ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕೂಟದಲ್ಲಿ ‘ಕನ್ನಡ ರಸಪ್ರಶ್ನೆ’

By Staff
|
Google Oneindia Kannada News

ಕ್ಯಾಲಿಫೋರ್ನಿಯಾ : ಕನ್ನಡ ಮತ್ತು ಕರ್ನಾಟಕದ ಬಗ್ಗೆ ನಿಮಗೆ ಬಹಳಷ್ಟು ವಿಷಯಗಳು ಗೊತ್ತಿವೆಯೇ ... ಸ್ವಲ್ಪ ತಾಳಿ, ನಿಮ್ಮ ಜ್ಞಾನದ ಕತ್ತರಿಗೊಂದು ಸಾಣೆಕಲ್ಲು ಇಲ್ಲಿದೆ. ‘ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ’ ಕನ್ನಡ ರಸಪ್ರಶ್ನೆಯನ್ನು ಆಯೋಜಿಸಿದೆ.

ಕನ್ನಡದ ಇತಿಹಾಸ, ಕರ್ನಾಟಕದ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯ ವಿಷಯಗಳ ಮೇಲೆ ರಸಪ್ರಶ್ನೆ ನಡೆಯುತ್ತದೆ. ಸ್ಪರ್ಧಿಗಳಿಗೆ ವಯಸ್ಸಿನ ಮಿತಿಯೇನೂ ಇಲ್ಲ . ಗೆಲ್ಲುವ ತಂಡಕ್ಕೆ 150 ಡಾಲರ್‌ ಹಾಗೂ ಗೆಲ್ಲಬಹುದಾದ ತಂಡಕ್ಕೆ 75 ಡಾಲರ್‌ ಬಹುಮಾನ. ಆಗಸ್ಟ್‌ 18ರಂದು ನಡೆವ ಮೊದಲ ಸುತ್ತಿನ ಲಿಖಿತಪರೀಕ್ಷೆಯಲ್ಲಿ ಪಾಸಾದವರು ಗಣೇಶ ಹಬ್ಬದಂದು ನಡೆವ ಅಂತಿಮ ಸುತ್ತಿನ ಮೌಖಿಕ ರಸಪ್ರಶ್ನೆಗೆ ಆಯ್ಕೆಯಾಗುತ್ತಾರೆ. ಗೆದ್ದ ತಂಡಕ್ಕೆ ಬಹುಮಾನ ವಿತರಣೆಯೂ ಅಂದೇ ನಡೆಯುತ್ತದೆ.

ಆಗಸ್ಟ್‌ 18 ರಂದು ಶನಿವಾರ ಮಧ್ಯಾಹ್ನ 2 ಗಂಟೆಯಿಂದ 2.30ರವರೆಗೆ ಸನಿವೇಲ್‌ ದೇವಸ್ಥಾನ ಮತ್ತು ಸಮುದಾಯ ಕೇಂದ್ರ(420-450 ಪರ್ಶಿಯನ್‌ ಡ್ರೆೃವ್‌, ಸನಿವೇಲ್‌)ದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯುತ್ತದೆ. ಕೊನೆಯ ಹಂತದ ರಸಪ್ರಶ್ನೆ ಆಗಸ್ಟ್‌ 25ರ ಶನಿವಾರ ಸಂಜೆ 4 ಗಂಟೆಗೆ ಸ್ಪಾನ್‌ಗೆನ್‌ಬರ್ಗ್‌ ಸಭಾಂಗಣ (ಗನ್ನ್‌ ಹೈಸ್ಕೂಲ್‌, 780 ಅರಸ್ಟ್ರಡೆರೋ ರಸ್ತೆ, ಪಾಲೋ ಆಲ್ಟೋ, ಕ್ಯಾಲಿಫೋರ್ನಿಯಾ 94305)ದಲ್ಲಿ ನಡೆಯುತ್ತದೆ.

ಕ್ವಿಝ್‌ ನಿಯಮಾವಳಿ -

- ತಂಡವೊಂದರಲ್ಲಿ ಮೂವರಿಗೆ ಮಾತ್ರ ಅವಕಾಶ

-ಪ್ರಶ್ನೋತ್ತರವೆಲ್ಲಾ ಕನ್ನಡದಲ್ಲಿಯೇ ನಡೆಯುತ್ತದೆ

-ಪ್ರಾರಂಭದ ಹಂತದಲ್ಲಿ ಮೂವತ್ತು ಪ್ರಶ್ನೆಗಳಿರುತ್ತವೆ

- ಹೆಚ್ಚು ಅಂಕ ಗಳಿಸಿದ ನಾಲ್ಕು ವೃಂದಗಳು ಕೊನೆಯ ಹಂತಕ್ಕೆ ಪ್ರವೇಶಪಡೆಯಲಿವೆ

-ನಿರ್ಣಾಯಕ ಹಂತದ ರಸಪ್ರಶ್ನೆಯಲ್ಲಿ ಏಳು ಸುತ್ತಿನ ಶ್ರವಣ ಮತ್ತು ದೃಶ್ಯಸಂಬಂಧಿ ಪ್ರಶ್ನೆಗಳೂ ಸೇರಿದಂತೆ ಮೌಖಿಕ ಪ್ರಶ್ನೆಗಳು ಇರುತ್ತವೆ

-ಪರೀಕ್ಷಕರ ತೀರ್ಮಾನವೇ ಕೊನೆಯದು.

ರಾಘವೇಂದ್ರ ಹೆಬ್ಬಳಲು ಮತ್ತು ಸುಕುಮಾರ್‌ ರಘುರಾಮ್‌ ರಸಪ್ರಶ್ನೆಯ ಪರೀಕ್ಷಕರಾಗಿರುತ್ತಾರೆ. ಭಾಗವಹಿಸಲು ಇಚ್ಛಿಸುವವರು ಇ-ಮೇಯ್ಲ್‌ ಮೂಲಕ ತಮ್ಮ ಗುಂಪಿನ ಹೆಸರನ್ನು ನೋಂದಾಯಿಸಬೇಕು. ಸಂಪರ್ಕಿ ಸಿ : [email protected]

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X