• search

ಎಲ್ಲರಿಗೂ ಬೇಕಾದವರು ನಮ್ಮೀ ಶ್ರೀನಿವಾಸಭಟ್ಟರು

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಪೊಮೋನಾ ಕ್ಯಾಲಿಫೋರ್ನಿಯಾದಲ್ಲಿರುವ ಶ್ರೀನಿವಾಸ ಎಸ್‌.ಭಟ್ಟರು ಮತ್ತು ಸುಮಾ ಭಟ್ಟರು ನಿಮಗೆ ಗೊತ್ತು ಅಲ್ಲವೇ? (ಸುಮಾ ಭಟ್‌ ಅವರು ಹೆಸರಾಂತ ಸುಗಮ ಸಂಗೀತ ಗಾಯಕಿ, ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ . ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಸಿಸುತ್ತಿರುವ ಅವರು ಆ ಪ್ರದೇಶದಲ್ಲೂ, ಉತ್ತರ ಕ್ಯಾಲಿಫೋರ್ನಿಯಾ, ಆರಿಜೋನಾ ಮುಂತಾದ ಕಡೆಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸಿದ್ದಾರೆ.)

    ಶ್ರೀನಿವಾಸಭಟ್ಟರು ಸುಮಾರು 15 ವರ್ಷಗಳ ಹಿಂದೆ, ಷಿಕಾಗೋ ಕನ್ನಡ ಸಂಘ ‘ವಿದ್ಯಾರಣ್ಯ’ದ ಅಧ್ಯಕ್ಷರಾಗಿದ್ದರು; ಲಾಸ್‌ ಏಂಜಲೀಸ್‌ಗೆ ಬಂದಮೇಲೆ, ಅವರು ಅಲ್ಲಿನ ಕನ್ನಡ ಸಂಘ ‘ದಕ್ಷಿಣ ಕ್ಯಾಲಿಫೋರ್ನಿಯಾ ಸಾಂಸ್ಕೃತಿಕ ಸಂಘ’ಕ್ಕೆ ಅಧ್ಯಕ್ಷರಾಗಿದ್ದರು, ಆ ವರ್ಷ ಅಭೂತಪೂರ್ವವಾಗಿ ಒಂದು ನಾಟಕೋತ್ಸವವನ್ನು ನಡೆಸಿದರು, ಅಲ್ಲಿನ ಕನ್ನಡ ಸಂಘದ ಚಟುವಟಿಕೆಗಳಲ್ಲಿ ತುಂಬಾ ಶ್ರಮಿಸಿದರು.

    ಈಗಲೂ ಅಲ್ಲಿನ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಶ್ರೀನಿವಾಸ ಭಟ್ಟರೂ, ಅವರ ಪತ್ನಿ ಸುಮಾ ಹಾಗೂ ಮಕ್ಕಳು ಅನಿತಾ ಭಟ್‌ ಮತ್ತು ಶೀಲಾ ಭಟ್‌ ಸಕ್ರಿಯವಾಗಿ ಭಾಗವಹಿಸಿ ದುಡಿಯುತ್ತಿದ್ದಾರೆ. ಭಟ್ಟರು ಒಳ್ಳೆಯ ಬರಹಗಾರರು ; ಕವನ, ಕತೆ, ಪ್ರಬಂಧಗಳನ್ನು ಬರೆದಿದ್ದಾರೆ; ‘ಅಮೆರಿಕನ್ನಡ’ದ ಸಲಹಾ ಸಮಿತಿಯಲ್ಲಿ ಇದ್ದವರು. ನಾಟಕಗಳನ್ನು ಆಡಿಸಿದ್ದಾರೆ, ಪಾತ್ರ ವಹಿಸಿದ್ದಾರೆ. ಸಂಗೀತ ಸಭೆಗಳನ್ನು ಏರ್ಪಡಿಸಿದ್ದಾರೆ, ಪ್ರತಿವಾರವೂ ಸಂಗೀತಮಯ ಮಕ್ಕಳು-ಮಯ ಭಜನಮಂಡಳಿಯ ರೀತಿಯ ಸಂತೋಷಕೂಟಗಳನ್ನು ಏರ್ಪಡಿಸಲು ನೆರವಾಗಿಯೂ, ನೇರವಾಗಿಯೂ ಸಂಘಟನೆಗೆ ಎತ್ತಿದ ಕೈ ಆಗಿರುವವರು. ಒಟ್ಟಾರೆ, ನಮ್ಮ ಭಟ್ಟರು ಎಲ್ಲರಿಗೂ ಬೇಕಾದವರು!

    ಮನಸ್ಸಿಗಂತೂ ವಯಸ್ಸಾಗಿರದ, ಹೊಸಹುರುಪಿಗೆ ಇನ್ನೂ ತರುಣಕಾಯದ, ಪರೋಪಕಾರೀ ಪ್ರವೃತ್ತಿಗೆ ಹೃದಯವಿತ್ತಿರುವ ಭಟ್ಟರ 50 ನೇ ಹುಟ್ಟುಹಬ್ಬವನ್ನ ಒಂದು ಆಶ್ಚರ್ಯಕೂಟವನ್ನಾಗಿ, 2001 ರ ಫೆಬ್ರವರಿ 18 ರ ಭಾನುವಾರ, ಅವರ ಗೆಳೆಯರು ಏರ್ಪಡಿಸಿದ್ದರು. ಅದು ವಿಜೃಂಭಣೆಯಿಂದ ನಡೆಯಿತು.

    ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more