• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದ ತೇರು ಬರುತ್ತಿದೆ ದಾರಿಬಿಡಿ....

By Staff
|

*ಎಸ್ಕೆ. ಶಾಮಸುಂದರEmail: shami.sk@greynium.com

Kannada ratha - A symbolic expression to World Kannada Conference - 2002ಅಮೆರಿಕಾದ ಅನಿವಾಸಿ ಕನ್ನಡಿಗರ ಮಹತ್ವಾಕಾಂಕ್ಷೆಯ ಮತ್ತೊಂದು ವಿಶ್ವ ಕನ್ನಡ ಸಮ್ಮೇಳನ ಇಗೋ ಬರುತ್ತಿದೆ. ನಾವು ಅಂದುಕೊಂಡ ಹಾಗೆ ನ್ಯೂಯಾರ್ಕಿನಲ್ಲಿ ಅಲ್ಲ. ಬದುಕಿನಲ್ಲಿ ತಿರುವುಗಳು ಬರುವುದು ಹೀಗೇನೇ. ನಮ್ಮ ತಾಳಕ್ಕೆ ತಕ್ಕಂತೆ ಜಗತ್ತು ಹೆಜ್ಜೆ ಹಾಕಿದ್ದರೆ ಸಿರಿಕೇಂದ್ರವೂ ಕುಸಿಯುತ್ತಿರಲಿಲ್ಲ, ನ್ಯೂಯಾರ್ಕಿನ ಬದುಕು ಈ ಪಾಟಿ ಬದಲಾವಣೆ ಕಾಣುತ್ತಿರಲಿಲ್ಲ. ನನ್ನದು -ನಿಮ್ಮದು ಸೇರಿದಂತೆ ಪ್ರತಿಯಾಬ್ಬನ ಮೈ-ಮನ-ದೈನಂದಿನ ಜೀವನವನ್ನು ಕಂಪಿಸಿದ ಈ ಮಹಾನಗರಿಯ ಬದುಕು ತರಾಸು ಬರೆದ ಹಾಗೆ ತಿರುಗು ಬಾಣ, ರಕ್ತರಾತ್ರಿ, ಕಂಬನಿಯ ಕುಯಿಲು! ಕುಸಿದು ಬಿದ್ದ ಅರಮನೆಯ ನೆಲಮಾಳಿಗೆಯಲ್ಲಿ ನ್ಯೂಯಾರ್ಕ್‌ ತಾನು ತಿದ್ದಿ ಬರೆದ ಚಿತ್ರಗಳ ಲೆಕ್ಕವಿಟ್ಟವರಿಲ್ಲ. ಅಂತಹುದರಲ್ಲಿ ಕನ್ನಡ ವಿಶ್ವ ಕನ್ನಡ ಸಮ್ಮೇಳನದ ತಾಣವೂ ಒಂದಾಯಿತು ಎನ್ನುವುದು ನಾವಿವತ್ತು ನಿಮಗೆ ನೀಡುತ್ತಿರುವ ಸಮಾಚಾರ. ಅಲ್ಲಿ ನಡೆಯಲೆಂದು ನಿಗದಿಯಾಗಿದ್ದ ಸಮ್ಮೇಳನ ಇದೀಗ ಮಿಚಿಗನ್‌ನ ಡೆಟ್‌ರಾಯಿಟ್‌ಗೆ ಶಿಫ್ಟ್‌ ಆಗಿದೆ. ನಡೆಯಿರಿ ಅಲ್ಲಿಗೇ ಹೋಗೋಣ:

ವಿಶ್ವ ಕನ್ನಡ ಸಮ್ಮೇಳನ : ದಿನಾಂಕ ಆಗಸ್ಟ್‌ 30-ಸೆಪ್ಟೆಂಬರ್‌ 1-2002 ಶುಕ್ರ, ಶನಿ, ಭಾನು -ಡೆಟ್‌ರಾಯಿಟ್‌, ಮಿಚಿಗನ್‌

ನಮಗೆ ಈ ಸುದ್ದಿಯನ್ನು ಮೊದಲು ಕೊಟ್ಟವರು ಅಕ್ಕ ಸಂಸ್ಥೆಯ ಜಂಟಿ ಖಜಾಂಚಿ ಮತ್ತು ಮಿಚಿಗನ್‌ ಕನ್ನಡ ಕೂಟದ ಅಧ್ಯಕ್ಷ ರಂಗರಾಜನ್‌ ತಿರುಮಲ.

ಜೆಟ್‌ ಲ್ಯಾಗ್‌ ಇನ್ನೂ ಇಳಿದಿರಲಿಲ್ಲ ಅಂತ ಕಾಣತ್ತೆ. ರಂಗ ಬೆಂಗಳೂರಿಗೆ ಬಂದವರೇ ನನಗೆ ಫೋನ್‌ ಮಾಡಿ ಅಪಾಯಿಂಟ್‌ಮೆಂಟ್‌ ನಿಗದಿ ಮಾಡಿಕೊಂಡು ಗಾಂಧೀ ಬಜಾರಿನಲ್ಲಿ ಭೇಟಿಯಾದರು. ಅಲ್ಲಿಂದ ನಾವು ಸೀದಾ ಪ್ರೆಸ್‌ ಕ್ಲಬ್‌ಗೆ ತೆರಳಿ ಸಮ್ಮೇಳನ ಕುರಿತ ಮಾತುಕತೆಗೆ ಕುಳಿತೆವು.

ಅವರು ಎಲ್ಲೇ ಇರಲಿ. ವಿಶ್ವದ ನಾನಾಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ಪಾಲ್ಗೊಳ್ಳಬಹುದಾದ ಪ್ರಸ್ತುತ ಸಮ್ಮೇಳನ ನಭೂತೋ ನಭವಿಶ್ಯತಿ ಅನ್ನುತ್ತಾರಲ್ಲಾ , ಹಾಗೆ ವ್ಯವಸ್ಥೆ ಮಾಡಬೇಕೆನ್ನುವುದು ವ್ಯವಸ್ಥಾಪಕರ ಅಂದರೆ ಅಕ್ಕ ಮತ್ತು ಮಿಚಿಗನ್‌ ಕನ್ನಡ ಕೂಟದ ಆಶಯ. ಈ ಹೆಬ್ಬಯಕೆ ಅರ್ಥವಾಗತಕ್ಕದ್ದೇ. ಆದರೆ ಮಂತ್ರಕ್ಕೆ ಮಾವಿನಕಾಯಿಗಳು ಉದುರುವುದಿಲ್ಲ.

ಮನೆಯಲ್ಲಿ ಒಂದು ಸತ್ಯನಾರಾಯಣ ಪೂಜೆ ಮಾಡಿ ಸರೀಕರಿಂದ ಸೈ ಎನಿಸಿಕೊಳ್ಳಬೇಕಾದರೆ ಸತ್ಯನಾರಾಯಣ ದೇವರ ವರ ಬಿಟ್ಟು ಬೇರೇನೂ ಸಹಾಯಕ್ಕೆ ಬರುವುದಿಲ್ಲ ! ಪ್ರತಿನಿಧಿಗಳು, ಅತಿಥಿಗಳು ಮತ್ತು ಆತಿಥೇಯರು ಕೂಡಿದರೆ 3000 ಮಂದಿಗೆ ಮೂರು ದಿನಗಳ ಕಾಲದ ಸಮಾರಾಧನೆಗೆ ಸಕಲವೂ ಸಜ್ಜಾಗಬೇಕು. ಈ ಗುರುತರ ಜವಾಬ್ದಾರಿಯನ್ನು ಅಕ್ಕ ಅಚ್ಚುಕಟ್ಟಾಗಿ ನಿಭಾಯಿಸಬೇಕು. ಈ ವರದಿಯನ್ನು ನೀವು ಓದುತ್ತಿರುವ ಸಮಯಕ್ಕೆ ಅಲ್ಲಿ , ಅಧ್ಯಕ್ಷ ಅಮರ್‌ನಾಥ್‌ ಗೌಡ ಅವರ ನೇತೃತ್ವದಲ್ಲಿ ಅಕ್ಕ ಕಾರ್ಯಕಾರಿಣಿ ಸಭೆ ಸೇರಿ ಸಮಾಲೋಚನೆ ನಡೆಸುತ್ತಿರುತ್ತದೆ.

ಇಂಥ ಸಮಾಲೋಚನೆಗಳು ಹಲವು ಹಂತಗಳಲ್ಲಿ ನಡೆಯಬೇಕು ಎನ್ನುವುದು ಕಾರ್ಯಕ್ರಮದ ಗಾತ್ರ-ಪಾತ್ರವನ್ನು ಒತ್ತಿಹೇಳುತ್ತದೆ. ನಮ್ಮ ರಂಗ ಅವರು ಹೇಳುವ ಧಾಟಿಯಲ್ಲಿ ಅಕ್ಕ Conference steering Committee ರಚಿಸುತ್ತಿದೆ. ಈ ಸಮಿತಿ ವ್ಯವಸ್ಥಾಪಕ ಕೆಲಸ ಕಾರ್ಯಗಳ ಬಗೆಗೆ ಆಮೂಲಾಗ್ರ ಚಿಂತನ-ಮಂಥನ ನಡೆಸುತ್ತದೆ.

ಇವೆಲ್ಲ ಹೇಗೂ ಇರಲಿ. ಕರ್ನಾಟಕದ ದೃಷ್ಟಿಯಿಂದ ಆಗಬೇಕಾದ ನೆರವು-ಪ್ರೋತ್ಸಾಹದ ಪಟ್ಟಿ ದೊಡ್ಡದಿದೆ. ಅವುಗಳಲ್ಲಿ ಮುಖ್ಯವಾದದ್ದು :

  • ಕರ್ನಾಟಕ ಸರಕಾರದಿಂದ ಮುಖ್ಯವಾಗಿ ಮಾರಲ್‌ ಸಪೋರ್ಟ್‌. ಇದರಲ್ಲಿ ಸಂಪನ್ಮೂಲ, ವಿವಿಧ ಇಲಾಖೆಗಳ ಅಗತ್ಯ ನೆರವು-ಸಹಕಾರ. ಈ ಹೊತ್ತು ಅಕ್ಕ ಸಹಕಾರಕ್ಕಾಗಿ ಕೆಲವರತ್ತ ಮುಖಮಾಡಿದೆ. ಅವರನ್ನು ಹೆಸರಿಸಬಹುದಾದರೆ: ಕೃಷ್ಣ , ರಾಣಿ ಸತೀಶ್‌, ಬರಗೂರು ರಾಮಚಂದ್ರಪ್ಪ, ಕೇದಾರ್‌ನಾಥ್‌, ಕೆ.ಸಿ. ರಾಮಮೂರ್ತಿ, ಮುದ್ದುಕೃಷ್ಣ ಮುಂತಾದವರು
  • ಸಮ್ಮೇಳನಕ್ಕೆ ನಾನೂ ಬರುತ್ತೇನೆ, ಸಂಗಡಿಗರನ್ನು ಕರೆತರುತ್ತೇನೆ ಎಂಬ ಆಶ್ವಾಸನೆ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರಿಂದ
  • ಇನ್ನು ಆಮಂತ್ರಿತರ ಪಟ್ಟಿ. ಯಾರ್ಯಾರನ್ನು ಕರೆಯಬೇಕು ಎಂದು ಅಕ್ಕ ಪಟ್ಟಿ ಮಾಡುತ್ತದೆ. ಆ ಪಟ್ಟಿಯಲ್ಲಿ ನಮ್ಮ ಸಾಹಿತಿಗಳು , ಸಮುದಾಯ ಪ್ರಿಯರು, ಕಲಾವಿದರು ಸಹಜವಾಗಿಯೇ ಇರುತ್ತಾರೆ. ಈ ಪಟ್ಟಿಯಲ್ಲಿ ಯಾರಿದ್ದರೆ ಲೇಸು, ಕರ್ನಾಟಕದಿಂದ ಈ ಸಮ್ಮೇಳನಕ್ಕೆ ನಿಜಕ್ಕೂ ಏನಾಗಬೇಕು.. ಎಂಬಿತ್ಯಾದಿ ವಿಚಾರಗಳನ್ನು ನಾನೂ ಕಾಲಕಾಲಕ್ಕೆ ಗುರುತಿಸುತ್ತೇನೆ, ಆದರೆ ಈಗಲ್ಲ.
  • ಡಾ. ರಾಜ್‌ಕುಮಾರ್‌ ಅಥವಾ ಮತ್ತು ವಿಷ್ಣುವರ್ಧನ್‌ ಅಥವಾ ಮತ್ತು ಅಂಬರೀಷ್‌ ಹೆಸರುಗಳಿವೆ. ಇಲ್ಲಿ ಮುಖ್ಯವಾಗುವುದು ಡೇಟ್ಸ್‌ ಮತ್ತು ಆ ಹೊತ್ತಿನ ಆರೋಗ್ಯ.

ಈ ಬಗೆಯ ಕೆಲಸಗಳನ್ನು ಹಚ್ಚಿಕೊಂಡು ರಂಗ ಬೆಂಗಳೂರಿನಲ್ಲಿ ಲಗುಬಗೆಯಿಂದ ಓಡಾಡುತ್ತಿದ್ದಾರೆ. ಹೋದ ಕಡೆ ಎಲ್ಲ ಅವರಿಗೆ ಪಾಸಿಟಿವ್‌ ರೆಸ್‌ಪಾನ್ಸ್‌ ಸಿಗಲಿ ಎಂದು ಆಶಿಸುತ್ತೇನೆ. ಬರೆಯುವುದಕ್ಕೆ ಇನ್ನೂ ಬಹಳ ಇದೆ. ನಾಳೆ ಮತ್ತೆ ಸಿಗುತ್ತೇನೆ.

ನಮಸ್ಕಾರ.

ವಾರ್ತಾ ಸಂಚಯ
ಏಕ ಛತ್ರಿಯಡಿ ಕನ್ನಡ, ಕನ್ನಡಿಗ - ಅಕ್ಕನ ಕಣ್ಣಲ್ಲಿ ಕಾಮನಬಿಲ್ಲು

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more