• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಟ್ಲಾಂಟದ ನೃಪತುಂಗ ಕನ್ನಡ ಕೂಟದಲ್ಲಿ ಚಿತ್ರಭಾನು ಕಲರವ

By Staff
|

ಮತ್ತೊಂದು ವರುಷ ಉರುಳಿ ಹೋಯಿತು. ಚಿತ್ರ ಚಿತ್ತಾರದ ಕನಸಿನ ಮೂಟೆಗಳ ಹೊತ್ತು ಹಾರೈಕೆಗಳ ಹಾರದೊಂದಿಗೆ ಚಿತ್ರಭಾನು ಬಂದಿದ್ದಾನೆ. ಹೊಸತನವ ಹೊತ್ತು ತರುವ ವರ್ಷದ ಸಂಭ್ರಮ ಸಣ್ಣದೇ...ಆ ಸಂಭ್ರಮಕ್ಕೆ ಕಾಲ ದೇಶದ ಭೇದವಿದೆಯೇ !! ಚಿತ್ರಭಾನುವಿನ ಸ್ವಾಗತಕ್ಕೆ ಅಟ್ಲಾಂಟದ ನೃಪತುಂಗ ಕನ್ನಡ ಕೂಟದವರು ಸಜ್ಜಾಗಿದ್ದಾರೆ.

ಮೇ 4ರ ಸಂಜೆ, ಪುಟ್ಟದೊಂದು ಕಾರ್ಯಕ್ರಮದ ನೆಪವಿಟ್ಟುಕೊಂಡು ಕನ್ನಡಿಗರೆಲ್ಲ ಒಂದೆಡೆ ಸೇರಲಿದ್ದಾರೆ. ಯುಗಾದಿರಾಯನಿಗೆ ಸ್ವಾಗತ ಗೀತೆ ಹಾಡಲು. ಹೊಸ ವರ್ಷದ ನವೀನ ಕನಸುಗಳ ಬುಟ್ಟಿಯಲ್ಲಿ ಮಂಗಳಕರ ಆಸೆಗಳು ನೂರು ನೂರು. ಈ ಎಲ್ಲ ಹಾರೈಕೆಗಳು ಆಶಯಗಳು ಕಾರ್ಯಕ್ರಮದಲ್ಲಿ ಮಾತಾಗಲಿವೆ. ಕಾರ್ಯಕ್ರಮವನ್ನು ಮಿಸ್‌ ಮಾಡಿಕೊಂಡರೆ ಆಮೇಲೆ ನೀವೇ ಬೇಜಾರು ಮಾಡಿಕೊಳ್ಳುತ್ತೀರಿ.

ಮೇ ನಾಲ್ಕರ ಶನಿವಾರ ಸಂಜೆ 6ಗಂಟೆಗೆ ಕಾರ್ಯಕ್ರಮ ಶುರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ರಾತ್ರಿ ಯುಗಾದಿಯ ಸಂಭ್ರಮದ ಊಟ. ಸದಸ್ಯೇತರರಿಗೆ 6 ಡಾಲರ್‌ ಶುಲ್ಕವಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ಆಸಕ್ತರು ಕನ್ನಡ ಕೂಟದ ಸದಸ್ಯತ್ವವನ್ನೂ ಪಡೆಯಬಹುದು.

ಅಂದ ಹಾಗೆ, ಕಾರ್ಯಕ್ರಮ ನಡೆಯುವ ಸ್ಥಳವನ್ನು ಗುರುತು ಹಾಕಿಕೊಳ್ಳಿ: Griffin Middle School Auditorium. Smyrna. ಕನ್ನಡ ಕೂಟದ ಸಂಪರ್ಕ ವಿಳಾಸ : 660 Crescent Ridge Trail Mableton, GA 301265900. Phone: 7709410991

Directions to Griffin Middle School in Smyrna

Take exit #15 on I285, South Cobb Drive (Hwy 280), Go north. After about 2 miles*, Turn Left at King Springs Rd (QT gas station & Eckerd Drug Store at the corner). After a block you will see Griffin Middle School on the right. *You will cross about 6 traffic lights and pass Emory Hospital (on right) before you come to Kingsprings Road.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X