ಕ್ಯಾಲಿಫೋರ್ನಿಯಾದ ಸನಿವೇಲ್‌ನಲ್ಲಿ ಪುರಂದರ ಆರಾಧನೆ
ಕ್ಯಾಲಿಫೋರ್ನಿಯಾ : ಎಲ್ಲಿದ್ದರೆ ಏನ್? ಎಂತಿದ್ದರೆ ಏನ್? ಎಂದೆಂದಿಗು ತಾನ್ - ಕನ್ನಡವೇ ಸತ್ಯ ... ಎಂದು ರಾಷ್ಟ್ರಕವಿ ಕುವೆಂಪು ಅವರು ವಿಶ್ವಕ್ಕೇ ಸಾರಿದ್ದಾರೆ. ಕನ್ನಡಿಗರು ಎಲ್ಲಿದ್ದರೂ ಅವರ ಕನ್ನಡತನ ಮಾತ್ರ ಸದಾ ಜಾಗೃತ. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಿಗರು ಸನಿವೇಲ್ ನಗರದ ಹಿಂದೂ ಮಂದಿರದ ಸಮುದಾಯ ಕೇಂದ್ರದಲ್ಲಿ ಶನಿವಾರ ಪುರಂದರ ದಾಸರ ಆರಾಧನೆ ಹಮ್ಮಿಕೊಂಡಿರುವುದೇ ಇದಕ್ಕೆ ಸಾಕ್ಷಿ.
ಕರ್ನಾಟಕ ಸಂಗೀತದ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಪರಿಚಯಿಸಲು ಹಾಗೂ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಕಳಕಳಿಯಿರುವ ಕನ್ನಡಿಗರು ಉತ್ತರ ಕ್ಯಾಲಿಫೋರ್ನಿಯಾ ಪ್ರದೇಶದಲ್ಲಿ ನಿಯಮಿತವಾಗಿ ಸಂಗೀತ ಕಚೇರಿಗಳನ್ನು ನಡೆಸುತ್ತಲೇ ಇರುತ್ತಾರೆ. ಇದಕ್ಕೆ ಸಹೃದಯಿ ಕನ್ನಡಿಗರ ಸಂಪೂರ್ಣ ಬೆಂಬಲವೂ ದೊರಕಿದೆ.
ಆರಾಧನೆ : ಪುರಂದರದಾಸರ ಆರಾಧನೆ ಶನಿವಾರ ಸನಿವೇಲ್ ಹಿಂದೂ ಮಂದಿರದ ಪ್ರಧಾನ ಅರ್ಚಕರಾದ ವಿದ್ವಾನ್ ಶ್ರೀ ಗಜಾನನ ಜೋಷಿಯವರ ನೇತೃತ್ವದಲ್ಲಿ ನೆರವೇರಲಿದೆ. ಕರ್ನಾಟಕ ಸಂಗೀತ ಪ್ರಪಿತಾಮಹರೆನಿಸಿದ ದಾಸವರೇಣ್ಯರಿಗೆ ಸಂಗೀತ ಸೇವೆಯ ಮೂಲಕ ಧನ್ಯವಾದ ಅರ್ಪಿಸುವ ಈ ಕಾರ್ಯಕ್ರಮದಲ್ಲಿ 75ಕ್ಕೂ ಹೆಚ್ಚು ಸಂಗೀತಗಾರರು ಭಾಗವಹಿಸುತ್ತಿದ್ದಾರೆ.
ಶನಿವಾರ (ಫೆ,10)ಮಧ್ಯಾಹ್ನ ಹನ್ನೆರಡೂವರೆಗೆ ಆರಂಭವಾಗಲಿರುವ ಈ ಗಾನಸುಧೆ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಕಿರಿಯ ಕಲಾವಿದರು, ಪಕ್ಕವಾದ್ಯಗಳಿಲ್ಲದೆ ಹಾಡುವವರು, ಪಕ್ಕವಾದ್ಯಗಳೊಂದಿಗೆ ಹಾಡುವವರ ಶ್ರುತಿಯ ಮಟ್ಟ ಅನುಸರಿಸುವವರು, ಹಿರಿಯ ಮತ್ತು ನುರಿತ ಕಲಾವಿದರು ಒಟ್ಟು ಏಳು ವಿಭಾಗಗಳಲ್ಲಿ ತಮ್ಮ ಸಂಗೀತ ಕೌಶಲ ಪ್ರದರ್ಶಿಸಲಿದ್ದಾರೆ.
ಮೃದಂಗ, ವೀಣೆ, ಕೊಳಲು, ಪಿಟೀಲು, ಘಟಂ ಕಲಾವಿದರು ಸಂಗೀತಗಾರರಿಗೆ ನೆರವಾಗಲಿದ್ದಾರೆ. ಶತಮಾನಗಳ ಹಿಂದೆಯೇ ಭಕ್ತಿ ಪಥದ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ದಾಸಶ್ರೇಷ್ಠರ ಈ ಆರಾಧನಾ ಮಹೋತ್ಸವದ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಕೆಳಕಂಡ ಇ-ಮೇಲ್‌ಗಳನ್ನು ಸಂಪರ್ಕಿಸಿ ಪಡೆಯಬಹುದು.
Vadiraja Bhat: vadi@sybase.com ,
Sandhya Kedlaya: skedlaya@hotmail.com ,
Harihareshwara: hoysala_usa@hotmail.com ,
Ashok Kumar helloashok@yahoo.com ,
Parimala Muralidhara: Parimala_murali@hotmail.com ,
Padmaja Kishore: kishore@gtelmedia.com ,
Srikanth Sampigethaya: sam@virlog.com ,
Nanda Kishore:
Nanda_Kishore_V_Vasanthakumar@notes.seagate.com ,
Hemmige Varadarajan: hemmige.d.varadarajan@intel.com ,
B.V. Muralidhara: bvmuralidhara@yahoo.com ,
Pandit Gajanana Joshi : (408) 734-4554
ಮುಖಪುಟ / ಸಾಹಿತ್ಯ ಸೊಗಡು