ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾನ ನಾಟ್ಯ ರಸ ಸಂಜೆಗೆ ‘ಕಾವೇರಿ-ಶ್ರೀ ಶಿವ ವಿಷ್ಣು ದೇಗುಲ’ ವೇದಿಕೆ

By Staff
|
Google Oneindia Kannada News

ಕಾವೇರಿ ಕನ್ನಡ ಸಂಘ ಮತ್ತು ಶ್ರೀ ಶಿವ ವಿಷ್ಣು ದೇವಸ್ಥಾನ ಜುಲೈ 13ರಂದು ಸಂಗೀತ ಹಾಗೂ ನೃತ್ಯ ಸಂಜೆಯನ್ನು ಜಂಟಿಯಾಗಿ ಏರ್ಪಡಿಸಿವೆ.

ಸಂಗೀತ ನೃತ್ಯದ ಔತಣ ಉಣಬಡಿಸುವವರು ನಾಟ್ಯ ವಿಶಾರದ, ಸ್ವಿಟ್ಝರ್‌ಲ್ಯಾಂಡ್‌ನ ವಿದ್ವಾನ್‌ ಡಿ. ಕೇಶವ ಮತ್ತು ಆಕಾಶವಾಣಿ ಕಲಾವಿದೆ ರಾಧಾ ಶೇಷಭೂಷಣ.

ಸಂಗೀತ ಪ್ರಿಯರಿಗೆ ರಸಾಸ್ವಾದನೆಗೆ ಅಪರೂಪದ ಅವಕಾಶ. ಜುಲೈ 13ರ ಸಂಜೆ ರಾಧಾಶೇಷಭೂಷಣ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವನ್ನು ಪ್ರಸ್ತುತಪಡಿಸುವರು. ಅಲಮೇಲು ಹಾಗೂ ವಿವೇಕ್‌ ಚೆಲ್ಲಪ್ಪ ಅವರು ವಯಲಿನ್‌ ಮತ್ತು ಮೃದಂಗಮ್‌ ಸಾಥ್‌ ನೀಡುತ್ತಾರೆ. ಕೇಶವ ಅವರು ವಿಶೇಷ ನೃತ್ಯ ಕಾರ್ಯಕ್ರಮಕ್ಕೆ ಹೆಜ್ಜೆ ಹಾಕಲಿದ್ದಾರೆ.

ಸಂಜೆ ಐದು ಗಂಟೆಗೆ ರಾಧಾ ಅವರ ಗಾಯನ ಕಚೇರಿ ಆರಂಭವಾಗುತ್ತದೆ. 6.30ರಿಂದ 7 ಗಂಟೆಯ ಅವಧಿಯಲ್ಲಿ ರಾತ್ರಿ ಭೋಜನ. ಮತ್ತೆ 7ರಿಂದ 9 ಗಂಟೆಯವರೆಗೆ ಕೇಶವ ಅವರಿಂದ ‘ಭಾರತೀಯ ನೃತ್ಯಕ್ಕೆ ಪಾಶ್ಚಾತ್ಯ ತಾಳ’ !

ಸ್ಥಳ ಮತ್ತು ದಾರಿ : SSVT Auditorium,6905, Cipriano Road,Lanham, MD 20706)

ಕಾರ್ಯಕ್ರಮಕ್ಕೆ ಟಿಕೇಟು ಕೊಳ್ಳಬೇಕಾಗಿಲ್ಲ. ಉಚಿತ ಪ್ರವೇಶ. ನಿಮ್ಮ ಕಲಾಪ್ರಿಯ ಸ್ನೇಹಿತ ದಂಡಿನೊಂದಿಗೆ ಕಾರ್ಯಕ್ರಮವನ್ನು ಆಸ್ವಾಧಿಸಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಜಯ್‌ ರಾವ್‌ ಅವರನ್ನು ಸಂಪರ್ಕಿಸಬಹುದು - (703) 869 1461.

ವಿದ್ವಾನ್‌ ಕೇಶವ ಅವರ ಬಗ್ಗೆ ನಿಮಗೆ ಗೊತ್ತೇ..?

ಸ್ವಿಟ್ಝರ್‌ಲ್ಯಾಂಡಿನಲ್ಲಿ ಕಲಾಶ್ರೀ ಎಂಬ ಶಾಲೆ ಹಾಗೂ ವೇದಿಕೆಯ ಸ್ಥಾಪಕ ಮುಖಂಡರು. ನಾಟ್ಯ ವಿಶಾರದಾ ಎನಿಸಿಕೊಂಡಿರುವ ಕೇಶವ ವಿದ್ವತ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 1975ರಲ್ಲಿ ಸ್ವಿಟ್ಝರ್‌ಲ್ಯಾಂಡಿನಲ್ಲಿ ಕಲಾಶ್ರೀಯನ್ನು ತೆರೆದ ಕೇಶವ ಅವರಿಗೆ 1997ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಯೂ ಬಂತು. ಧರ್ಮ ಪತ್ನಿ ಎಸ್ತರ್‌ ಕೇಶವ ಜೆನ್ನಿ ಕೂಡ ಕಲಾವಿದೆ. ಮನೆಯಲ್ಲಿ ಕಲಾಶಾಲೆ ನಡೆಸುತ್ತಿದ್ದಾರೆ.

ವಿದ್ವಾನ್‌ ರಾಧಾ ಶೇಷಭೂಷಣ ಅವರು ಕಾರ್ಯಕ್ರಮಕ್ಕೆ ಅತಿಥಿ ಕಲಾವಿದರಾಗಿ ಆಗಮಿಸುತ್ತಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿದವರು. 1950ರಿಂದಲೂ ಆಕಾಶವಾಣಿ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು, ಬೆಂಗಳೂರು, ತುಮಕೂರು ಮತ್ತಿತರ ಪ್ರದೇಶದಲ್ಲಿ ಸಾಕಷ್ಟು ಸಂಗೀತ ಕಚೇರಿ ನೀಡಿದ ಅನುಭವಸ್ಥರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X