• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಂತನಾಗು ವೀರಭದ್ರ!

By Staff
|

ಕಾವೇರಿ ಪ್ರಸ್ತುತ ಪಡಿಸುವ ತೆಂಕು ತಿಟ್ಟು ಶೈಲಿಯ ದಕ್ಷಯಜ್ಞ ಪ್ರಸಂಗ

ಆಪ್ಘಾನಿಸ್ತಾನದ ಮೇಲೆ ಅಮೆರಿಕಾದ ಜೆಟ್‌ಗಳೆಸೆಯುತ್ತಿರುವ ಥರಾವರಿ ಬಾಂಬ್‌ಗಳ ಸದ್ದು ಮಾಧ್ಯಮಗಳ ಮೂಲಕ ವಿಶ್ವವನ್ನೆಲ್ಲಾ ವ್ಯಾಪಿಸಿಕೊಂಡಿರುವಾಗ ಇದೇನಿದು.. ಚೆಂಡೆಯ ತರಿಕಿಟ..! ಎಲ್ಲಿಂದ ಕೇಳಿಬರುತ್ತಿದೆ ಮಂತ್ರಘೋಷ, ಅಬ್ಬಬ್ಬಾ ಅಬ್ಬರವೇ, ಶಾಂತನಾಗು ವೀರಭದ್ರ!

ಕೀಲಿಕೊಟ್ಟ ಯಂತ್ರಗಳಿಗೂ ಮನಸ್ಸುಗಳಿಗೂ ಹೆಚ್ಚಿನ ವ್ಯತ್ಯಾಸ ಇಲ್ಲದ ಇವತ್ತಿನ ದಿನಗಳಲ್ಲಿ ಇಂಥದೊಂದು ಕಾರ್ಯಕ್ರಮ ನಿಮಗೆ ಚೇತೋಹಾರೆ ಎನಿಸಬಹುದು. ತವರಿಗೆ, ತವರ ಸಂಸ್ಕೃತಿಗೆ ಮತ್ತೊಮ್ಮೆ ಮನಸ್ಸನ್ನೊಡ್ಡಿಕೊಳ್ಳಲೊಂದು ಸಂದರ್ಭವೂ ಆಗಬಹುದು. ಏನೇ ಇರಲಿ, ನ.17 ರ ಯಕ್ಷಗಾನ ಕಾರ್ಯಕ್ರಮವನ್ನು ಮಾತ್ರ ಮಿಸ್‌ ಮಾಡಬೇಡಿ. ಕಾವೇರಿ ಕನ್ನಡ ಸಂಘ ಪ್ರಸ್ತುತಪಡಿಸುವ ಈ ಅಪರೂಪದ ತೆಂಕು ತಿಟ್ಟು ಶೈಲಿಯ ದಕ್ಷಯಜ್ಞ ಪ್ರಸಂಗ ನಿಮಗಾಗಿ.

ಕಾರ್ಯ ಕ್ರಮ ನಡೆಯುವುದು ವ್ಯಾಟ್‌ಕಿನ್ಸ್‌ ಹೈ ಸ್ಕೂಲ್‌ನಲ್ಲಿ (Watkins Mill High School, 10301 Apple Ridge Road, Gaithersburg MD20879). ಯಕ್ಷಗಾನ ಒಂದು ಗಂಟೆ ಅವಧಿಯದ್ದು . ಯಕ್ಷಗಾನ, ಸಮೂಹನೃತ್ಯ, ಊಟ ಸೇರಿದಂತೆ ಸಂಜೆ 4.30 ಕ್ಕೆ ಆರಂಭವಾಗುವ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 10 ಗಂಟೆಗೆ ಮುಗಿಯುತ್ತದೆ.

ಯಕ್ಷಗಾನ ಕಾರ್ಯಕ್ರಮದ ಬಗ್ಗೆ ಯಾವುದೇ ಹೆಚ್ಚಿನ ವಿವರ ಬೇಕಿದ್ದರೂ ನೀವು ಈ ಫೋನ್‌ ನಂಬರ್‌ಗಳಿಗೆ ಫೋನ್‌ ಮಾಡಬಹುದು. ನಾಗಶಂಕರ್‌: (240) 631- 0569, ಡಾ. ಶಾಮಲಾ (301) 330- 0919, ಸಂಜಯ್‌ ರಾವ್‌ (703) 442-3316.

ವೀರಭದ್ರನ ಹುಟ್ಟಿಗೆ ಕಾರಣವಾದ ದಕ್ಷಯಜ್ಞದ ಕಥೆ ಗೊತ್ತೇ ?

ದಕ್ಷ ಪ್ರಜಾಪತಿಯ ಅಹಂಕಾರದಿಂದ ಆಗುವ ಅನಾಹುತಗಳನ್ನು ಒಳಗೊಂಡಿರುವ ಈ ಕಥಾಭಾಗ, ಈಶ್ವರನ ಸತ್ರಯಾಗದ ಸಮಾರಂಭದಿಂದ ಪ್ರಾರಂಭವಾಗಿ, ದಕ್ಷನ ವಧೆಯಲ್ಲಿ ಮುಕ್ತಾಯಗೊಳ್ಳುವುದು.

ದಕ್ಷ ಪ್ರಜಾಪತಿಯು ತನ್ನ ಅಳಿಯನಾದ ಈಶ್ವರ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಸಭೆಗೆ ಬಂದಾಗ, ತನಗೆ ತಕ್ಕುದಾದ ರೀತಿಯಲ್ಲಿ ಮರ್ಯಾದೆ ದೊರಕಲಿಲ್ಲವೆಂದು ಕಡುಗೋಪಗೊಂಡು ಭೃಗುಮುನಿಯಾಂದಿಗೆ ಈಶ್ವರನನ್ನು ಆಹ್ವಾನಿಸದೆ, ಈಶ್ವರನಿಗೆ ಹವಿಸ್ಸನ್ನೂ ಕೊಡದೆ ನಿರೀಶ್ವರ ಯಾಗವನ್ನು ಕೈಗೊಳ್ಳುತ್ತಾನೆ. ಅಲ್ಲಿಗೆ ಆಹ್ವಾನವಿಲ್ಲದೆ ಬಂದ ಈಶ್ವರನ ಅರ್ಧಾಂಗಿ ದಾಕ್ಷಾಯಿಣಿಯನ್ನು ತನ್ನ ಸ್ವಂತ ಮಗಳೆಂದೂ ಯೋಚಿಸದೆ, ಭೃಗು ಮುನಿ, ದೇವೆಂದ್ರ ಇನ್ನಿತರ ದೇವತೆಗಳೊಡಗೂಡಿ ಅವಮಾನಿಸಿ, ಅವಳ ದೇಹತ್ಯಾಗಕ್ಕೆ ಕಾರಣನಾಗುತ್ತಾನೆ. ಇದನ್ನು ತಿಳಿದ ಈಶ್ವರ, ಕೋಪಗೊಂಡು ತನ್ನ ಜಟೆಯಿಂದ ವೀರಭಧ್ರನನ್ನು ಸೃಷ್ಟಿಸಿ, ಅವನಿಗೆ ದಕ್ಷ ಮತ್ತು ಅವನ ಹಿಂಬಾಲಕರನ್ನು ಕೊಂದು ದಕ್ಷಯಜ್ಞವನ್ನು ನಾಶಗೊಳಿಸಿ, ಅವನ ತಾಯಿಯ ಪ್ರಾಣತ್ಯಾಗದ ಸೇಡನ್ನು ತೀರಿಸಲು ಆಜ್ಞಾಪಿಸುತ್ತಾನೆ. ವೀರಭದ್ರ , ದಕ್ಷನ ಯಜ್ಞಶಾಲೆಯನ್ನು ಪ್ರವೇಶಿಸಿ ಭೃಗುಮುನಿ, ದೇವೇಂದ್ರ, ಅಗ್ನಿ, ಯಮ ಮುಂತಾದವರನ್ನು ಯುದ್ಧದಲ್ಲಿ ಸೋಲಿಸಿ, ಕೊನೆಗೆ ದಕ್ಷನ ಶಿರವನ್ನು ಕಡಿದು ದಕ್ಷ ಯಜ್ಞಕ್ಕೆ ಆಹುತಿಯಾಗಿಸುತ್ತಾನೆ.
ಈ ದಕ್ಷ ಯಜ್ಞ ಪ್ರಸಂಗವೇ ಮುಂದಿನ ಪಾರ್ವತೀ ಕಲ್ಯಾಣಕ್ಕೆ ಮುನ್ನುಡಿ.

ಪಾತ್ರವರ್ಗದಲ್ಲಿ ಇವರೆಲ್ಲಾ ಇದ್ದಾರೆ..

ದಕ್ಷನಾಗಿ ಮನೋಹರ ಕುಲಕರ್ಣಿ, ಈಶ್ವರನಾಗಿ ನಾಗರಾಜ ನೀರ್ಚಾಲ್‌, ದಾಕ್ಷಾಯಿಣಿ ಪಾತ್ರದಲ್ಲಿ ಶಾಂತಿ ತಂತ್ರಿ, ವೀರಭದ್ರನಾಗಿ ಪುರುಷೋತ್ತಮ ರಾವ್‌, ದೇವೇಂದ್ರನಾಗಿ ಮಹಾಬಲೇಶ್ವರ ಹೆಗಡೆ, ಅಗ್ನಿಯ ಪಾತ್ರದಲ್ಲಿ ಕ್ಷಮಾ ಹೆಗಡೆ, ಯಮನಾಗಿ ಸಂಜಯರಾವ್‌, ವೃದ್ಧ ಬ್ರಾಹ್ಮಣನ ಪಾತ್ರದಲ್ಲಿ ಲಕ್ಷ್ಮೀನಾರಾಯಣ, ಬ್ರಾಹ್ಮಣನ ಪತ್ನಿಯಾಗಿ ಭಾರತಿ ತ್ಯಾಗರಾಜ ಹಾಗೂ ಮಗನಾಗಿ ಉದಯತಂತ್ರಿ, ದಕ್ಷನ ಹೆಂಡತಿಯಾಗಿ ಮೀನಾ ರಾವ್‌ ಹಾಗೂ ಭೃಗುಮುನಿಯಾಗಿ ರವಿ ಹರಪನಹಳ್ಳಿ.

ಹಿಮ್ಮೇಳನದಲ್ಲಿ - ಮುಖ್ಯ ಭಾಗವತಿಕೆ ವೆಂಕಟರಮಣ ಐತಾಳರಿಂದ. ಹಿಮ್ಮೇಳದ ಪರಿಕರಣಗಳಲ್ಲಿ ವಿಜಯಾ ಕುಲಕರ್ಣಿ ಅವರು ಸಹಕರಿಸುವರು. ಮುಖವಿನ್ಯಾಸ ಸಂಜಯ್‌ ಉಚ್ಚಿಲ್‌, ಅಲೀಸಿಯ ಲಿಲ್ಲೀ ಹಾಗೂ ರಾಜಶೇಖರ್‌ ಅವರಿಂದ. ರಂಗದ ಹಿನ್ನೆಲೆಯ ಸಹಾಯದಲ್ಲಿ, ತ್ಯಾಗರಾಜ್‌, ಸದಾಶಿವ್‌ ಮತ್ತು ಸಂಧ್ಯಾ ಸದಾಶಿವ್‌, ರಾಮಕೃಷ್ಣ ಭಟ್‌ ಹಾಗೂ ಶಿವಶಂಕರ ಭಟ್‌ ಅವರು ಸಹಕರಿಸುವರು.

ಸಂಗೀತ, ಸಾಹಿತ್ಯ, ನಾಟ್ಯ, ಅಭಿನಯಗಳಲ್ಲದೇ ವರ್ಣಾಲಂಕಾರವನ್ನೂ ಹೊಂದಿಸಿಕೊಂಡಿರುವ ಯಕ್ಷಗಾನ ಒಂದು ಪರಿಪೂರ್ಣ ಕಲೆ. ಕಾವೇರಿಯ ಈ ಪ್ರಥಮ ಪ್ರಯತ್ನದ ಸಂಯೋಜನೆಯನ್ನು ವಹಿಸಿಕೊಂಡು ತಾಂತ್ರಿಕ ನೆರವು, ಸತತ ಪ್ರೋತ್ಸಾಹ, ಮತ್ತು ದಿಗ್ದರ್ಶನ ಇತ್ತವರು ಸುರತ್ಕಲ್‌ ವಾಸುದೇವ ರಾವ್‌.

ಉಳಿದದ್ದು ರಂಗಸ್ಥಳದಲ್ಲಿ ವೇದ್ಯ!

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more