• search

ಬರಹಗಾರರ ಸಲ್ಲಾಪಕ್ಕೆ ಸನ್ನಿವೇಲ್‌ ಸಜ್ಜು

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಕ್ಯಾಲಿಫೋರ್ನಿಯಾ : ಮೇ 6 ರಂದು ಕನ್ನಡ ಬರಹಗಾರರು ಸಾಹಿತ್ಯ ಸಲ್ಲಾಪದಲ್ಲಿ ತೊಡಗಲಿದ್ದಾರೆ. ನೀವೂ ಭಾಗವಹಿಸಬಹುದು.

    ಉತ್ತರ ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ದೇವಸ್ಥಾನ ಮತ್ತು ಸಮುದಾಯ ಕೇಂದ್ರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಮಯ ಬೆಳಿಗ್ಗೆ 9ರಿಂದ 11.30 ರವರೆಗೆ.

    ಮುಖ್ಯ ಅತಿಥಿಗಳಾಗಿ ಕಾದಂಬರಿಕಾರ್ತಿ ರೇಖಾ ಕಾಖಂಡಕಿ, ಅಧ್ಯಕ್ಷರಾಗಿ ಡಾ. ಸಾ.ಶಿ ಮರುಳಯ್ಯ ಅವರು ಭಾಗವಹಿಸುವರು. ನೀವು ಶಾರ್ಪ್‌ 8.55ಕ್ಕೆ ಕಾರ್ಯಕ್ರಮ ಸ್ಥಳಕ್ಕೆ ಬರಬೇಕು ಅಂತ ಸಂಘಟಕರಾದ ಕನ್ನಡ ಬಳಗದವರು ಹೇಳಿದ್ದಾರೆ.

    ಸಲ್ಲಾಪದ ಸೂತ್ರಧಾರರಾಗಿ ಗಜಾನನ ಜೋಷಿಗಳು, ನಿರ್ವಾಹಕರಾಗಿ ನಾಗಲಕ್ಷ್ಮೀ ಹರಿಹರೇಶ್ವರ ಅವರು ಬರುತ್ತಾರೆ. ಕಾರ್ಯಕ್ರಮದ ಬಗ್ಗೆ ಯಾವ ವಿವರ ಬೇಕಿದ್ದರೂ ಹರಿಹರೇಶ್ವರರಿಗೆ ಫೋನ್‌ ಮಾಡಬಹುದು. (209) 9576825 EMail: hoysala_usa@hotmail.com

    ಆಹ್ವಾನಿತರ ಪರಿಚಯ
    ರೇಖಾ ಕಾಖಂಡಕಿ, ಮುಖ್ಯ ಅತಿಥಿಗಳು
    : ಅವರ ಅರುಣರಾಗ ಕಾದಂಬರಿ ಸಿನೇಮಾವಾಗಿದೆ. ಹೊಸ ಹೆಜ್ಜೆ ಕಾದಂಬರಿಗೆ ವಿಶ್ವ ಭಾರತಿ ಸಾಹಿತ್ಯ ಪ್ರಶಸ್ತಿ, ಕಪ್ಪು ತೆರೆಗೆ ಸರ್‌. ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ, ಪೃಥೆಗೆ ಗೀತಾ ದೇಸಾಯಿ ದತ್ತಿನಿಧಿ ಸಾಹಿತ್ಯ ಪುರಸ್ಕಾರ ಲಭಿಸಿದೆ. ಬಂಧನ, ಅಭೇದ್ಯ, ಸಂಭವಾಮಿ ಯುಗೇ ಯುಗೇ ಇವರ ಇತರ ಪ್ರಸಿದ್ಧ ಕಾದಂಬರಿಗಳು. ನಿರ್ಣಾಯಕರು ಮತ್ತು ಋತುಮಾನದ ಕತೆಗಳು ಕಾಖಂಡಕಿಯವರ ಕಥಾ ಸಂಕಲನಗಳು.

    ಸಾ.ಶಿ. ಮರುಳಯ್ಯ, ಅಧ್ಯಕ್ಷರು : ಸಾ.ಶಿ. ಮರುಳಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು. ಶಿವ ತಾಂಡವ, ಕೆಂಗನ ಕಲ್ಲು, ಮರೀಬೇಡಿ, ವಿಜಯವಾತಾಪಿ, ಹೇಮ ಕೂಟ, ಭಾರತ ರತ್ನರು, ವಿಭೂತಿ ಪುರುಷರು, ಶ್ರೀ ಮರುಳ ಸಿದ್ಧೇಶ್ವರ ಮಹಾ ಪುರಾಣ, ಹರಿಹರನ ರಗಳೆಗಳು, ನೆಲದ ಸೊಗಡು ಮುಂತಾದುವು ಇವರ ಕೃತಿಗಳು.

    (ಇನ್ಫೋ ವಾರ್ತೆ)

    Click here to go to top
    ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more