• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹನುಮನ ನೋಡಿದಿರಾ..ವ್ಯಾಂಕೋವರ್‌ ಹನುಮನ ನೋಡಿದಿರಾ!

By Staff
|

*ಪ್ರಶಾಂತ್‌ ಎಸ್‌.ಬಿ., ವ್ಯಾಂಕೋವರ್‌

ಕೂಸಿನ ಕಂಡೀರಾ ಭಗವಂತನ ಕಂಡೀರಾ

ಬಾಲನ ಕಂಡೀರಾ ಬಲವಂತನ ಕಂಡೀರಾ...

Hanumana Mathave Divya Matha : Mega Hanuma Puja in Vancouverವ್ಯಾಂಕೋವರ್‌ನಲ್ಲಿ ಈ ಹನುಮ ದೇವರದೇ ಸ್ತುತಿ, ಆತನದ್ದೇ ಸ್ಮರಣೆ. ಕೇಸರಿ, ಕೆಂಪುಡುಗೆ ತೊಟ್ಟ ಬ್ರಹ್ಮಚಾರಿಗಳಲ್ಲಿ ಪಾದರಸದ ಉತ್ಸಾಹ. ಜುಲೈ 27ರಂದು ಹೋಮದೊಂದಿಗೆ ಶುರುವಾದ ಹನುಮ ಪೂಜೆ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಒಂಭತ್ತು ದಿನಗಳ ಕಾಲ ನಡೆಯುತ್ತಿದೆ. ಒಂಭತ್ತೂ ದಿನ ಹನುಮ ಜಪ.

ವ್ಯಾಂಕೋವರ್‌ನಲ್ಲಿ ವಾನರರು !

ಇಲ್ಲಿನ ಹನುಮ ಮೂರ್ತಿ ಎದ್ದು ಬರುವಂತಿದೆ. ಅದರ ಸುತ್ತ ವಾನರರ ಸೇನೆ. ಕಪಿವರರು ಹಾಡುತ್ತಾ, ಕುಣಿಯುತ್ತಾ ಆನಂದ ತುಂದಿಲರಾಗಿರುವಂತಹ ಕೆತ್ತನೆ ಸೊಗಸಾಗಿದೆ. ಅಲ್ಲಿ ಕಳೆಯುವ ಕಾಲ ಮನಸ್ಸಿಗೆ ಮುದ ಕೊಡುವಂತಹದ್ದು.

ಬೆಂಗಳೂರಿನ ಪ್ರಮೇಯಜೀಯವರಿಗೆ ನಮೋನ್ನಮಃ

ಸಾಗರದಾಚೆಯಲ್ಲೂ ಹನುಮ ಜಪ ಅಂದರೆ ತವರೂರಲ್ಲಿ ಇರುವವರ ಕಿವಿ ನಿಮಿರುತ್ತದೆ. ‘ಹೌದಾ’ ಎಂಬ ಉದ್ಘಾರ ಹೊರಡುತ್ತದೆ. ಆದರಿದು ದಿಟ. ಇಷ್ಟೆಲ್ಲಾ ಸಾಂಗೋಪಾಂಗವಾಗಿ ಸಾಗುತ್ತಿರುವುದು ಬೆಂಗಳೂರಿನ ಅರ್ಚಕ ಪ್ರಮೇಯಜೀ ಅವರ ಕೃಪಾ ಕಟಾಕ್ಷದಿಂದ. ಸಂಸ್ಕೃತ ಅವರಿಗೆ ಕರಗತ. ಅವರು ಮಾಡುವ ಹನುಮ ಪೂಜೆ ಪಾಂಗಿತ.

ಜುಲೈ 27ರಂದು ಹನುಮ ಜಪ ಶುರುವಾದದ್ದು ಹೀಗೆ...ಮೊದಲು ಹೋಮ. ಆಮೇಲೆ ದೇವಾಲಯದಲ್ಲಿ ಹನುಮ ಜಪ. ತದ ನಂತರ ಚಕ್ಕಳ ಮಕ್ಕಳ ಹಾಕಿ ಕೂತೆವು. ಹನುಮನಿಗೆ ಸಂಬಂಧಿಸಿದ ರಾಮಾಯಣದ ಕಥಾವಳಿ ಪ್ರಮೇಯಜೀಯವರಿಂದ ಪುಂಖಾನುಪುಂಖ ಬಿಚ್ಚಿಕೊಂಡಿತು. 20 ನಿಮಿಷಗಳ ಉಪನ್ಯಾಸದಲ್ಲಿ ಅದ್ಭುತ ಹನುಮ ದರ್ಶನ. ಅದನ್ನು ತಪ್ಪಿಸಿಕೊಂಡಿದ್ದರೆ ನಾನು ಎಷ್ಟು ಕಳಕೊಳ್ಳುತ್ತಿದ್ದೆನೋ? ಆಮೇಲೆ ಮಹಾಲಕ್ಷ್ಮಿ ಪೂಜೆ ಮಾಡಿದರು. ಅದಾದ ನಂತರ ಹನುಮ ಮೂರ್ತಿಗೆ ಮಹಾ ಪೂಜೆ. ದೇವಸ್ಥಾನದ ಸುತ್ತ ವಾನರ ಸೇನಾ ಸಹಿತ ಹನುಮ ಮೂರ್ತಿಯ ಮೆರವಣಿಗೆಯಾಯಿತು. ಮೆರವಣಿಗೆ ಸಮಯದಲ್ಲಿ ಹನುಮಾನ್‌ ಚಾಲೀಸ ಅನುರಣಿಸಿತು.

ಎಲ್ಲಾ ಆದ ನಂತರ ಬಾಯಲ್ಲಿ ನೀರೂರುವ ಕಾರ್ಯಕ್ರಮ; ಉದರ ಸೇವೆ. ನನ್ನಂಥಾ ಬ್ರಹ್ಮಚಾರಿಗಳಿಗಂತೂ ಪಂಚಭಕ್ಷ್ಯ ಪರಮಾನ್ನ ಅಂದರೆ ಅಮೃತವೇ ಸರಿ. ಭಕ್ತಿ ಹೊನಲಾದ ನಂತರ ಆಗುವ ಉದರ ಸೇವೆಗೆ ಅದರದ್ದೇ ಆದ ವಿಶೇಷ ಮಹತ್ವವಿದೆ. ಪ್ರಸಾದದ ರುಚಿಯೇ ಹಾಗೆ. ದೇವಸ್ಥಾನದಲ್ಲೇ ಮಾಡಿದ ಅಡುಗೆ ಬ್ರಹ್ಮಚಾರಿಯ ಜಿಹ್ವಾ ಚಾಪಲ್ಯ ತಣಿಸುವಲ್ಲಿ ಭಾರೀ ಯಶಸ್ವಿಯಾಯಿತು !

ಯಜ್ಞ ಮತ್ತು ಹನುಮ ಪೂಜೆಯಲ್ಲಿ ಭಾಗಿಯಾದ ಅದೃಷ್ಟವಂತರಲ್ಲಿ ನಾನೂ ಒಬ್ಬ. ಭಗವತ್‌ ಜಪದಲ್ಲಿ ಈವರೆಗೆ ಕಳೆದಿರುವ ಆರು ದಿನ ಕಟ್ಟಿ ಕೊಟ್ಟ ಅನುಭವ ಅವರ್ಣನೀಯ. ಇಂಥಾ ಅಪರೂಪದ ಅವಕಾಶ ಕೊಟ್ಟ ಪ್ರಮೇಯಜೀ ಅವರಿಗೆ ನಾನು ಆಭಾರಿ. ನನ್ನ ಜೀವನದಲ್ಲಿ ಇಂಥಾ ಒಂದು ಅನುಭವ, ಅದೂ ಸಾಗರದಾಚೆಯಲ್ಲಿ ಆಗುತ್ತದೆ ಅಂತ ಕನಸು ಮನಸಲ್ಲೂ ಎಣಿಸಿರಲಿಲ್ಲ. ಇದು ನಾನು ಅನುಭವಿಸಿದ ಅಚ್ಚರಿ. ಭಕ್ತಿಯ ಪರಮಾವಧಿಯ ಸಿರಿ.

ವ್ಯಾಂಕೋವರ್‌ಗೆ ನೀವೂ ಪ್ರಯಾಣ ಹೊರಟಿದ್ದೀರಾ? ಹಾಗಿದ್ದರೆ ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನವನ್ನು ನೋಡಲು ಮರೆಯದಿರಿ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X