• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೂಮಿಕಾ ಮಾಹೆ ಮಂಥನದಲ್ಲಿ ಹವ್ಯಕ- ಗೌಡ ನುಡಿ ನೋಟ

By Staff
|

ಎಂದಿನಂತೆ ‘ಭೂಮಿಕಾ’ ಮಾಹೆ ಮಂಥನಕ್ಕೆ ಸಜ್ಜಾಗಿದೆ. ಈ ಬಾರಿ ಕನ್ನಡ ಭಾಷೆಯ ಬಗೆಗೆ ತಿಳಿಯುವ ಅವಕಾಶ ನಿಮ್ಮದು. ಮಂಥನದ ವಿಷಯ- ‘ಕನ್ನಡದ ಬೇರೆ ಎರಡು ಮೋರೆಗಳು’.

ಜುಲೈ 14 ಭಾನುವಾರ, ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮದ ಮಾಹೆ ಮಾತುಗಾರರು ಡಾ.ಕುಸುಮಾಧರ ಗೌಡ. ಕನ್ನಡ ಭಾಷೆ ಒಂದೇ ಆದರೂ ಅದರ ಪ್ರಾದೇಶಿಕ ಸೊಗಡು ಬಗೆಬಗೆಯದ್ದು. ಜನಪದ ಸಂಸ್ಕೃತಿಯ ಜೊತೆಜೊತೆಗೆ ಅದರ ‘ನುಡಿ’ ನಮೂನೆ ಬೆಳೆದುಕೊಂಡು ಬಂದಿದೆ. ಧಾರಾನಗರಿಯ ಕನ್ನಡ, ಮಂಗಳೂರು ಕನ್ನಡ ಅಂತೀವಲ್ಲ ಹಾಗೆ.

ಕುಸುಮಾಧರ ಗೌಡರು ಪಶ್ಚಿಮ ಘಟ್ಟಗಳ ಅಡಿಕೆ ಬೆಳೆಗಾರರಾದ ಹವ್ಯಕ- ಗೌಡ ನುಡಿಯ ವರಸೆಯ ಮಜಲನ್ನು ಪರಿಚಯ ಮಾಡಿಕೊಡಲಿದ್ದಾರೆ. ಈ ಭಾಷೆ ಬೆಳೆದು ಬಂದ ಪರಿ, 1500 ವರ್ಷಗಳಷ್ಟು ಹಳತಾದ ನಮ್ಮ ಭಾಷಾಶಾಸ್ತ್ರಕ್ಕೆ ಇದರ ಕೊಡುಗೆ- ಮತ್ತೂ ವಿಚಾರಗಳು ಗೌಡರಲ್ಲುಂಟು. ಅವನ್ನು ಕೆಣಕಿ, ಕೆದಕಿ, ಚರ್ಚೆಗೆಳೆಯುವ ಸಹೃದಯರು ನೀವಾಗಿ.

ಅಂದಹಾಗೆ, ಮಂಥನದಲ್ಲೂ ಬೋನಸ್ಸುಂಟು. ಅಮೆರಿಕಾ ಪ್ರವಾಸದಲ್ಲಿರುವ www.kannadasahithya.comನ ಶೇಖರ್‌ ಪೂರ್ಣ ‘ಅನಿವಾಸಿ ಕನ್ನಡಿಗರಲ್ಲಿ ಮತ್ತು ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ’ ಎಂಬ ವಿಷಯ ಕುರಿತು ಮಾತಾಡಲಿದ್ದಾರೆ.

ಏನಾದರೂ ಅನುಮಾನ ಇದ್ದರೆ ಇವರನ್ನು ಸಂಪರ್ಕಿಸಿ...
Dr. Vijaya kulakarni3018712234, Mrs.padmaja prabhakara3019249360, Mrs. Indira Prativadi3016701665, Mrs. jaya nagendra3013529256.
(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X