂಡ ತನ್ನ ಕೆಲಸದ ಸಂಕೀರ್ಣತೆಯ ವಿವರವಾಗಿ ಬಣ್ಣಿಸುತ್ತಾನೆ. ಬಸ್‌ ಕಂಡಕ್ಟರ್‌, ಗುಮಾಸ್ತ , ಮೇಷ್ಟ್ರು, ಸೈನಿಕ, ರೈತ... ಪ್ರತಿಯಾಬ್ಬರಿಗೂ ಅವರ ಪಡಿ ಪಾಟಲುಗಳು ದೊಡ್ಡದಾಗಿಯೇ ಕಾಣುತ್ತದೆ. ಆದರೆ, ಪತ್ರಿಕೆ/ ಕೃತಿಯ ಸಂಪಾದಕ ಇರುತ್ತಾನಲ್ಲ , ಇತರ ಕಷ್ಟಗಳಿಗಿಂತ ಅವನ ಕಷ್ಟ ಗುಲಗಂಜಿ ತೂಕ ಜಾಸ್ತೀನೆ. ಸಂಪಾದಕನ ಪಾಡು ದೇವರಿಗೇ ಪ್ರೀತಿ.

ಸಂಪಾದಕನ ಹುದ್ದೆ ಮೇಲ್ನೋಟಕ್ಕೆ ಸೊಗಸಾಗಿಯೇ ಕಾಣುತ್ತದೆ. ಖಡ್ಗವಾಗಲಿ ಪೆನ್ನು ಎನ್ನುವ ಘೋಷಣೆ, ಪತ್ರಿಕೆಯ ಕಟಕಟೆಯಲ್ಲಿ ಯಾರನ್ನಾದರೂ ನಿಲ್ಲಿಸಲು ಸಮಾಜ ಕಲ್ಪಿಸಿದ ಸಾಮರ್ಥ್ಯ, ವೃತ್ತಿಯ ರೋಚಕತೆ.. ಈ ಎಲ್ಲ ಸೇರಿ ಸಂಪಾದಕ ತುಂಬಾ ಆಕರ್ಷಕನಾಗಿ ಸುಖಿಯಾಗಿ ಕಾಣುತ್ತಾನೆ.

ಇಷ್ಟಕ್ಕೂ ಈ ಹೈಟೆಕ್‌ ಜಮಾನದಲ್ಲಿ ಸಂಪಾದಕನಿಗೆ ಮಾಡಲು ಕೆಲಸವಾದರೂ ಏನಿರುತ್ತದೆ. ವರದಿಗಾರರು ಸುದ್ದಿಯ ತರುತ್ತಾರೆ, ಸಂಪಾದಕೀಯ ಸಿಬ್ಬಂದಿ ಸುದ್ದಿಯ ಸೋಸಿ ಸಿಂಗರಗೊಳಿಸುತ್ತೆ . ಹೀಗಿರುವಾಗ ಸಂಪಾದಕನದೇನು ಹೆಚ್ಚುಗಾರಿಕೆ? ಸಂಪಾದಕಗಿರಿಯೇನಿದ್ದರೂ ಅಲಂಕಾರಕ್ಕಷ್ಟೇ, ಪತ್ರಿಕೆಯ ನೇಮ್‌ಬೋರ್ಡ್‌ ತುಂಬಿಸಲು ಅನ್ನುವ ಅಭಿಪ್ರಾಯಗಳೂ ಉಂಟು. ಅನ್ನಲಿ ಬಿಡಿ, ಅನುಭವಿಸುವವರಿಗಷ್ಟೇ ಗೊತ್ತು ಅದರ ಸುಖ! ನಿಮಗೆ ಯಾರಾದರೂ ಶತ್ರುಗಳಿದ್ದಲ್ಲಿ - ಓ ದೇವರೇ ಅವನಿಗೆ ಈ ಜನ್ಮದಲ್ಲಿ ಅಲ್ಲವಾದರೂ ಮುಂದಿನ ಜನ್ಮದಲ್ಲಾದರೂ ಸಂಪಾದಕಗಿರಿ ಕೊಡು ಎಂದು ಪ್ರಾರ್ಥಿಸಬಹುದು.

ಸಂಪಾದಕನ ಸಂಕಷ್ಟಗಳು, ತವಕ ತಲ್ಲಣಗಳು ಒಂದೆರಡಲ್ಲ . ಮೊದಲಿಗೆ ಪತ್ರಿಕೆಯನ್ನು ನಿಯಮಿತವಾಗಿ ಹೊರ ತರುವುದೇ ಸಾಹಸ. ನಂತರದ್ದು ಗುಣಮಟ್ಟದ ಪ್ರಶ್ನೆ. ಸುದ್ದಿ- ಲೇಖನ ಚೆನ್ನಾಗಿಲ್ಲದಿಲ್ಲದ್ದರೆ ಟೀಕೆಯ ಕೂರಂಬಿಗೆ ಗುರಿಯಾಗುವವರು ಸಂಪಾದಕರೇ ಹೊರತು ಸುದ್ದಿಕರ್ತರಲ್ಲ . ಇನ್ನು ಲೇಖನಗಳನ್ನು ಸಂಪಾದಿಸುವುದೇನು ತಮಾಷೆಯ ಕೆಲಸವಾ? ಒಳ್ಳೆಯ ಲೇಖನ ಬರೆಯುವವರನ್ನು ಹುಡುಕುವುದು ಬಣವೆಯಲ್ಲಿ ಸೂಜಿ ತಲಾಷು ಮಾಡಿದಷ್ಟು ಕಷ್ಟ . ಇದರ ಜೊತೆಗೆ ಬರಹಗಳನ್ನು ಕಸದಬುಟ್ಟಿಗೆ ಹಾಕಿ ವಿರೋಧಕ್ಕೆ ತುತ್ತಾಗುವ ಅಪಾಯ ಬೇರೆ. ಎಲ್ಲವನ್ನೂ ಸರಿತೂಗಿಸಿಕೊಂಡು ಹೋಗುವ ಸಂಪಾದಕ ಇರುತ್ತಾನಲ್ಲ , ಆತನ ತಾಳ್ಮೆಗೆ ಇನ್ನಾವುದು ಹೋಲಿಕೆ!?

ಸಂಪಾದಕರ ಈ ಪಡಿ ಪಾಟಲುಗಳ ಸ್ಮರಣೆಗೆ ಕಾರಣರಾದವರು ಎಂ.ಆರ್‌.ದತ್ತಾತ್ರಿ ಉರುಫ್‌ ದತ್ತಾತ್ರಿ ರಾಮಣ್ಣ . ಉತ್ತರ ಕ್ಯಾಲಿಫೋರ್ನಿಯ ಕನ್ನಡಕೂಟ (ಕೆಕೆಎನ್‌ಸಿ)ದ 2002-03 ನೇ ಇಸವಿಯ ವಾರ್ಷಿಕ ಸಂಚಿಕೆಗೆ ದತ್ತಾತ್ರಿ ಪ್ರಧಾನ ಸಂಪಾದಕರು. ಸಂಪಾದಕರು ಅಂದಮೇಲೆ ಆಯಿತಲ್ಲ - ಕಥೆ ಕಳಿಸಿ, ಲೇಖನ ಕಳಿಸಿ ಎಂದು ಸಹೃದಯರ ಕೋರಬೇಕು, ಕಾಡಬೇಕು. ಕೊನೆಗೆ ಎಲ್ಲವನ್ನೂ ಒಪ್ಪಗೊಳಿಸಿ ಸಂಚಿಕೆಗೆ ಜೀವ ತುಂಬಬೇಕು. ಈ ಕೆಲಸಕ್ಕೆ ತಾಳ್ಮೆ ಬೇಕು, ಉತ್ಸಾಹ ಬೇಕು, ಮಿಗಿಲಾಗಿ ಬದ್ಧತೆ ಬೇಕು. ದತ್ತಾತ್ರಿ ಅವರಿಗೆ ಯಾವುದಕ್ಕೂ ಕೊರೆಯಾಗದಿರಲಿ.

ಕತೆ, ಕವಿತೆ, ಪ್ರಬಂಧ, ಚುಟುಕ, ಹಾಸ್ಯ, ಅನುಭವ, ಪ್ರವಾಸ ಕಥನ.. ಯಾವುದಾದರೂ ಸರಿ, ಜುಲೈ 31 ರೊಳಗೆ ನಿಮ್ಮ ಬರಹಗಳನ್ನು ವಿಶೇಷ ಸಂಚಿಕೆಗೆ ಕಳಿಸಿಕೊಡಿ ಎಂದು ದತ್ತಾತ್ರಿ ಮನವಿ. [email protected]ಇ-ಮೇಲ್‌ ವಿಳಾಸಕ್ಕೆ ಬರಹಗಳನ್ನು ಕಳಿಸಬೇಕು. ವ್ಯಂಗ್ಯಚಿತ್ರಗಳಿಗೂ ಸ್ವಾಗತ. ಮಕ್ಕಳು ಕೂಡ ವಿಶೇಷ ಸಂಚಿಕೆಗೆ ಬರೆಯಬಹುದು.

ಸಂಪಾದಕ ವರ್ಗದಲ್ಲಿ ಜ್ಯೋತಿ ಮಹದೇವ, ನರೇಂದ್ರ ಕುಞೂೕಡಿ, ಪ್ರಕಾಶ್‌ ನಾಯಕ್‌ ಹಾಗೂ ಪದ್ಮನಾಭ ರಾವ್‌ ಮೇಲನಹಳ್ಳಿ ಅವರೂ ಇದ್ದಾರೆ. ಹೆಚ್ಚಿನ ವಿವರಗಳಿಗೆ ಜಾಲಾಡಿ-http://www.kknc.org

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X