ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕಲಿ : ಅಮೆರಿಕ ನೆಲದಲ್ಲಿ ಕನ್ನಡದ ಬೀಜಗಳ ಬಿತ್ತನೆ

By Staff
|
Google Oneindia Kannada News

Kannada Kali students
* ವಿಶ್ವೇಶ್ವರ ದೀಕ್ಷಿತ, ಲಾಸ್‌ಏಂಜಲಿಸ್‌, ಯುಎಸ್‌ಎ

ಕನ್ನಡ ಕಲಿ ಎಂದರೆ ಏನು ?

ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಮತ್ತು ಕನ್ನಡ ಪರಿಸರ ನಿರ್ಮಿಸುವ ಜನ ಮೂಲ ಪ್ರಯತ್ನ
ಮಕ್ಕಳು ಅಲ್ಲದೆ, ಆಸಕ್ತಿ ಉಳ್ಳ ಎಲ್ಲರಿಗೂ ಕನ್ನಡ ಕಲಿಯಲು ಅವಕಾಶ ಇಲ್ಲಿದೆ.

ಪ್ರೇರಣೆ

ಬೆಳೆಯುತ್ತಿರುವ ಮಕ್ಕಳು, ಕನ್ನಡ ನಾಡಿನ ಹೊರಗೆ ಇದ್ದು, ಕನ್ನಡ ಸಂಸ್ಕೃತಿಯಿಂದ ದೂರವಾಗುತ್ತಿರುವ ಭಾವ.
'ಕನ್ನಡಿಗ" ಆಗಲು ಕನ್ನಡ ಭಾಷೆ ಅವಶ್ಯ ಎಂಬ ನಮ್ಮ ನಂಬಿಕೆ.
ಅರಳು ಮಲ್ಲಿಗೆಯ ಕನ್ನಡ ಕಲಿಸುವ ಪ್ರಯೋಗದ ಉತ್ತೇಜನಕಾರಿ ಪರಿಣಾಮ- ತಿಂಗಳು ಒಂದರಲ್ಲಿ 20 ನಿಮಿಷ ಮಾತ್ರ.

ಪ್ರಾರಂಭ

ಸೆಪ್ಟೆಂಬರ್‌ 2000, ಇರ್ವೈನ್‌ನಲ್ಲಿ ಆರು ಮಕ್ಕಳೊಂದಿಗೆ ಮೊದಲ ಶಾಲೆ ಪ್ರಾರಂಭ.
ಇರ್ವೈನ್‌ ಕಮ್ಯೂನಿಟಿ ಕೇಂದ್ರದಲ್ಲಿ ಉಚಿತ ಜಾಗ ಲಭ್ಯ.
ಸಂಭಾಷಣೆಗೆ ಆದ್ಯತೆ
ಉತ್ಸಾಹಿ ಮಕ್ಕಳು ತಂದೆ ತಾಯಿಯವರು ಶಿಕ್ಷಕರಿಂದ ಪ್ರೋತ್ಸಾಹ

ಪ್ರಮಾಣನವ್ಯ ವಿಚಾರಕ್ಕೆ ಪ್ರಮಾಣ ದೊರೆತದ್ದು ಹೀಗೆ-
ಹ್ಯೂಸ್ಟನ್‌ ಸಮ್ಮೇಳನದಲ್ಲಿ ನಡೆದ ಘಟನೆ
ಇಲಿನಾಯ್‌ ಮತ್ತು ಉತರ ಕನ್ನಡ ಕೂಟಗಳ ಸಂಘಟಕರು, ಶಿಕ್ಷಕರು ಉಪಯುಕ್ತ ಸಲಹೆ ನೀಡಿದರು.

ಈಗ-

ಇರ್ವೈನ್‌, ಡೈಮಂಡ್‌ ಬಾರ್‌, ಸರಿಟೋ, ಆನಹೈಮ್‌ ಹಿಲ್ಸ್‌ ಮತ್ತು ಪಾಮ್‌ಡೇಲ್‌ 6 ಪ್ರದೇಶಗಳಲ್ಲಿ ಕನ್ನಡ ಕಲಿ ಶಾಲೆಗಳು ಭರದಿಂದ ನಡೆಯುತ್ತಿವೆ.

ಒಟ್ಟು ಮಕ್ಕಳು 40. ಶಿಕ್ಷಕರು 10.

ಕನ್ನಡ ಕಲಿ ಚಟುವಟಿಕೆಗಳು:
ಸಂಭಾಷಣೆ- ಪ್ರಶ್ನೋತ್ತರ, ದೃಶ್ಯ, ನಟನೆ, ಕಥೆ, ಜೋಕು
ಓದು- ಪದ್ಯ, ಕಥೆ, ಕವನ
ಬರವಣಿಗೆ- ವರ್ಣಮಾಲೆ, ಕಾಗುಣಿತ, ಸುಲಭ ಶಬ್ದಗಳು, ಒತ್ತಕ್ಷರರಗಳು, ಅಂಕಿಗಳು
ಕನ್ನಡ ಆಟ- ಅಂಕಿ / ಪದ್ಯಗಳೊಂದಿಗೆ ವ್ಯಾಯಾಮ, ಶಬ್ದಗಳ ಅಂತ್ಯಾಕ್ಷರಿ - 'ಅದು ಏನು"

ಆಕರ- ಆಧಾರಗಳು
ಪಠ್ಯ ಪುಸ್ತಕಗಳು
ಇತರ ಪುಸ್ತಕಗಳು- ಕತೆ, ಕವನ ಸಂಕಲನಗಳು
ಕರ್ನಾಟಕದಿಂದ ಬಂದ ಅಜ್ಜಿ- ತಾತಂದಿರು
ಜಾಲತಾಣಗಳು

ಕನ್ನಡ ಸವಾಲುಗಳು
- ತಂದೆ ತಾಯಿಯರು ಹಾಕುವ ಹಿಂದೇಟು
- ಮಕ್ಕಳ ಇತರ ಓದಿನ ಮೇಲೆ ಪರಿಣಾಮ
- ಅಮೇರಿಕೆಯಲ್ಲಿ ಒಂದೆಡೆ ಸೇರುವುದು ಕಠಿಣವಾಗಬಹುದು
- ಕರೆದುಕೊಂಡು ಬರುವ ಅನಾನುಕೂಲ
- ಇತರ ಮುಖ್ಯ ಚಟುವಟಿಕೆಗಳು-ಮಕ್ಕಳ ಪುಸ್ತಕಗಳು, ವಯಸ್ಸಿನಲ್ಲಿ ಅಸಮಾನತೆ.

ಕೊನೆಯ ಮಾತು, ಮುಖ್ಯ ಮಾತು
ಇಲ್ಲಿ ಕಲಿಸುವುದು / ಕಲಿಯುವುದು ಕಠಿಣ ಅಲ್ಲ
ಕನ್ನಡ ಕಲಿಯಲು ಕನ್ನಡ ಪರಿಸರವನ್ನು ನಾವು ಸೃಷ್ಟಿಸಬೇಕು- ಮನೆಯ ಒಳಗೆ ಮತ್ತು ಹೊರಗೆ
ಚಿಕ್ಕದಾಗಿ ಕೆಲವೇ ಮಕ್ಕಳೊಂದಿಗೆ 'ಕನ್ನಡ ಕಲಿ" ಪ್ರಾರಂಭಿಸಿ
ವರ್ಗಗಳನ್ನು ನಿಯತವಾಗಿ ನಿಯಮಿತ ಜಾಗ /ಸಮಯಗಳಲ್ಲಿ ನಡೆಸಬೇಕು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X