ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಯಿಲಿ ದಂಪತಿಗೆ ಕನ್ನಡ ಸಾಂಸ್ಕೃತಿಕ ಸಂಘದ ಆತಿಥ್ಯ

By Staff
|
Google Oneindia Kannada News

KCA felicitates Veerappa Moily ಅದು ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡ ಸಾಂಸ್ಕೃತಿಕ ಸಂಘ (ಕೆಸಿಎ)ದ 2002-03 ನೇ ಸಾಲಿನ ಮೊದಲ ಕಾರ್ಯಕ್ರಮ. ಮೊದಲ ಕಾರ್ಯಕ್ರಮದಲ್ಲೇ ಅಭೂತಪೂರ್ವ ಯಶಸ್ಸು !

ಮೇ 27 ರಂದು ನಡೆದ ಕೆಸಿಎ ಕಾರ್ಯಕ್ರಮದ ಕೇಂದ್ರಬಿಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ. ಕೆಸಿಎ ಸಮುದಾಯದೊಂದಿಗೆ ಮೊಯಿಲಿ ಖುಷಿ ಹಾಗೂ ಹುಮ್ಮಸ್ಸಿನಿಂದ ಬೆರೆತರು. ಎಲ್ಲರೊಳಗೊಂದಾದರು. ಮೊಯಿಲಿ ಎಂದರೆ ತ್ರಿವೇಣಿ ಸಂಗಮ; ರಾಜಕಾರಣ- ಬುದ್ಧಿಮತ್ತೆ ಹಾಗೂ ಆಧ್ಯಾತ್ಮಿಕ ಜ್ಞಾನದ ಮೊತ್ತ .

ಮೊಯಿಲಿ ಕನ್ನಡ ಪ್ರೇಮಿಯೂ ಹೌದು, ಸಾಹಿತಿಯೂ ನಿಜ. ಕಾರ್ಯಕ್ರಮದಲ್ಲಿ ಮೊಯಿಲಿ ಮಾತನಾಡಿದ್ದು ಕೂಡ ಕನ್ನಡದ ಕುರಿತೇ. ಕನ್ನಡದ ಈಹೊತ್ತಿನ ಸ್ಥಿತಿಗತಿ, ಸವಾಲುಗಳು ಕುರಿತು ಮೊಯಿಲಿ ಅಧಿಕೃತವಾಗಿ ಮಾತನಾಡಬಲ್ಲರು. ಅದರ ಅನುಭವ ಕೆಸಿಎ ಸದಸ್ಯರಿಗೆ!

ತಮ್ಮ ‘ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯ ಹಾಗೂ ಇಂಗ್ಲಿಷಿನ Musings of India ಕೃತಿಗಳನ್ನು ಮೊಯಿಲಿ ಕೆಸಿಎಗೆ ನೆನಪಿನ ಕೊಡುಗೆಯಾಗಿ ನೀಡಿದರು. ಕೆಸಿಎ, ಗಣ್ಯ ಅತಿಥಿಯನ್ನು ‘ಸನ್ಮಾನ ಪತ್ರ’ ನೀಡುವ ಮೂಲಕ ಗೌರವಿಸಿತು. ಮೊಯಿಲಿ ಅವರ ಪತ್ನಿ ಮಾಲತಿ ಅವರಿಗೆ ಪುಷ್ಪಗುಚ್ಛ. ಮಾಲತಿ ಮೊಯಿಲಿ ಅವರೂ ಸಾಹಿತ್ಯದ ವಿದ್ಯಾರ್ಥಿ. ಗಂಡನಿಗೆ ತಕ್ಕ ಹೆಂಡತಿ. ‘ಜೊತೆಯಾಗಿ ನಡೆಯೋಣ’ ದಂಪತಿಗಳು ಜೊತೆಯಾಗಿ ಪ್ರಕಟಿಸಿದ ಕೃತಿ.

ಇದು ಕೆಸಿಎ ಆರಂಭದ ಕಾರ್ಯಕ್ರಮ. ಮುಂದಿನ ದಾರಿಯಲ್ಲಿ ಸಾಲು ಸಾಲು ದೀಪಗಳು...

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X