• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶ ಕಟ್ಟಿದ ಮಹಾನ್‌ ವ್ಯಕ್ತಿಗಳಿಗೆ ನಮಿಸುವ ಅಮೆರಿಕನ್‌ ಪ್ರೆಸಿಡೆಂಟ್‌ ಡೇ

By Staff
|

*ಯೋಗೇಶ್‌ ದೇವರಾಜ್‌

George Washingtonಫೆಬ್ರವರಿಯ ಮೂರನೇ ಸೋಮವಾರ ಅಮೆರಿಕನ್ನರಿಗೆ ಸಂಭ್ರಮದ ದಿನ. ಅದು ಅಮೆರಿಕದ ಮೊದಲನೆ ಅಧ್ಯಕ್ಷ ಜಾರ್ಜ್‌ ವಾಷಿಂಗ್ಟನ್‌ ಹಾಗೂ ಹದಿನಾರನೇ ಅಧ್ಯಕ್ಷ ಅಬ್ರಹಾಂ ಲಿಂಕನ್ನರನ್ನು ನೆನೆದು ಗೌರವಿಸುವ ಸುದಿನ; ಅಧ್ಯಕ್ಷರ ದಿನ!

ವಾಷಿಂಗ್ಟನ್‌ ಹಾಗೂ ಲಿಂಕನ್‌ ಇಬ್ಬರೂ ಇಲ್ಲಿಯವರೆಗೆ ಆಗಿ ಹೋದ ಅಧ್ಯಕ್ಷರಲ್ಲಿ ಅತ್ಯಂತ ಪ್ರಸಿದ್ಧರು ಹಾಗೂ ಪ್ರಭಾವಿಗಳು. ಮೆಚ್ಚಿನ ನಾಯಕರ ರಾಷ್ಟ್ರ ಭಕ್ತಿ ಹಾಗೂ ರಾಷ್ಟ್ರ ಕಾರ್ಯವನ್ನು ನೆನೆಯುವುದು ಅಮೆರಿಕನ್ನರ ಪಾಲಿಗೆ ಸಂಭ್ರಮದ ಕರ್ತವ್ಯ.

ಇವತ್ತು ಜಗತ್ತಿನ ಅತ್ಯಂತ ಶಕ್ತ ರಾಷ್ಟ್ರವಾಗಿ ಅಮೆರಿಕಾ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ ಹಾಗೂ ಲಿಂಕನ್ನರ ಅಪಾರ ಶ್ರಮವಿದೆ- ದೂರದೃಷ್ಟಿಯಿದೆ. ಆ ಕಾರಣದಿಂದಲೇ ಈ ಇಬ್ಬರು ನಾಯಕರು ಅಮೆರಿಕನ್ನರ ಪಾಲಿಗೆ ಅಚ್ಚುಮೆಚ್ಚು . ಅಂದಹಾಗೆ- ವಾಷಿಂಗ್ಟನ್‌, ಲಿಂಕನ್‌ ಅವರ ಸಾಧನೆಯಾದರೂ ಏನು?

ಅಪ್ಪಟ ಸ್ವಾತಂತ್ರ್ಯ ಪ್ರೇಮಿ, ಯೋಧ

ಜಾರ್ಜ್‌ ವಾಷಿಂಗ್ಟನ್‌ 1732 ಇಸವಿ ಫೆಬ್ರವರಿ 22ರಂದು ವರ್ಜೀನಿಯಾದ ರೈತ ಕುಟುಂಬದಲ್ಲಿ ಜನಿಸಿದನು. ಆಗ ಅಮೆರಿಕಾ ಬ್ರಿಟಿಷ್‌ ವಸಾತುಶಾಹಿ ರಾಷ್ಟ್ರವಾಗಿತ್ತು. ವಾಷಿಂಗ್ಟನ್‌ ತನ್ನ 20ರ ಹರೆಯದಲ್ಲಿ ಸೇನಾ ಪಡೆ ಸೇರಿ, ಫ್ರೆಂಚ್‌ ಮತ್ತು ಇಂಡಿಯನ್‌ ಯುದ್ಧಗಳಲ್ಲಿ ಭಾಗವಹಿಸಿದನು. ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದ ದೇಶವಾಸಿಗಳು ವಾಷಿಂಗ್ಟನ್‌ಗೆ ದಂಡನಾಯಕನಾಗುವಂತೆ ಒತ್ತಾಯಿಸಿದರು. ಎಂಟು ವರ್ಷನಡೆದ ದೀರ್ಘ ಯುದ್ಧದಲ್ಲಿ ಗೆದ್ದ ನಂತರ ಹುಟ್ಟಿಕೊಂಡ ಹೊಸ ರಾಷ್ಟ್ರವೇ ಅಮೆರಿಕ. ಸ್ವಾತಂತ್ರ್ಯ ಹೋರಾಟದ ನಾಯಕನಾಗಿದ್ದ ವಾಷಿಂಗ್ಟನ್‌ ಅಮೆರಿಕ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷ . ಆತ ರಾಷ್ಟ್ರ ಪಿತಾಮಹನೂ ಹೌದು. ಎಂಟು ವರ್ಷ ವಾಷಿಂಗ್ಟನ್‌ ದೇಶನಾಯಕನಾಗಿದ್ದು ನಿವೃತ್ತನಾದನು. 1799ರ ಡಿಸೆಂಬರ್‌ 14ರಲ್ಲಿ ವಾಷಿಂಗ್ಟನ್‌ ಮರಣ ಹೊಂದಿದನು.

Abraham Lincolnಇವನು ರಾಷ್ಟ್ರ ಸುಧಾರಣೆಯ ಕನಸ ಕಂಡವನು

ಅಬ್ರಾಹಂ ಲಿಂಕನ್‌ 1809ರ ಫೆಬ್ರವರಿ 12ರಂದು ಕೆಂಟಕಿಯಲ್ಲಿ ಜನಿಸಿದ. ಎಬ್‌ ಎಂದು ಕರೆಯಲ್ಪಡುತ್ತಿದ್ದ ಲಿಂಕನ್‌ ಸಂಭಾವಿತ ವ್ಯಕ್ತಿ. ಶ್ರಮಜೀವಿ. ಪೋಸ್ಟ್‌ ಮ್ಯಾನ್‌ ಆಗಿ ವೃತ್ತಿಜೀವನದ ಆರಂಭ. ನಂತರ ಲಾಯರ್‌ ಆಗಿ, ಇಲಿನಾಯ್‌ನ ಶಾಸಕನಾಗಿ, ಅಮೆರಿಕದ ಕಾಂಗ್ರೆಸ್‌ಮೆನ್‌ ಆಗಿ ದುಡಿದ ಲಿಂಕನ್‌ 1861ರಲ್ಲಿ ರಾಷ್ಟ್ರಾಧ್ಯಕ್ಷ ಪಟ್ಟವನ್ನೇರಿದ.

ಲಿಂಕನ್‌ ಪದವಿಗೇರಿದ ತಿಂಗಳೊಳಗೆ ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ಸಿವಿಲ್‌ ವಾರ್‌ ಶುರುವಾಯಿತು. ಲಿಂಕನ್‌ನ ಬೆಂಬಲ ಪಡೆದ ಉತ್ತರ ರಾಜ್ಯ ಯುದ್ಧದಲ್ಲಿ ಜಯಗಳಿಸಿತು.

ಗುಲಾಮಗಿರಿಯನ್ನು ನಿರ್ಮೂಲನೆ ಮಾಡಿ, ವರ್ಣಬೇಧವನ್ನು ಅಳಿಸಿ , ರಾಷ್ಟ್ರದ ಒಗ್ಗಟ್ಟನ್ನು ಕಾಪಾಡಿದ ಹಿರಿಮೆ ಲಿಂಕನ್‌ನದು. ಪ್ರಜೆಗಳ, ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ, ಎಂಬ ಪ್ರಜಾಪ್ರಭುತ್ವ ಘೋಷಣೆಯನ್ನು ಹುಟ್ಟುಹಾಕಿದವನು ಲಿಂಕನ್‌. ರಾಷ್ಟ್ರದಲ್ಲಿ ಸುಧಾರಣೆಗಳನ್ನು ತರಲು ಯಾವತ್ತೂ ಉತ್ಸುಕನಾಗಿದ್ದ ಲಿಂಕನ್‌, 1865ರಲ್ಲಿ ಲಿಂಕನ್‌ ಹಂತಕನ ಗುಂಡಿಗೆ ಬಲಿಯಾದನು.

ಇಬ್ಬರು ಮಹಾನ್‌ ವ್ಯಕ್ತಿಗಳ ಆದರ್ಶ

ಸ್ವಾತಂತ್ರ್ಯ ಸಿಕ್ಕಿ 225 ವರ್ಷಗಳ ನಂತರವೂ ಈ ಇಬ್ಬರು ಮಹಾನ್‌ ವ್ಯಕ್ತಿಗಳನ್ನು ಅಮೆರಿಕನ್ನರು ತಮ್ಮ ನಿತ್ಯ ಜೀವನದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಮುಖ ವಿಶ್ವವಿದ್ಯಾಲಯಗಳು, ಶಾಲಾ ಕಾಲೇಜುಗಳು, ಸೇತುವೆಗಳು, ಗ್ರಂಥಾಲಯಗಳು, ಕಟ್ಟಡಗಳು, ಆಸ್ಪತ್ರೆಗಳು ಈ ಮಹಾನ್‌ ದಿಗ್ಗಜರ ಹೆಸರನ್ನು ಹೊಂದಿವೆ.

ಅಮೆರಿಕಾದ ರಾಜಧಾನಿ ವಾಷಿಂಗ್ಟನ್‌ ಡಿಸಿ ಅಂದರೆ ವಾಷಿಂಗ್ಟನ್‌ ಡಿಸ್ಟ್ರಿಕ್ಟ್‌ ಆಫ್‌ ಕೊಲಂಬಿಯಾ . ರಾಜಧಾನಿಯ ಕೇಂದ್ರ ಬಿಂದು ವಾಷಿಂಗ್ಟನ್‌ ಮಾನ್ಯುಮೆಂಟ್‌. ಪ್ರಸಿದ್ಧ ಸೇತುಗಳಲ್ಲೊಂದಾದ, ನ್ಯೂಯಾರ್ಕ್‌ನ ವಾಷಿಂಗ್ಟನ್‌ ಬ್ರಿಡ್ಜ್‌. ಪ್ರಭಾವೀ ಪತ್ರಿಕೆ ವಾಷಿಂಗ್ಟನ್‌ ಪೋಸ್ಟ್‌, ಪ್ರಮುಖ ವಿವಿ ವಾಷಿಂಗ್ಟನ್‌ ಯೂನಿವರ್ಸಿಟಿ... ಹೀಗೆ ವಾಷಿಂಗ್ಟನ್‌ಗೆ ಎಲ್ಲ ಕಡೆಯೂ ಗೌರವ.

ಪಶ್ಚಿಮದಲ್ಲಿನ ಸಿಯಾಟನ್‌ ನಗರವನ್ನು ಹೊಂದಿರುವ ವಾಷಿಂಗ್ಟನ್‌ ರಾಷ್ಟ್ರಾಧ್ಯಕ್ಷನ ಹೆಸರನ್ನು ಹೊಂದಿರುವ ಏಕೈಕ ರಾಜ್ಯ. ರಾಜಧಾನಿಯಲ್ಲಿನ ಲಿಂಕನ್‌ ಮೆಮೋರಿಯಲ್‌, ಇಂಡಿಯಾನಾದ ಫೋರ್ಟ್‌ ವೆಯನ್‌ನಲ್ಲಿರುವ ಲಿಂಕನ್‌ ಮ್ಯೂಸಿಯಂ- ಸ್ಮಾರಕಗಳು ಲಿಂಕನ್‌ ಹೆಸರನ್ನು ಹಸಿರಾಗಿಸಿವೆ. ಹಾಗೇ, ವಾಷಿಂಗ್ಟನ್‌ ಮತ್ತು ಲಿಂಕನ್ನರು ಅಮೆರಿಕನ್‌ ಡಾಲರ್‌ಗಳಲ್ಲಿಯೂ ನಗುತ್ತಾರೆ. ದೇಶವನ್ನು ಉನ್ನತಿಗೇರಿಸಿದ ನಾಯಕರಿಗೆ ಅಮೆರಿಕದಲ್ಲಿ ನಿತ್ಯ ನಮನ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X