• search

ಕ್ಯಾಲಿಫೋರ್ನಿಯಾದಲ್ಲಿ ಸಾ.ಶಿ.ಮ. ಸಾಹಿತ್ಯಗೋಷ್ಠಿ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಕ್ಯಾಲಿಫೋರ್ನಿಯಾ: ಉತ್ತರ ಕ್ಯಾಲಿಫೋರ್ನಿಯಾದ ‘ಕನ್ನಡ ಬಳಗ’ ಆಗಸ್ಟ್‌ 18 ರಂದು ಹಿರಿಯ ಸಾಹಿತಿ ಡಾ.ಸಾ.ಶಿ. ಮರುಳಯ್ಯ ಅವರ ‘ಸಾಹಿತ್ಯ ಗೋಷ್ಠಿ ’ ಕಾರ್ಯಕ್ರಮವನ್ನು ಏರ್ಪಡಿಸಿದೆ.

    ಸಂಜೆ 3 ರಿಂದ 5 ಗಂಟೆವರೆಗೆ ಸನ್ನಿವೇಲ್‌ ದೇವಸ್ಥಾನ ಮತ್ತು ಸಮುದಾಯ ಕೇಂದ್ರ , (ಸನಿವೇಲ್‌, ಉತ್ತರ ಕ್ಯಾಲಿಫೋರ್ನಿಯಾ)ದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಕಾರ್ಯಕ್ರಮದ ಸೂತ್ರಧಾರರಾಗಿ ಗಜಾನನ ಜೋಷಿ ಅವರಿದ್ದರೆ, ನಿರ್ವಹಣೆಯ ಹೊಣೆ.ಯನ್ನು ನಾಗಲಕ್ಷ್ಮಿ ಹರಿಹರೇಶ್ವರ ಹೊತ್ತಿದ್ದಾರೆ.

    ಗೋಷ್ಠಿಯ ವಿಷಯ :‘ಕನ್ನಡದ ಕವಿಗಳು ‘ಪಂಪ ಮತ್ತು ಕುಮಾರ ವ್ಯಾಸ’- ಒಂದು ತೌಲನಿಕ ಅಧ್ಯಯನ’. ವಿಷಯದ ಕುರಿತು ಮಾತನಾಡುವ ಡಾ. ಸಾ. ಶಿ. ಮರುಳಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು. ರಾಜ್ಯ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಕಾವ್ಯ, ವಿಮರ್ಶೆ, ಜೀವನ ಚರಿತ್ರೆ, ಕಾದಂಬರಿ, ಗ್ರಂಥ ಸಂಪಾದನೆಯೇ ಮೊದಲಾದ ಕ್ಷೇತ್ರಗಳಲ್ಲಿ ನುರಿತವರು.

    ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಜ್ಯೋತಿ ಮಹಾದೇವ್‌- (408) 873-0134 , ವಿದ್ವಾನ್‌ ಗಜಾನನ ಜೋಷಿ- (408)973-9294/(408) 734-4554, ನಾಗಲಕ್ಷ್ಮಿ ಹರಿಹರೇಶ್ವರ- (209) 957-6825 : EMail: hoysala_usa@hotmail.com

    ಡಾ.ಸಾ.ಶಿ. ಮರುಳಯ್ಯನವರ ಕೃತಿ ಪ್ರಪಂಚ

    ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಸಾ. ಶಿ. ಮರುಳಯ್ಯ, ರಾಜ್ಯ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಕಾವ್ಯ, ವಿಮರ್ಶೆ, ಜೀವನ ಚರಿತ್ರೆ, ಕಾದಂಬರಿ, ಗ್ರಂಥ ಸಂಪಾದನೆಯೇ ಮೊದಲಾದ ಕ್ಷೇತ್ರಗಳಲ್ಲಿ ನುರಿತವರು. ಅವರ ಕೃತಿ ವೈವಿಧ್ಯ ಕೆಳಗಿನಂತಿದೆ-

    ಶಿವತಾಂಡವ, ಮರೀಬೇಡಿ, ಕೆಂಗನ ಕಲ್ಲು , ಭಾಸನ ಮಕ್ಕಳು, ವಿಭೂತಿ ಪುರುಷರು, ಭಾರತ ರತ್ನ, ಪುರುಷ ಸಿಂಹ , ಹೇಮ ಕೂಟ, ವಿಜಯವಾತಾಪಿ, ಶ್ರೀ ಮರುಳ ಸಿದ್ಧೇಶ್ವರ ಮಹಾ ಪುರಾಣ, ಹರಿಹರನ ಹತ್ತು ರಗಳೆಗಳು, ವಿಪರ್ಯಾಸ, ಘೋಷವತಿ, ಸ್ವಪ್ನ ವಾಸವದತ್ತ, ನೆಲದ ಸೊಗಡು, ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ, ಎರಡು ನಾಟಕಗಳು, ಅವಸ್ಥಾ, ಆತ್ಮೀಯ, ಭಾರತೀಯ ಜ್ಞಾನಪೀಠ ಮತ್ತು ಕನ್ನಡಿಗರು, ಕಾವ್ಯಾನಂದ, ಜಾನಪದ ಕತೆಗಳು, ರೂಪಸಿ, ಸಾಮರಸ್ಯದ ಶಿಲ್ಪಿ, ಬಾರೋ ಮೈಲಾರಕೆ, ವೀರಶೈವ ವಿಚಾರ ಸಂಕಿರಣ, ಮಳ್ಳಿಗೊಂದು ಒಳ್ಳೆ ಮಾತು, ಮಹಾಪ್ರಸಾದಿ, ಸಾಹಿತ್ಯೋಪಾಸಕ, ಶೂನ್ಯ ಸಂಪಾದನೆಗೊಂದು ಮುನ್ನುಡಿ, ಶೂನ್ಯ ಸಂಪಾದನೆ: ಒಂದು ಅಧ್ಯಯನ, ಶ್ರೀ ತೋಂಟದಾಚಾರ್ಯ ವಚನ ವ್ಯಾಖ್ಯೆ, ಶ್ರೀ ಸಿದ್ಧಲಿಂಗೇಶ್ವರ ಶತಕ, ಅರುವಿನಾಗರದಲ್ಲಿ , ಕನಕ ಸಂಪುಟ, ಮಾಸ್ತಿ ಕಾವ್ಯ, ಸುರಭಿ, ಕನ್ನಡ ಭಾಷೆಯ ಚರಿತ್ರೆ, ಅಕ್ಕನ ವಚನಗಳು, ನೀಲಮ್ಮನ ವಚನಗಳು, ಸಿದ್ಧಗಿರಿ, ಮಾಸ್ತಿ ಕಾವ್ಯ: ಒಂದು ಸಮೀಕ್ಷೆ, ಬದುಕು ಕ್ರೀಡಾರಂಗ, ಅನುಶೀಲನ, ಕೇಶಿರಾಜನ ಗರಡಿಯಲ್ಲಿ , ಮೈದುನ ರಾಮಣ್ಣನ ಕಥೆ, ಅಪರೂಪದವರು, ಸ್ನೋವೈಟ್‌ ಮತ್ತು ಇತರ ನೃತ್ಯ ರೂಪಕಗಳು, ಕೇಳು ಅನಿತಾ, ಛಂದೋಪ್ರಬಂಧಗಳು, ಇತ್ಯಾದಿ.

    (ಇನ್ಫೋ ವಾರ್ತೆ)

    Click here to go to top
    ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more