• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮೊಳಗಿನ ಲೇಖನ-ಲಹರಿಗೆ ವಿಶ್ವ ಕನ್ನಡ ಸಮ್ಮೇಳನ-2002 ರ ‘ಸ್ಪಂದನ’

By Staff
|

(ಇನ್ಫೋ ಇನ್‌ಸೈಟ್‌)

ಡೆಟ್ರಾಯಿಟ್‌- ಮಿಚಿಗನ್‌ನಲ್ಲಿ ಕನ್ನಡದ ತೇರಿನ ಕದಲಿಕೆ ಪ್ರಾರಂಭವಾಗಿದೆ. 2002 ನೇ ಇಸವಿ ಆಗಸ್ಟ್‌ 30 ರಿಂದ ಮೂರು ದಿನಗಳ ಕಾಲ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಹಮ್ಮಿಕೊಂಡಿರುವ ‘ವಿಶ್ವ ಕನ್ನಡ ಸಮ್ಮೇಳನ- 2002’ ಹತ್ತಿರವಾಗುತ್ತಿದ್ದಂತೆ ತಯಾರಿಯೂ ಜೋರಾಗಿದೆ. ಅಂದಹಾಗೆ, ನೀವು ಬರಹಗಾರರೇ? ನಿಮ್ಮೊಳಗೊಂದು ಕವಿತೆ, ಲಹರಿ, ವಿಚಾರ ಹರಿದಾಡುತ್ತಿದೆಯೇ? ಹೌದಾದಲ್ಲಿ ವಿಶ್ವ ಕನ್ನಡ ಸಮ್ಮೇಳನ ನಿಮ್ಮ ಬರಹದ ಅಭಿವ್ಯಕ್ತಿಗೊಂದು ವೇದಿಕೆ ಕಲ್ಪಿಸಿಕೊಡುತ್ತಿದೆ.

ಸಮ್ಮೇಳನದ ಅಂಗವಾಗಿ ಹೊರ ತರುತ್ತಿರುವ ಸ್ಮರಣ ಸಂಚಿಕೆ ‘ಸ್ಪಂದನ’ ಕ್ಕೆ ಸಂಪಾದಕೀಯ ಮಂಡಳಿ ಬರಹಗಳನ್ನು ಆಹ್ವಾನಿಸಿದೆ. ಕನ್ನಡ ಹಾಗೂ ಕರ್ನಾಟಕದ ಸಂಸ್ಕೃತಿಯ ಕನ್ನಡಿ ಈ ಸ್ಪಂದನ! ಶ್ರೀನಿವಾಸ ಕೆ.ಭಟ್‌ ಸ್ಮರಣ ಸಂಚಿಕೆ ಸಂಪಾದಕೀಯ ಮಂಡಳಿಯ ಅಧ್ಯಕ್ಷರು.

ಪ್ರಚಲಿತ ವಿದ್ಯಮಾನಗಳು, ಅನಿವಾಸಿ ಕನ್ನಡಿಗರು ಎದುರಿಸುವ ಸವಾಲು- ಸಮಸ್ಯೆಗಳು ಕುರಿತಾದ ಬರಹಗಳಿಗೆ ಸ್ವಾಗತ. ಲೇಖನಗಳು ಸಮ್ಮೇಳನದ ಧ್ಯೇಯ ವಾಕ್ಯವಾದ ‘ಅಭಿಮಾನ, ಐಕ್ಯತೆ, ಅಳವಡಿಕೆಗಳಿಂದ ಅಭ್ಯುದಯ’ ಎನ್ನುವುದನ್ನು ಬಿಂಬಿಸುವಂತಿರಲಿ.

ಲೇಖನಗಳು ಕನ್ನಡದಲ್ಲಿರಲಿ. ಸೀಮಿತ ಸಂಖ್ಯೆಯ ಇಂಗ್ಲೀಷ್‌ ಬರಹಗಳಿಗೂ ಅವಕಾಶವಿದೆ. ಕವಿತೆ, ಸಣ್ಣ ಕತೆ, ನಾಟಕ, ಬದುಕಿನ ಅನುಭವಗಳು, ಪ್ರಬಂಧ, ಕಾರ್ಟೂನ್‌, ಜೋಕು, ವಿಮರ್ಶೆ ಹಾಗೂ ಸಂಶೋಧನಾ ಮತ್ತು ಅಧ್ಯಯನ ಬರಹಗಳು ತಲುಪಬೇಕಾದ ಕೊನೆಯ ದಿನಾಂಕ- ಮಾರ್ಚ್‌ 31, 2002.

ಮೂಲ ಲೇಖನಗಳು ಹಾಗೂ ಅನಿವಾಸಿ ಕನ್ನಡಿಗರ ಜೀವನ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಲೇಖನಗಳಿಗೆ ಆದ್ಯತೆ. ಬರಹಗಳನ್ನು ಕಳುಹಿಸಲು ‘ಬರಹ 4.0’ ಸಾಫ್ಟ್‌ವೇರ್‌ ಬಳಸಿ. ಈ ಸಾಫ್ಟ್‌ವೇರನ್ನು ನೀವು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು; ಸಂಪರ್ಕಿಸಿ- http://www.Baraha.com

ಲೇಖನಗಳು 1500 ಪದಗಳ ಮಿತಿಯಲ್ಲಿರಲಿ; ಪದ್ಯಗಳಾದರೆ ಟೈಪು ಮಾಡಿದ ಒಂದು ಪುಟದಷ್ಟಿರಲಿ. ನಿಮ್ಮ ಬರಹಗಳನ್ನು sanchike@akkaonline.org ಇ-ಮೇಲ್‌ ವಿಳಾಸಕ್ಕೆ ಕಳುಹಿಸಿ. ಬರಹದೊಂದಿಗೆ ನಿಮ್ಮ ಹೆಸರು, ವಿಳಾಸ, ಇ-ಮೇಲ್‌ ವಿಳಾಸ, ದೂರವಾಣಿ ಸಂಖ್ಯೆ, ಊರು ಹಾಗೂ ದೇಶ ಸ್ಪಷ್ಟವಾಗಿರಲಿ. ನಿಮ್ಮ ಕುರಿತಾದ ಕಿರು ಪರಿಚಯ ಹಾಗೂ ಭಾವಚಿತ್ರ(1" wide X 1.25" height)ವೂ ಅಪೇಕ್ಷಣೀಯ. ಫೋಟೋಗಳನ್ನು Gif ಅಥವಾ Jpg ಫಾರ್ಮ್ಯಾಟ್‌ನಲ್ಲಿ ಕಳುಹಿಸಿ.

ಬರಹಗಳನ್ನು ಡಿಸ್ಕೆಟ್‌ ಮೂಲಕ ಕಳುಹಿಸುತ್ತೀರಾ? ವಿಳಾಸ :
Srinivasa K. Bhat
Committee Chairperson
World Kannada Conference 2002 Souvenir Committee
1717 Greenwich Drive
Troy, MI48098
ವಾರ್ತಾಸಂಚಯ

ಕನ್ನಡದ ತೇರು ಬರುತ್ತಿದೆ ದಾರಿಬಿಡಿ....
ಏಕ ಛತ್ರಿಯಡಿ ಕನ್ನಡ, ಕನ್ನಡಿಗ - ಅಕ್ಕನ ಕಣ್ಣಲ್ಲಿ ಕಾಮನಬಿಲ್ಲು
ಆಸೆಗಳು ಬಾನಗಲ,ಬೊಕ್ಕಸ ಬೊಗಸೆಯಗಲ: ಇದು ಕನ್ನಡ ಮತ್ತು ಸಂಸ್ಕೃತಿ !

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more